ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ 198 ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ.
ಪ್ರಸ್ತುತ, ರಾಜ್ಯದಲ್ಲಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದು ಹಾಗೂ ತೀವ್ರವಾಗಿ ಹರಡುತ್ತಿದ್ದು, ಅದನ್ನು ನಿಯಂತ್ರಿಸಲು ವಾರ್ಡ್ ಮಟ್ಟದಲ್ಲಿ ಚಿಕಿತ್ಸೆಯ ಸರದಿ ನಿರ್ಧಾರ ಕೋಣೆ — Ward Decentralised Triage and Emergency Response ( DETER ) Committee for Covid – 19 Management(WDC) ಸಮಿತಿಯನ್ನು ಎಲ್ಲಾ 198 ವಾರ್ಡ್‌ಗಳಲ್ಲಿ ರಚಿಸಲು ಆದೇಶಿಸಲಾಗಿರುತ್ತದೆ.
ಅದರಂತೆ, ಕೋವಿಡ್ -19 ಕಾರ್ಯಚಟುವಟಿಕೆಗಳಿಗೆ ಮಾತ್ರ ಎಲ್ಲಾ 198 ವಾರ್ಡ್ ಗಳಿಗೆ WDCಯ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಮುಖ್ಯ ಆಯುಕ್ತರು ರವರು ಆದೇಶ ಹೊರಡಿಸಿರುತ್ತಾರೆ.