ಬೆಂಗಳೂರು:
26ನೇ ವರ್ಷದ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಸಮಾವೇಶವು (ಬಿಟಿಎಸ್) ಈ ವರ್ಷದ ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ನಡೆಯಲಿದೆ ಎಂದು ಐಟಿ/ಬಿಟಿ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್ ಅವರು ಶನಿವಾರ ಹೇಳಿದ್ದಾರೆ.
ಈ ಸಂಬಂಧವಾಗಿ ಸರಕಾರದ ಐಟಿ, ಬಿಟಿ ಮತ್ತು ಸ್ಟಾರ್ಟಪ್ ವಿಷನ್ ಗ್ರೂಪ್ ಹಾಗೂ ನಾಸ್ಕಾಂ, ಐಇಎಸ್ಎ, ಟಿಐಇ, ಎಬಿಎಐ, ಏಬಲ್ ಮುಂತಾದ ಔದ್ಯಮಿಕ ಸಂಘಟನೆಗಳ ಜತೆ ವಿಚಾರ ವಿನಿಮಯ ನಡೆಸುತ್ತಿದ್ದು, ಸದ್ಯದಲ್ಲೇ ಮುಂಬರುವ ಸಮಾವೇಶದ ಚಟುವಟಿಕೆಗಳನ್ನು ನಿರ್ಧರಿಸಲಾಗುವುದು.
We have also released the Coffee Table Book – depicting the success stories and highlights of the major milestones we have achieved in the 25th Bengaluru Tech Summit held from Nov 16-18, 2022.
— Dr. Ashwathnarayan C. N. (@drashwathcn) March 18, 2023
Delighted to share that #BTS2023 will be held from Nov 29-Dec 1, 2023. See you there! pic.twitter.com/UdqVBLmPDv
ಒಟ್ಟಿನಲ್ಲಿ ಈ ಸಮಾವೇಶವನ್ನು ಜಾಗತಿಕ ಮಟ್ಟದ ಒಂದು ಕಾರ್ಯಕ್ರಮವನ್ನಾಗಿ ನಡೆಸಲಾಗುವುದು ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಬಿಟಿಎಸ್ ರಜತ ಮಹೋತ್ಸವ ವರ್ಷದ ಸಮಾವೇಶದ ನೆನಪಿಗಾಗಿ ಸಿದ್ಧಪಡಿಸಿರುವ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದರು.