Home Uncategorized Argentina: ಓಪನ್ ಬಸ್​ನಲ್ಲಿ ಮೆಸ್ಸಿ ಬಾಯ್ಸ್: ತವರಿಗೆ ಬಂದ ಅರ್ಜೇಂಟಿನಾ ತಂಡಕ್ಕೆ ಸಿಕ್ಕಿತು ಅದ್ಧೂರಿ ಸ್ವಾಗತ

Argentina: ಓಪನ್ ಬಸ್​ನಲ್ಲಿ ಮೆಸ್ಸಿ ಬಾಯ್ಸ್: ತವರಿಗೆ ಬಂದ ಅರ್ಜೇಂಟಿನಾ ತಂಡಕ್ಕೆ ಸಿಕ್ಕಿತು ಅದ್ಧೂರಿ ಸ್ವಾಗತ

24
0

ಈ ಬಾರಿಯ ಫಿಫಾ ವಿಶ್ವಕಪ್ (FIFA World Cup) ಫೈನಲ್ ಪಂದ್ಯ ಹಿಂದಿನ ಎಲ್ಲ ಟೂರ್ನಿಗಿಂತ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇದಕ್ಕೆ ಮುಖ್ಯ ಕಾರಣ ಇದು ಅರ್ಜೇಂಟಿನಾ (Argentina) ತಂಡದ ನಾಯಕ ಲಿಯೊನಲ್ ಮೆಸ್ಸಿ ಅವರು ಕೊನೆಯ ಪಂದ್ಯ ಎಂಬುದು. ಹೀಗಾಗಿ ಬಹುತೇಕ ಫುಟ್​ಬಾಲ್ ಪ್ರಿಯರ ಆಶಯ ಫ್ರಾನ್ಸ್ ವಿರುದ್ಧ ಅರ್ಜೇಂಟಿನಾ ತಂಡ ಗೆಲ್ಲಲಿ ಎಂಬುದು ಆಗಿತ್ತು. ಅದರಂತೆ ದೋಹಾದ ಲುಸೈಲ್‌ ಕ್ರೀಡಾಂಗಣದಲ್ಲಿ ಮೆಸ್ಸಿ ಬಳಗ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯನ್ನು ಗೆದ್ದು ಟ್ರೋಫಿ ಎತ್ತಿಹಿಡಿದಾಗ, ಅತ್ತ ಅರ್ಜೆಂಟೀನಾದಲ್ಲಿ ಜನರು ಸಂಕಷ್ಟ ಮರೆತು ಸಂಭ್ರಮಿಸಿದರು. ಬರೋಬ್ಬರಿ 20 ಲಕ್ಷದಷ್ಟು ಮಂದಿ ಬೀದಿಯಲ್ಲಿ ಕುಣಿದು ಕುಪ್ಪಳಿಸಿದರು. ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯ ನಾಗರಿಕರೂ ಈ ಫುಟ್‌ಬಾಲ್‌ (Football) ಖುಷಿಯಲ್ಲಿ ತೇಲಾಡಿದರು. ಇದೀಗ ತವರಿಗೆ ಬಂದ ಮೆಸ್ಸಿ ಬಳಗಕ್ಕೆ ಅರ್ಜೇಂಟಿನಾದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

ತೆರೆದ ಬಸ್​ನಲ್ಲಿ ಅರ್ಜೇಂಟಿನಾ ತಂಡದ ಆಟಗಾರರು ತವರಿನ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಇವರನ್ನು ಸ್ವಾಗತಿಸಲು ಕಿಲೋ ಮೀಟರ್​ನಷ್ಟು ಉದ್ದಕ್ಕೆ ಜನರು ಸಾಲಾಗಿ ನಿಂತಿದ್ದರು. ಎಲ್ಲ ಕಟ್ಟಡಗಳ ಮೇಲೂ ಆರ್ಜೆಂಟೀನಾದ ಬೃಹತ್‌ ಜೆರ್ಸಿ, ಎಲ್ಲರ ಮೈಮೇಲೂ ಆರ್ಜೆಂಟೀನಾದ ಫ‌ುಟ್‌ಬಾಲ್‌ ದಿರಿಸು, ಕೈಯಲ್ಲಿ ರಾಷ್ಟ್ರಧ್ವಜ ಕ್ರಿಸ್‌ಮಸ್‌ಗೂ ಮೊದಲೇ ಕಂಡುಬಂದ ಈ ಸಂಭ್ರಮದ ವಾತಾವರಣ ಆರ್ಜೆಂಟೀನಾದಲ್ಲಿ ಮಹಾಅಲೆಯನ್ನೇ ಎಬ್ಬಿಸಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

 

The Argentina open-top bus is on its way for the parade!pic.twitter.com/ahi0i8n2m1

— infosfcb  (@infosfcb) December 20, 2022

ಪ್ರಬಲ ಪೈಪೋಟಿ ನಡೆದ ಫೈನಲ್‌ನ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2-2 ರಲ್ಲಿ ಹಾಗೂ ಹೆಚ್ಚುವರಿ ಅವಧಿಯ ಬಳಿಕ 3-3 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಅರ್ಜೆಂಟೀನಾ ಪರ ಮೆಸ್ಸಿ ಎರಡು ಹಾಗೂ ಏಂಜೆಲ್‌ ಡಿ ಮರಿಯಾ ಒಂದು ಗೋಲು ಗಳಿಸಿದ್ದರು. ಫ್ರಾನ್ಸ್‌ ತಂಡದ ಮೂರೂ ಗೋಲುಗಳನ್ನು ಕಿಲಿಯನ್‌ ಎಂಬಾಪೆ ತಂದಿತ್ತಿದ್ದರು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಅದೃಷ್ಟ ಅರ್ಜೆಂಟೀನಾಕ್ಕೆ ಒಲಿದಿತ್ತು. 36 ವರ್ಷಗಳ ಬಳಿಕ ಅರ್ಜೇಂಟಿನಾ ವಿಶ್ವಕಪ್‌ ಗೆದ್ದು ಬೀಗಿತು.

ವಿಶ್ವಕಪ್ ಬಹುಮಾನದ ಮೊತ್ತ 3600 ಕೋಟಿ! ಮೆಸ್ಸಿ ತಂಡಕ್ಕೆ ಸಿಕ್ಕಿದೆಷ್ಟು? ಫ್ರಾನ್ಸ್ ಗೆದ್ದಿದ್ದೆಷ್ಟು? ಇಲ್ಲಿದೆ ವಿವರ

ಭಾರತದಲ್ಲಿ ಇತಿಹಾಸ ನಿರ್ಮಿಸಿದ ಫಿಫಾ ಫೈನಲ್:

ಭಾರತದಲ್ಲಿ ಕ್ರಿಕೆಟ್​ಗೆ ಇರುವಷ್ಟು ಕ್ರೇಜ್ ಮತ್ಯಾವ ಕ್ರೀಡೆಗೂ ಇಲ್ಲ. ದೇಶದಲ್ಲಿ ಫುಟ್​​ಬಾಲ್​​ ನೋಡುವುದೇ ವಿರಳ. ಹೀಗಿರುವಾಗ ಫಿಫಾ ವಿಶ್ವಕಪ್ ಫೈನಲ್​ ಪಂದ್ಯ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಜಿಯೋ ಸಿನಿಮಾದಲ್ಲಿ ಪ್ರಸಾರವಾದ ಅರ್ಜೆಂಟೀನಾ-ಫ್ರಾನ್ಸ್ ನಡುವಿನ ಫೈನಲ್​​​​​​ ಪಂದ್ಯವನ್ನ ಭಾರತದಲ್ಲಿ ಸುಮಾರು 3.2 ಕೋಟಿ ಜನರು ಡಿಜಿಟಲಿಯಾಗಿ ವೀಕ್ಷಿಸಿದ್ದಾರೆ. ಇದು ಭಾರತದ ಫುಟ್​ಬಾಲ್​ ಇತಿಹಾಸದಲ್ಲಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎನಿಸಿದೆ. ಅಂತೆಯೆ ಕತಾರ್‌ನಲ್ಲಿ ನಡೆದ ಈ ಬಾರಿಯ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯನ್ನು ಕ್ರೀಡಾಂಗಣಗಳಲ್ಲಿ 34 ಲಕ್ಷಕ್ಕಿಂತ ಹೆಚ್ಚು ಜನ ವೀಕ್ಷಿಸಿದ್ದಾರೆ. ಅತಿ ಹೆಚ್ಚು ಜನ ವೀಕ್ಷಿಸಿದ ಆವೃತ್ತಿಗಳಲ್ಲಿ ಇದೂ ಒಂದೆನಿಸಿಕೊಂಡಿದೆ. ಲುಸೈಲ್‌ನಲ್ಲಿ ನಡೆದ ಫೈನಲ್ ಪಂದ್ಯಕ್ಕೆ 88,966 ಜನ ಸಾಕ್ಷಿಯಾಗಿದ್ದರು. ಒಟ್ಟು 34 ಲಕ್ಷ ಜನ ಟೂರ್ನಿಯನ್ನು ವೀಕ್ಷಿಸಿದ್ದು, ಕ್ರೀಡಾಂಗಣಗಳ ಆಸನ ಸಾಮರ್ಥ್ಯದ ಶೇಕಡ 96.3 ಆಗಿದೆ ಎಂದು ಫಿಫಾ ತಿಳಿಸಿದೆ. 1994ರಲ್ಲಿ ಅಮೆರಿಕದಲ್ಲಿ ನಡೆದ ಟೂರ್ನಿಗೆ 35 ಲಕ್ಷಕ್ಕಿಂತ ಅಧಿಕ ಮಂದಿ ಸಾಕ್ಷಿಯಾಗಿದ್ದು, ಇದುವರೆಗಿನ ದಾಖಲೆಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here