Home ಅಪರಾಧ Bangalore No.1 in Acid Attacks on Women in 2022: NCRB Report |...

Bangalore No.1 in Acid Attacks on Women in 2022: NCRB Report | 2022ರಲ್ಲಿ ಮಹಿಳೆಯರ ಮೇಲೆ ಆ್ಯಸಿಡ್ ದಾಳಿಗಳಲ್ಲಿ ಬೆಂಗಳೂರು ನಂ.1: NCRB ವರದಿ

30
0
Acid Attack
Representational Image
Advertisement
bengaluru

ಹೊಸದಿಲ್ಲಿ:

ಕಳೆದ ವರ್ಷ ದೇಶದಲ್ಲಿ ಮಹಿಳೆಯರ ಮೇಲೆ ಆ್ಯಸಿಡ್ ದಾಳಿಗಳ ಪೈಕಿ ಅತ್ಯಂತ ಹೆಚ್ಚಿನ ಘಟನೆಗಳು ಬೆಂಗಳೂರಿನಲ್ಲಿ ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (NCRB)ವು ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

NCRB ದತ್ತಾಂಶಗಳಲ್ಲಿ ಪಟ್ಟಿ ಮಾಡಲಾಗಿರುವ 19 ಮಹಾನಗರಗಳ ಪೈಕಿ 2022ರಲ್ಲಿ ಎಂಟು ಮಹಿಳೆಯರು ಆ್ಯಸಿಡ್ ದಾಳಿಗೆ ತುತ್ತಾಗುವುದರೊಂದಿಗೆ ಬೆಂಗಳೂರು ದೇಶದಲ್ಲಿಯೇ ಅಗ್ರಸ್ಥಾನದಲ್ಲಿದ್ದರೆ, ದಿಲ್ಲಿ ಮತ್ತು ಅಹ್ಮದಾಬಾದ್ ನಂತರದ ಸ್ಥಾನಗಳಲ್ಲಿವೆ. ದಿಲ್ಲಿಯಲ್ಲಿ ಏಳು ಮಹಿಳೆಯರು ಮತ್ತು ಅಹ್ಮದಾಬಾದ್ ನಲ್ಲಿ ಐವರು ಮಹಿಳೆಯರ ಮೇಲೆ ಆ್ಯಸಿಡ್ ದಾಳಿಗಳು ನಡೆದಿದ್ದವು.

ದಿಲ್ಲಿಯಲ್ಲಿ ಮಹಿಳೆಯರ ಮೇಲೆ ಆ್ಯಸಿಡ್ ದಾಳಿಗೆ ಪ್ರಯತ್ನಿಸಿದ ಏಳು ಪ್ರಕರಣಗಳು ದಾಖಲಾಗಿದ್ದರೆ ನಂತರದ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಇಂತಹ ಮೂರು ಪ್ರಕರಣಗಳು ದಾಖಲಾಗಿವೆ. ಹೈದರಾಬಾದ್ ಮತ್ತು ಅಹ್ಮದಾಬಾದ್ ನಲ್ಲಿ ಇಂತಹ ತಲಾ ಎರಡು ಪ್ರಕರಣಗಳು ದಾಖಲಾಗಿವೆ.

bengaluru bengaluru

ಕಳೆದ ವರ್ಷ ಬೆಂಗಳೂರನ್ನು ತಲ್ಲಣಗೊಳಿಸಿದ್ದ ಪ್ರಮುಖ ಆ್ಯಸಿಡ್ ದಾಳಿ ಪ್ರಕರಣ ಎ.28ರಂದು ನಡೆದಿತ್ತು. 24ರ ಹರೆಯದ ಎಂ.ಕಾಂ.ಪದವೀಧರೆ ಕೆಲಸಕ್ಕೆ ತೆರಳುತ್ತಿದ್ದಾಗ ಆಕೆಯ ಮೇಲೆ ಆ್ಯಸಿಡ್ ಎರಚಲಾಗಿತ್ತು.

ಪೋಲಿಸರ ಪ್ರಕಾರ ಆರೋಪಿಯು ಬಹಳ ವರ್ಷಗಳಿಂದ ಸಂತ್ರಸ್ತೆಯ ಬೆನ್ನು ಬಿದ್ದಿದ್ದ. ಮದುವೆಯ ಪ್ರಸ್ತಾವವನ್ನು ಮುಂದಿರಿಸಿದಾಗ ಆಕೆ ಅದನ್ನು ತಿರಸ್ಕರಿಸಿದ್ದಳು. ಇದರಿಂದ ಆಕ್ರೋಶಿತ ಆರೋಪಿಯು ಆಕೆಯ ಮೇಲೆ ಆ್ಯಸಿಡ್ ಸುರಿದಿದ್ದ.

ಆರೋಪಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ಬೆಂಗಳೂರು ಪೋಲಿಸರು ತಿರುವಣ್ಣಾಮಲೈ ಆಶ್ರಮದಲ್ಲಿ ಸ್ವಾಮಿಯ ಸೋಗಿನಲ್ಲಿ ಬಚ್ಚಿಟ್ಟುಕೊಂಡಿದ್ದ ಆತನನ್ನು ಬಂಧಿಸಿದ್ದರು.

2023, ಜೂನ್ ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತ್ರಸ್ತೆಗೆ ತನ್ನ ಸಚಿವಾಲಯ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗವನ್ನು ನೀಡಿದ್ದರು.

2022,ಜೂ.10ರಂದು ನಡೆದಿದ್ದ ಇಂತಹುದೇ ಇನ್ನೊಂದು ಪ್ರಕರಣದಲ್ಲಿ ಆರೋಪಿಯು ತನ್ನ ಸ್ನೇಹಿತೆಯು ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ ಬಳಿಕ ಆಕೆಯ ಮೇಲೆ ಆ್ಯಸಿಡ್ ಎರಚಿದ್ದ.


bengaluru

LEAVE A REPLY

Please enter your comment!
Please enter your name here