Home ಬೆಂಗಳೂರು ನಗರ ಮೆಟ್ರೋ ಮಾರ್ಗಗಳು ರಾಮನಗರ, ರಾಜಾನಕುಂಟೆಯವರೆಗೆ ವಿಸ್ತರಣೆಯಾಗಬೇಕು- ಮುಖ್ಯಮಂತ್ರಿ

ಮೆಟ್ರೋ ಮಾರ್ಗಗಳು ರಾಮನಗರ, ರಾಜಾನಕುಂಟೆಯವರೆಗೆ ವಿಸ್ತರಣೆಯಾಗಬೇಕು- ಮುಖ್ಯಮಂತ್ರಿ

63
0

ಬೆಂಗಳೂರು:

ಕೆಂಗೇರಿವರೆಗಿನ ವಿಸ್ತರಿತ ಮೆಟ್ರೋ ಮಾರ್ಗದಿಂದ ಅಭಿವೃದ್ಧಿಯ ನವಯುಗ ಪ್ರಾರಂಭವಾಗಿದೆ. ಮೆಟ್ರೋ ಮಾರ್ಗಗಳು ರಾಮನಗರ, ಮಾಗಡಿ ಮತ್ತು ರಾಜಾನಕುಂಟೆವರೆಗೂ ವಿಸ್ತರಣೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ೭.೫ ಕಿ.ಮೀ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು‌.‌

ಮೆಟ್ರೋ ವಿಸ್ತರಣೆಗೆ ಸಂಬಂಧಿಸಿದಂತೆ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಂಪೇಗೌಡರ ಹೆಜ್ಜೆಗುರುತಿನಲ್ಲಿ ಇಂದಿನ ಆಧುನಿಕ ಅವಶ್ಯಕತೆಯನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರನ್ನು ಕಟ್ಟಲು ಎಲ್ಲರೂ ಕೈಜೋಡಿಸುವಂತೆ ಮುಖ್ಯಮಂತ್ರಿಗಳು ಕರೆ ನೀಡಿದರು.

ಇಲ್ಲಿ ಓದಿ: ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಲೋಕಾರ್ಪಣೆ

ನಗರದಲ್ಲಿ ಒಟ್ಟು 317 ಕಿ.ಮೀ ಮೆಟ್ರೋ ಮಾರ್ಗ ಆಗಬೇಕು. ಇಂದು ಉದ್ಘಾಟಿಸಲಾಗಿರುವ 7.5 ಕಿ.ಮೀ ಸೇರಿದಂತೆ ಈವರೆಗೆ 56 ಕಿ.ಮೀ ಸಾಧನೆ ಆಗಿದೆ. ಮುಂದಿನ ವರ್ಷ 36 ಕಿ.ಮೀ ಸಾಧನೆ ಮಾಡಲಾಗುವುದು ಎಂದು ಅವರು ಹೇಳಿದರು‌.

ಬೆಂಗಳೂರು ಅಭಿವೃದ್ಧಿಯಾದರೆ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಕರ್ನಾಟಕ ಅಭಿವೃದ್ಧಿಯಾದರೆ ಭಾರತ ಅಭಿವೃದ್ಧಿಯಾಗುತ್ತದೆ ಎಂದರು.
ಜಿ.ಡಿ.ಪಿಗೆ ಶೇ.36 ರಷ್ಟು ಕೊಡುಗೆ ನೀಡುತ್ತಿರುವ ಬೆಂಗಳೂರು ಇನ್ನು ಹೆಚ್ಚಿನ ಕೊಡುಗೆ ನೀಡಲು ಹೂಡಿಕೆ ಅಗತ್ಯವಿದೆ, ಬೆಂಗಳೂರು ಅಮೃತ್ ನಗರೋತ್ಥಾನ ಯೋಜನೆಯನ್ನು ಘೋಷಣೆ ಕೆಲವೇ ತಿಂಗಳಲ್ಲಿ ಮಾಡಲಾಗುವುದು ಎಂದರು. ಈ ಎಲ್ಲ ಯೋಜನೆಗಳು ಕಾರ್ಯಗತವಾಗಲು ಕೇಂದ್ರ ಸರ್ಕಾರದ ನೆರವು ನಮಗೆ ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ನೂತನ ನಗರ ಕೇಂದ್ರಗಳನ್ನು ನಾವು ನಿರ್ಮಿಸಬೇಕಿದೆ. ‘ನವ ಭಾರತಕ್ಕೆ ನವ ಕರ್ನಾಟಕ; ಸ್ವರಾಜ್ಯದಿಂದ ಸುರಾಜ್ಯ’ ಎಂಬುದು ನಮ್ಮ ಘೋಷವಾಕ್ಯವಾಗಿದೆ ಎಂದರು.

LEAVE A REPLY

Please enter your comment!
Please enter your name here