Home Uncategorized Avatar 2: ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಅದ್ದೂರಿ ರಿಲೀಸ್​; ಆದರೆ ಮೊದಲ...

Avatar 2: ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಅದ್ದೂರಿ ರಿಲೀಸ್​; ಆದರೆ ಮೊದಲ ದಿನವೇ ಪೈರಸಿ ಕಾಟ

11
0
Advertisement
bengaluru

ಹಾಲಿವುಡ್​ ಸಿನಿಪ್ರಿಯರು ಬಹಳ ವರ್ಷಗಳಿಂದ ಕಾದಿದ್ದ ‘ಅವತಾರ್​ ದಿ ವೇ ಆಫ್​ ವಾಟರ್​’ (Avatar The Way of Water) ಸಿನಿಮಾ ಬಿಡುಗಡೆ ಆಗಿದೆ. ಭಾರತದಲ್ಲಿ ಇಂದು (ಡಿ.16) ಪ್ರದರ್ಶನ ಆರಂಭ ಆಗಿದೆ. ಹಲವು ರಾಷ್ಟ್ರಗಳಲ್ಲಿ ಗುರುವಾರವೇ (ಡಿ.15) ಈ ಚಿತ್ರ ಬಿಡುಗಡೆ ಆಯಿತು. ಅನೇಕ ಪೈರಸಿ ವೆಬ್​ಸೈಟ್​ಗಳಲ್ಲಿ ಥಿಯೇಟರ್​ ಪ್ರಿಂಟ್​ ಲಭ್ಯವಾಗಿದೆ. ಕಳಪೆ ಗುಣಮಟ್ಟದ ಈ ನಕಲಿ ಕಾಪಿಗಳನ್ನು ಡೌನ್​ಲೋಡ್​ ಮಾಡಿದರೆ ಕಂಪ್ಯೂಟರ್​ಗೆ ಹಾನಿ ಮಾಡುವಂತಹ ವೈರಸ್​ಗಳು ದಾಳಿ ಇಡುವ ಅಪಾಯ ಹೆಚ್ಚಿದೆ. ಪೈರಸಿ ಕಾಟ ಎಷ್ಟೇ ಇದ್ದರೂ ‘ಅವತಾರ್​ 2’ (Avatar 2) ಚಿತ್ರದ ಬಿಸ್ನೆಸ್​ಗೆ ಹೊಡೆತ ಬಿದ್ದಿಲ್ಲ. ವಿಶ್ವಾದ್ಯಂತ ಈ ಸಿನಿಮಾ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಜೇಮ್ಸ್​ ಕ್ಯಾಮೆರಾನ್​ (James Cameron) ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.

‘ಟೈಟಾನಿಕ್​’, ‘ಅವತಾರ್​’ ಮುಂತಾದ ಸಿನಿಮಾಗಳ ಮೂಲಕ ದಾಖಲೆ ಬರೆದವರು ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​. ಪ್ರತಿ ಬಾರಿ ಅವರ ಹೊಸ ಸಿನಿಮಾ ರಿಲೀಸ್​ ಆದಾಗಲೂ ಸಿಕ್ಕಾಪಟ್ಟೆ ಕ್ರೇಜ್​ ಇರುತ್ತದೆ. ಅದು ಈ ಬಾರಿಯೂ ಮುಂದುವರಿದಿದೆ. ವಿಶ್ವಾದ್ಯಂತ 52 ಸಾವಿರ ಪರದೆಗಳಲ್ಲಿ ‘ಅವತಾರ್​ 2’ ರಿಲೀಸ್​ ಆಗಿದೆ. ಪ್ರಪಂಚದಲ್ಲೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಚಿತ್ರ ಎಂಬ ಖ್ಯಾತಿ ‘ಅವತಾರ್​’ ಸಿನಿಮಾಗಿದೆ. ಆ ದಾಖಲೆಯನ್ನು ‘ಅವತಾರ್​ 2’ ಮುರಿಯಲಿದೆಯೇ ಎಂಬ ಕೌತುಕ ಮೂಡಿದೆ.

ಇದನ್ನೂ ಓದಿ: Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು

ಈಗಾಗಲೇ ಅನೇಕ ಸೆಲೆಬ್ರಿಟಿಗಳು ‘ಅವತಾರ್​ 2’ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಭಾರತದ ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋ ಆಯೋಜಿಸಲಾಗಿತ್ತು. ಅಕ್ಷಯ್​ ಕುಮಾರ್​ ಅವರಿಗೆ ಈ ಚಿತ್ರ ತುಂಬ ಇಷ್ಟವಾಗಿದೆ. ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ ಅವರ ಪ್ರತಿಭೆಗೆ ಅಕ್ಷಯ್​ ಕುಮಾರ್​ ಭೇಷ್​ ಎಂದಿದ್ದಾರೆ. ಸಾವಿರಾರ ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಚಿತ್ರ ತಯಾರಾಗಿದೆ.

bengaluru bengaluru

ಇದನ್ನೂ ಓದಿ: Avatar 2: ಕನ್ನಡಿಗರ ಒತ್ತಾಯಕ್ಕೆ ಮಣಿದ ಹಾಲಿವುಡ್​ ನಿರ್ಮಾಪಕ; ಕನ್ನಡದಲ್ಲೂ ತೆರೆ ಕಾಣಲಿದೆ ‘ಅವತಾರ್​ 2’ ಚಿತ್ರ

ವಿಶ್ವದ ಹಲವು ಭಾಷೆಗಳಿಗೆ ‘ಅವತಾರ್​ 2’ ಸಿನಿಮಾ ಡಬ್​ ಆಗಿದೆ. ಭಾರತದಲ್ಲಿ ಇಂಗ್ಲಿಷ್​, ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್​ ಆಗಿದೆ. 2ಡಿ, 3ಡಿ, ಐಮ್ಯಾಕ್ಸ್​ 3ಡಿ, 4ಡಿಎಕ್ಸ್​ ಮುಂತಾದ ವರ್ಷನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

Watched #AvatarTheWayOfWater last night and Oh boy!!MAGNIFICENT is the word. Am still spellbound. Want to bow down before your genius craft, @JimCameron. Live on!

— Akshay Kumar (@akshaykumar) December 14, 2022

ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಸಿ ತಯಾರಾಗಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ. ಟಿಕೆಟ್​ ಬೆಲೆ ದುಬಾರಿ ಆಗಿದ್ದರೂ ಕೂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್​ ಮಾಡಿದ್ದಾರೆ. ಮೊದಲ ದಿನ ಬಹುತೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.


bengaluru

LEAVE A REPLY

Please enter your comment!
Please enter your name here