Home ಕರ್ನಾಟಕ ವೀರಶೈವ ಮಹಾಸಭಾ ಚುನಾವಣೆ ಫೆ. 14ಕ್ಕೆ ಮುಂದೂಡಿಕೆ

ವೀರಶೈವ ಮಹಾಸಭಾ ಚುನಾವಣೆ ಫೆ. 14ಕ್ಕೆ ಮುಂದೂಡಿಕೆ

84
0

ಬೆಂಗಳೂರು:

ಅಖಿಲ ಭಾರತ ವೀರಶೈವ ಮಹಾ ಸಭಾ ಚುನಾವಣೆಯನ್ನು ಬರುವ ಫೆಬ್ರವರಿ 14ಕ್ಕೆ ಮುಂದೂಡಲಾಗಿದೆ.

ರಾಜ್ಯದಲ್ಲಿ ಇದೇ 22 ಮತ್ತು 27 ರಂದು ಗ್ರಾಮ ಪಂಚಾಯತ್ ಗೆ ಚುನಾವಣೆ ನಡೆಯಲಿದ್ದು, ಇದೇ ದಿನಾಂಕಗಳಂದು ಮಹಾ ಸಭಾ ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅದೇ ದಿನ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಚುನಾವಣೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಜನವರಿ 28 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆಬ್ರವರಿ 2 ಉಮೇದುವಾರಿಕೆ ಸಲ್ಲಿಕೆಗೆ ಕಡೆಯ ದಿನವಾಗಿದೆ. ಮರುದಿನ ಪರಿಶೀಲನೆ ನಡೆಯಲಿದ್ದು, ಫೆ,. 6 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. 14 ರಂದು ಮತದಾನ ನಡೆದು ಅಂದೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here