Home ರಾಜಕೀಯ ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರಗೆ 68399 ಮತಗಳ ಅಂತರಿಂದ ಗೆಲುವು

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರಗೆ 68399 ಮತಗಳ ಅಂತರಿಂದ ಗೆಲುವು

48
0
Bagalkot MP P C Gaddigoudar

ಬಾಗಲಕೋಟೆ: ಲೋಕಸಭಾ ಚುನಾವಣೆ-2024ರ ಮತ ಎಣಿಕೆ ಕಾರ್ಯ ಮಂಗಳವಾರ ನಡೆದಿದ್ದು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರ ಪ್ರತಿ ಸ್ಪರ್ಧಿ ಕಾಂಗ್ರೆಸ್‍ನ ಸಂಯುಕ್ತಾ ಪಾಟೀಲರಗಿಂತ 68399 ಮತಗಳ ಅಂತರಿಂದ ಗೆಲುವು ಸಾಧಿಸಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಒಟ್ಟು 671039 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ,

ಕಾಂಗ್ರೆಸ್‍ನ ಸಂಯುಕ್ತ ಪಾಟೀಲ 602640 ಮತಗಳನ್ನು ಪಡೆದು ಪರಾಜಯ ಹೊಂದಿದ್ದಾರೆ.

ಅದೇ ರೀತಿಯ ಬಹುಜನ ಸಮಾಜ ಪಕ್ಷದ ಎಂ.ಬಿ.ಸಿದಗೋನಿ 4479 ಮತಗಳನ್ನು ಪಡೆದರೆ, ಉತ್ತಮ ಪ್ರಜಾಕೀಯ ಪಕ್ಷದ ಅಂತೋಷ ಸವ್ವಾಸೆ 4923, ಸೋಷಿಯಾಲಿಸ್ಟ ಯುನಿಟಿ ಸೆಂಟರ ಆಪ್ ಇಂಡಿಯಾ ಪಕ್ಷದ ಮಲ್ಲಿಕಾರ್ಜುನ ಎಚ್.ಟಿ. 1144, ರೈತ ಭಾತರ ಪಾರ್ಟಿಯ ಮುತ್ತಪ್ಪ ಹಿರೇಕುಂಬಿ 518, ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾದ ಶಂಕರ ನಾಯ್ಕರ 441, ಕರ್ನಾಟಕ ರಾಷ್ಟ್ರ ಸಮಿತಿಯ ಸಾಗರ ಕುಂಬಾರ 499, ದೇಶ ಪ್ರೇಮ ಪಾರ್ಟಿಯ ಎಸ್.ಎಂ.ಮರಿಗೌಡರ 454 ಮತಗಳನ್ನು ಪಡೆದುಕೊಂಡಿದ್ದಾರೆ.

ಟಿಪ್ಪು ಸುಲ್ತಾನ ಪಕ್ಷದ ಸೈಯದ್ ಜಕಲಿ 550 ಮತಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲ್ ಅಜೀಜ್ ಪೆಂಡಾರಿ 529, ಅಂಬ್ರೋಸ್ ಡಿ. ಮೆಲ್ಲೋ 1205, ಕೆಂಗಲ ಮಲ್ಲಿಕಾರ್ಜುನ ಭೀಮಪ್ಪ 1207, ಜ್ಯೋತಿ ಗುಳೇದಗುಡ್ಡ 4645, ದತ್ತತ್ರೇಯ ತಾವರೆ 1620, ನಾಗರಾಜ ಕಲಕುಟಗರ 5629, ಪರಶುರಾಮ ನೀಲನಾಯಕ 5090, ಪ್ರಶಾಂತ ರಾವ್ 1914, ಡಾ.ಮುತ್ತು ಸುರಕೋಡ 3135, ರವಿ ಪಡಸಲಗಿ 656, ರಾಜೇಸಾಬ ಮಸಳಿ 992, ಶರಣಪ್ಪ ಕೊತ್ಲನ್ನವರ 832 ಮತಗಳನ್ನು ಪಡೆದುಕೊಂಡಿದ್ದಾರೆ.

3420 ನೋಟಾ ಮತಗಳಾಗಿವೆ. ಒಟ್ಟು 1806183 ಮತಗಳ ಪೈಕಿ 1314141 ಮತಗಳು ಸಿಂಧುವಾಗಿದ್ದು, 1746 ಮತಗಳು ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here