Home Uncategorized ARG vs FRA FIFA Final Live Streaming: ಇಂದು ಅರ್ಜೆಂಟೀನಾ vs ಫ್ರಾನ್ಸ್ ಫಿಫಾ...

ARG vs FRA FIFA Final Live Streaming: ಇಂದು ಅರ್ಜೆಂಟೀನಾ vs ಫ್ರಾನ್ಸ್ ಫಿಫಾ ವಿಶ್ವಕಪ್ ಫೈನಲ್: ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?

3
0
bengaluru

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ (FIFA World Cup) ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ 08.30ಕ್ಕೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಅರ್ಜೆಂಟೀನಾ ಹಾಗೂ ಫ್ರಾನ್ಸ್ (Argentina vs France) ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ. ಲುಸೈಲ್‌ ಕ್ರೀಡಾಂಗಣದಲ್ಲಿ 88 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಈ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದೆ. ಗುಂಪು ಹಂತದಲ್ಲಿ ಸೌಧಿ ಅರೇಬಿಯಾ ವಿರುದ್ಧ ಅಚ್ಚರಿಯ ಸೋಲಿನ ಆಘಾತ ಅನುಭವಿಸಿ ಬಳಿಕ ಪುಟಿದೆದ್ದು ಫೈನಲ್ ತಲುಪಿರುವ ಲಿಯೊನೆಲ್ ಮೆಸ್ಸಿ (Lionel Messi) ನಾಯಕತ್ವದ ಅರ್ಜೆಂಟೀನಾ ಪ್ರಶಸ್ತಿ ಗೆಲ್ಲುವ ಗೆಲ್ಲುವ ನೆಚ್ಚಿನ ತಂಡ. ಅಲ್ಲದೆ ಇದು ಮೆಸ್ಸಿ ಅವರ ಕೊನೆಯ ಪಂದ್ಯವಾಗಿದ್ದು, ಈ ಪಂದ್ಯದ ಬಳಿಕ ಅಂತರರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ಮೂರನೇ ಟ್ರೋಫಿ ಗೆಲ್ಲಬೇಕೆಂಬ ಕನಸಿನೊಂದಿಗೆ ಅರ್ಜೆಂಟೀನಾ ಮತ್ತು ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡಗಳು ಕಣಕ್ಕಿಳಿಯಲಿದೆ. ಆಧುನಿಕ ಫುಟ್‌ಬಾಲ್‌ನ ಶ್ರೇಷ್ಠ ಆಟಗಾರರಲ್ಲೊಬ್ಬರಾದ ಮೆಸ್ಸಿ ಹಾಗೂ ಮುಂದಿನ ದಿನಗಳಲ್ಲಿ ಫುಟ್‌ಬಾಲ್‌ ಜಗತ್ತನ್ನು ಆಳಲು ಸಜ್ಜಾಗಿರುವ ಎಂಬಾಪೆ ನಡುವಿನ ಹೋರಾಟದಿಂದಾಗಿ ಫೈನಲ್‌ ಪಂದ್ಯದ ರೋಚಕತೆ ಹೆಚ್ಚಿದೆ. ಎರಡೂ ತಂಡಗಳಲ್ಲಿ ಘಟಾನುಘಟಿ ಆಟಗಾರರು ಇದ್ದರೂ, ಎಲ್ಲರ ಚಿತ್ತ ಇವರಿಬ್ಬರ ಮೇಲೆ ನೆಟ್ಟಿದೆ.

ಫಿಫಾ ವಿಶ್ವಕಪ್ ಫೈನಲ್​ಗೂ ಮುನ್ನ ಭಾರತದಲ್ಲಿ ಸಖತ್ ಟ್ರೆಂಡ್ ಆದ ಎಸ್​ಬಿಐ ಪಾಸ್​ಬುಕ್..! ಕಾರಣವೇನು?

ಈ ಬಾರಿ ಅರ್ಜೆಂಟೀನಾದ ಸೆಮೀಸ್ ಹಾದಿ ರೋಚಕವಾಗಿತ್ತು. ಮೊದಲಿಗೆ ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲು, ನಂತರ ಮೆಕ್ಸಿಕೋ ವಿರುದ್ಧ 2-0 ಅಂತರ ಗೆಲುವು, ಪೋಲೆಂಡ್ ವಿರುದ್ಧವೂ 2-0 ಅಂತರದ ಜಯದೊಂದಿಗೆ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಪ್ರಿ ಕ್ವಾರ್ಟರ್ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವು ಪಡೆದು ಕ್ವಾರ್ಟರ್ ಫೈನಲ್​ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಶೂಟೌಟಲ್ಲಿ 4-3 ಅಂತರದ ರೋಚಕ ಗೆಲುವು ಸಾಧಿಸಿತ್ತು. ಅರ್ಜೆಂಟೀನಾ ತಾನಾಡಿರುವ ಐದು ವಿಶ್ವಕಪ್​ಗಳ ಸೆಮಿ ಫೈನಲ್​ನಲ್ಲಿ ಒಂದೇ ಒಂದು ಸೋಲುಂಡಿರಲಿಲ್ಲ. ಇದೇ ದಾಖಲೆಯನ್ನು ಮುಂದುವರೆಸಿ ಸೆಮೀಸ್​ನಲ್ಲಿ ಕ್ರೊಯೇಷಿಯಾ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿ ಫೈನಲ್​ಗೇರಿತು.

bengaluru

ಫ್ರಾನ್ಸ್ ತಂಡದಲ್ಲಿ ಎಂಬಾಪೆ ಅಲ್ಲದೆ ಒಲಿವಿಯೆರ್‌ ಜಿರೋಡ್, ಆಂಟೋನ್‌ ಗ್ರೀಸ್‌ಮನ್‌ ಮತ್ತು ಉಸ್ಮಾನ್‌ ದೆಂಬೆಲೆ ಅವರು ಫ್ರಾನ್ಸ್‌ ಪರ ಮಿಂಚುವ ವಿಶ್ವಾಸದಲ್ಲಿದ್ದರೆ, ಅರ್ಜೆಂಟೀನಾ ತಂಡ ಜೂಲಿಯನ್‌ ಅಲ್ವರೆಜ್‌, ಗೋಲ್‌ಕೀಪರ್‌ ಎಮಿಲಿಯಾನೊ ಮಾರ್ಟಿನೆಜ್‌ ಹಾಗೂ ಎಂಜೊ ಫೆರ್ನಾಂಡಿಜ್‌ ಅವರ ಮೇಲೂ ಭರವಸೆ ಇಟ್ಟಿದೆ. ಫ್ರಾನ್ಸ್‌ ಗೆದ್ದರೆ ಎಂಬಾಪೆ, ಬ್ರೆಜಿಲ್‌ನ ದಿಗ್ಗಜ ಆಟಗಾರ ಪೆಲೆ ಅವರ ದಾಖಲೆ ಸರಿಗಟ್ಟಲಿದ್ದಾರೆ. ಪೆಲೆ ತಾವಾಡಿದ ಮೊದಲ ಎರಡು ವಿಶ್ವಕಪ್‌ ಟೂರ್ನಿಗಳಲ್ಲಿ ಟ್ರೋಫಿ ಜಯಿಸಿದ್ದರು.

ಗೋಲ್ಡನ್ ಬೂಟ್ ಯಾರಿಗೆ?:

ಈ ಬಾರಿ ಯಾರು ಹೆಚ್ಚು ಗೋಲು ಗಳಿಸಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆಲ್ಲುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಪ್ರಶಸ್ತಿಗಾಗಿ ಲಿಯೊನೆಲ್ ಮೆಸ್ಸಿ ಹಾಗೂ ಫ್ರಾನ್ಸ್ ಆಟಗಾರ ಎಂಬಾಪೆ ನಡುವೆ ಪೈಪೋಟಿ ಏರ್ಪಟ್ಟಿದೆ. ಮೆಸ್ಸಿ ಈ ಬಾರಿಯ ವಿಶ್ವಕಪ್‌ನಲ್ಲಿ ಐದು ಗೋಲು ಗಳಿಸಿದ್ದರು. ಇವರೊಂದಿಗೆ ಫ್ರಾನ್ಸ್ ಆಟಗಾರ ಎಂಬಾಪೆ ಕೂಡ ಮೆಸ್ಸಿಗೆ ಸಮಾನವಾದ ಐದು ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇವರಿಬ್ಬರಲ್ಲಿ ಯಾರಿಗೆ ಗೋಲ್ಡನ್ ಬೂಟ್ ಸಿಗಲಿದೆ ಎಂಬುದು ಅಂತಿಮ ಹೋರಾಟದಲ್ಲಿ ನಿರ್ಧಾರವಾಗಲಿದೆ. ಅವರ ನಂತರ ಜೂಲಿಯನ್ ಅಲ್ವಾರೆಜ್ (ಅರ್ಜೆಂಟೀನಾ) ಮತ್ತು ಒಲಿವಿಯರ್ ಗೆರಾಡ್ (ಫ್ರಾನ್ಸ್) ನಾಲ್ಕು ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೆಸ್ಸಿ ಮತ್ತು ಎಂಬಾಪೆ ಗೋಲ್ಡನ್ ಬೂಟ್‌ಗಾಗಿ ಟೈ ಆಗಿದ್ದರೆ, ಗೋಲ್ಡನ್ ಬೂಟ್ ವಿಜೇತರನ್ನು ಔಟ್‌ಫೀಲ್ಡ್ ಗೋಲುಗಳ ಮೂಲಕ ಘೋಷಿಸಲಾಗುತ್ತದೆ. ಈ ರೀತಿ ನೋಡಿದರೆ ಎಂಬಾಪೆ ಗೆಲ್ಲುವ ಅವಕಾಶ ಹೆಚ್ಚಿದೆ.

FIFA World Cup 2022: ಮೆಸ್ಸಿಗೆ ಇಂಜುರಿ! ಫ್ರಾನ್ಸ್ ವಿರುದ್ಧದ ವಿಶ್ವಕಪ್ ಫೈನಲ್​ ಪಂದ್ಯಕ್ಕೆ ಅಲಭ್ಯ..?

ಲುಸೈಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:30ಕ್ಕೆ ಶುರುವಾಗಲಿದೆ. ಸ್ಪೋರ್ಟ್ಸ್ 18 ಮತ್ತು ಸ್ಪೋರ್ಟ್ಸ್​ ಹೆಚ್​ಡಿ ಟಿವಿಯಲ್ಲಿ ನೇರಪ್ರಸಾರ ಕಾಣಲಿದೆ. ಅಲ್ಲದೆ ಜಿಯೋ ಸಿನಿಮಾ ಮೂಲಕವೂ ಲೈವ್ ವೀಕ್ಷಿಸಬಹುದು.

ಕ್ರೊವೇಷಿಯಾ ಮೂರನೇ ಸ್ಥಾನ:

ಕ್ರೊವೇಷಿಯಾ ತಂಡ ಫಿಫಾ ವಿಶ್ವಕಪ್​ನ ಪ್ಲೇ ಆಫ್​ ಪಂದ್ಯದಲ್ಲಿ ಗೆಲುವು ಸಾಧಿಸಿ ಮೂರನೇ ಸ್ಥಾನ ಪಡೆದುಕೊಂಡಿದೆ. ಶನಿವಾರ ರಾತ್ರಿ ನಡೆದ ಮೂರನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ 2-1 ಗೋಲ್​ಗಳ ಜಯ ಸಾಧಿಸಿತು. ಈ ಮೂಲಕ ವಿಶ್ವಕಪ್​ ಇತಿಹಾಸದಲ್ಲಿ ಮೂರನೇ ಬಾರಿ ಟಾಪ್​ 3 ಸ್ಥಾನ ಗಿಟ್ಟಿಸಿಕೊಂಡಿತು. ಕಳೆದ ಆವೃತ್ತಿಯ ವಿಶ್ವಕಪ್​ನಲ್ಲಿ ಕ್ರೊವೇಷಿಯಾ ರನ್ನರ್​ ಅಪ್​ ಸ್ಥಾನ ಪಡೆದುಕೊಂಡಿದ್ದರೆ, 1998ರಲ್ಲಿ ನೆದರ್ಲೆಂಡ್ಸ್​ ತಂಡವನ್ನು 2-1 ಗೋಲ್​ಗಳಿಂದ ಸೋಲಿಸಿ ಎರಡನೇ ರನ್ನರ್​ಅಪ್​ ಸ್ಥಾನ ಪಡೆದುಕೊಂಡಿತ್ತು. ಗೆದ್ದ ಕ್ರೊವೇಷಿಯಾ ತಂಡಕ್ಕೆ 225 ಕೋಟಿ ರೂಪಾಯಿ ಬಹುಮಾನ ಲಭಿಸಿದೆ. ನಾಲ್ಕನೇ ಸ್ಥಾನ ಪಡೆದ ಮೊರಾಕ್ಕೊಗೆ 205 ಕೋಟಿ ರೂಪಾಯಿ ಬಹುಮಾನ ನೀಡಲಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here