ಬೆಂಗಳೂರು:
ಹಾಲಿವುಡ್ ಚಿತ್ರ ‘ಆರ್ಫನ್’ ಅನ್ನು ಹೋಲುವ ಘಟನೆಯೊಂದರಲ್ಲಿ, ದತ್ತು ಪುತ್ರನೊಬ್ಬ ತನ್ನ ತಾಯಿಯನ್ನು ಸುಟ್ಟುಹಾಕಿದ್ದು, ತನ್ನ ತಂದೆಗೂ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಸದ್ಯ ಆತನನ್ನು ಬಂಧಿಸಲಾಗಿದೆ.
ಆರೋಪಿಯನ್ನು ಉತ್ತಮ್ ಕುಮಾರ್ ಎಂದು ಗುರುತಿಸಲಾಗಿದೆ. ಮಂಜುನಾಥ್ ಮತ್ತು ಆತನ ಪತ್ನಿಯು ತಮಗೆ ಮಕ್ಕಳಿಲ್ಲದ ಕಾರಣ ಆರೋಪಿಯನ್ನು ದತ್ತು ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Also Read: Adopted son torches mother, gives life threat to father in Bengaluru
ಆದರೆ, ಉತ್ತಮ್ ಕುಮಾರ್ ಪೋಷಕರಿಗೆ ಅಗೌರವ ತೋರಿ ಅವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದನು. 2018ರಲ್ಲಿ ತನ್ನ ದತ್ತು ಪಡೆದ ತಾಯಿಯನ್ನು ಸುಟ್ಟು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರ ಜೈಲು ಪಾಲಾಗಿದ್ದ ಮತ್ತು ಬಿಡುಗಡೆಯಾದ ಬಳಿಕ ತಂದೆಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ತಂದೆ ಮಂಜುನಾಥ್ ಐದು ಮನೆಗಳನ್ನು ಹೊಂದಿದ್ದು, ಅವುಗಳಿಂದ ಬರುವ ಬಾಡಿಗೆ ಹಣವನ್ನು ತಾನು ಪಡೆಯಬೇಕೆಂದು ಆರೋಪಿ ಬಯಸಿದ್ದನು. ಮಂಜುನಾಥ್ ಇದಕ್ಕೆ ನಿರಾಕರಿಸಿದಾಗ ಅವರಿಗೆ ಜೀವ ಬೆದರಿಕೆಯೊಡ್ಡಿದ್ದಾನೆ.
ಆರೋಪಿಯು ಬಾಡಿಗೆದಾರನ ಬಳಿಗೆ ಹೋಗಿ ಆಯುಧ ತೋರಿಸಿದ್ದು, ಆತನಿಗೆ ಮಾತ್ರ ಬಾಡಿಗೆ ನೀಡುವಂತೆ ಬೆದರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆತನನ್ನು ಬಂಧಿಸಲು ಹೋದಾಗ ಹೈ ಟೆನ್ಷನ್ ನಾಟಕ ನಡೆಯಿತು.
ಸದಾಶಿವನಗರ ಪೊಲೀಸರು ಆತನನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ