ಬೆಂಗಳೂರು:
ವಿ.ವಿ ಪುರಂನ ಪಾರ್ವತಿಪುರದಲ್ಲಿ ನಡೆದಿದ್ದ ನಿವೃತ್ತ ಉಪ ತಹಶಿಲ್ದಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ವಿ. ಪುರಂ ಪೊಲೀಸರು ಮತ್ತೊಬ್ಬ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಉತ್ತರ ಪ್ರದೇಶದ ನಿವಾಸಿ ಇಬ್ರಾಹಿಂ ಖಾನ್ (45).
ಈ ಸಂಬಂಧ ಈಗಾಗಲೇ ಆಲಿಂ ಪಾಶಾ, ಜೆರಾನ್ ಪಾಶಾ ಹಾಗೂ ಅಶ್ರಫುನ್ನೀಸಾ ಎಂಬಾಕೆಯನ್ನ ಬಂಧಿಸಲಾಗಿತ್ತು. ಇದೀಗ ಅಲಿಂ ಪಾಶಾಗೆ ನೆರವು ನೀಡಿದ ಆರೋಪದ ಮೇಲೆ ಇಬ್ರಾಹಿಂ ಖಾನ್ನನ್ನು ಬಂಧಿಸಲಾಗಿದೆ.
ಬಾಡಿಗೆ ಕೊಡುವಂತೆ ಕೇಳಿದ್ದಕ್ಕೆ ನಿವೃತ್ತ ಉಪ ತಹಶಿಲ್ದಾರ್ ಕೆ.ರಾಜೇಶ್ವರಿ ಎಂಬುವವರನ್ನು ಜನವರಿ 3ರಂದು ಹತ್ಯೆ ಮಾಡಲಾಗಿತ್ತು. ಬಳಿಕ ಆರೋಪಿಗಳು ಶವವನ್ನು ಅಂಚೆಪಾಳ್ಯದ ಬಳಿ ಕೊಂಡೊಯ್ದು ಸುಟ್ಟು ಹಾಕಿದ್ದರು.
ಇದನ್ನು ಓದು: ಬಾಡಿಗೆ ಕೇಳಿದ ಮನೆಯೊಡತಿಯ ಕತ್ತುಕೊಯ್ದು ಸುಟ್ಟು ಹಾಕಿದ ಬಾಡಿಗೆದಾರರು https://kannada.thebengalurulive.com/house-owner-murdered-and-burned-for-asking-rent/