Home ಬೆಂಗಳೂರು ನಗರ ಬಿಬಿಎಂಪಿ ಮುಖ್ಯಸ್ಥರಿಂದ ಗಿರಿನಗರ, ಬಸವನಗುಡಿ ಸಹಾಯಕ ಕಂದಾಯ ಅಧಿಕಾರಿಗಳು ಅಮಾನತು

ಬಿಬಿಎಂಪಿ ಮುಖ್ಯಸ್ಥರಿಂದ ಗಿರಿನಗರ, ಬಸವನಗುಡಿ ಸಹಾಯಕ ಕಂದಾಯ ಅಧಿಕಾರಿಗಳು ಅಮಾನತು

243
0

ಇಬ್ಬರು ಅಧಿಕಾರಿಗಳು ಆನ್‌ಲೈನ್ ಖಾತಾ ಅರ್ಜಿದಾರರನ್ನು ‘ದಯವಿಟ್ಟು ಎಆರ್‌ಒ ಕಚೇರಿಯನ್ನು ಸಂಪರ್ಕಿಸಿ’ ಎಂದು ಕೇಳುವ ಟಿಪ್ಪಣಿಯನ್ನು ಅಪ್‌ಲೋಡ್ ಮಾಡಿದ್ದರು.

ಬೆಂಗಳೂರು:

ಖಾತಾ ಅರ್ಜಿದಾರರನ್ನು ‘ದಯವಿಟ್ಟು ARO ಕಚೇರಿಯನ್ನು ಸಂಪರ್ಕಿಸಿ’ ಎಂದು ಕೇಳುವ ಡಿಜಿಟಲ್ ನೋಟ್ ಅಪ್‌ಲೋಡ್ ಮಾಡಿದ್ದಕ್ಕಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಬ್ಬರು ಸಹಾಯಕ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.

ಅಮಾನತುಗೊಂಡ ಎರಡು ಎಆರ್‌ಒಗಳು ಎಂ.ಎಚ್ ಸ್ವಾಮಿ (ಗಿರಿನಗರ) ಮತ್ತು ಸಂತೋಷ್‌ಕುಮಾರ್ ಇಜೆರಿ (ಬಸವನಗುಡಿ).

ವಿಶೇಷ ಆಯುಕ್ತ (ಕಂದಾಯ) ಬಸವರಾಜ್, ಜಂಟಿ ಆಯುಕ್ತ (ಕಂದಾಯ) ಎಂ.ವೆಂಕಟಾಚಲಪತಿ ಮತ್ತು ಕಂದಾಯ ಅಧಿಕಾರಿ (ಸಕಾಲ ಯೋಜನೆ) ಅವರ ಶಿಫಾರಸುಗಳ ಮೇರೆಗೆ ಅಮಾನತು ಆದೇಶ ಹೊರಡಿಸಲಾಗಿದೆ.

ಅಮಾನತು ಆದೇಶದ ಪ್ರಕಾರ, ಎರಡೂ ಎಆರ್‌ಒಗಳು ಕ್ರಮವಾಗಿ 244 ಮತ್ತು 234 ಖಾತಾ ವರ್ಗಾವಣೆ ಅರ್ಜಿಗಳನ್ನು ಸಕಾಲ ಯೋಜನೆಯಡಿ ಜನವರಿ 1, 2021 ರಿಂದ ಜುಲೈ 9, 2021 ರವರೆಗೆ ವಿಲೇವಾರಿಗೊಳಿಸಿದ್ದು, ಖಾತಾ ಪ್ರಮಾಣ ಪತ್ರ ದಾಖಲೆಗಳನ್ನು ಸಕಾಲ ತಂತ್ರಾಂಶಕ್ಕೆ ದಾಖಲಿಸದೆ Please Contact ARO Office ಎನ್ನುವ ಹಾಳೆಯನ್ನು Upload ಮಾಡಿರುತ್ತಾರೆ.

ಇಲ್ಲಿ ಓದಿ: ಬಿಬಿಎಂಪಿ ಆಡಳಿತಾಧಿಕಾರಿಯ ಮಾಜಿ ವಿಶೇಷ ಅಧಿಕಾರಿ, ಇತರ 3 ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತನಿಖೆಗೆ ರಾಜ್ಯ ಸರ್ಕಾರ ಆದೇಶ

ರಾಜೀವ್ ಚಾವ್ಲಾ ಅವರನ್ನು ಭೇಟಿಯಾದ ಅರ್ಜಿದಾರರು

ಅರ್ಜಿದಾರರು ಅಗತ್ಯವಾದ ಖಾತಾ ಶುಲ್ಕವನ್ನು ಪಾವತಿಸಿದರೂ, ಇಬ್ಬರು ಎಆರ್‌ಒಗಳು ಸಕಾಲ ಯೋಜನೆಯಡಿ ಪೋರ್ಟಲ್‌ನಲ್ಲಿ ಖಾತಾ ಎಕ್ಸ್ಟ್ರಾಕ್ಟ್ ಮತ್ತು ಖಾತಾ ಸರ್ಟಿಫಿಕೇಟ್ ವನ್ನು ಸಕಾಲ ತಂತ್ರಾಂಶಕ್ಕೆ ದಾಖಲಿಸದೇ Please Contact ARO Office ಎನ್ನುವ ಹಾಳೆಯನ್ನು Upload ಮಾಡಿರುತ್ತಾರೆ.

Two suspended BBMP AROs Santoshkumar Izeri Assistant Revenue Officer Basavanagudi and MH Swamy Assistant Revenue Officer Girinagara.
Two suspended BBMP AROs Santoshkumar Izeri Assistant Revenue Officer Basavanagudi and MH Swamy Assistant Revenue Officer Girinagara.1

ಮೂಲಗಳ ಪ್ರಕಾರ, ಸಕಾಲ ಯೋಜನೆಯಡಿ ಖಾತಾ ದಾಖಲೆಗಳನ್ನು ಪಡೆಯಲು ವಿಳಂಬವಾದ ಸಂದರ್ಭದಲ್ಲಿ ಕೆಲವು ಅರ್ಜಿದಾರರು ನ್ಯಾಯ ಕೋರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇ-ಆಡಳಿತ) ರಾಜೀವ್ ಚಾವ್ಲಾ ಅವರನ್ನು ಸಂಪರ್ಕಿಸಿದರು.

ಸಕಾಲ ಯೋಜನೆಯಡಿ, ಬಿಬಿಎಂಪಿ 30 ದಿನಗಳೊಳಗೆ ಆನ್‌ಲೈನ್ ಪ್ರಕ್ರಿಯೆಯ ಮೂಲಕ ಖಾತಾ ಪ್ರಮಾಣ ಪತ್ರ ದಾಖಲೆಗಳನ್ನು ವರ್ಗಾಯಿಸುವ ಗುರಿ ಹೊಂದಿದೆ (ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದಲ್ಲಿ). ಆದರೆ ಜೂನ್ 29, 2021 ರಂದು ರಾಜೀವ್ ಚಾವ್ಲಾ ಅವರು ನಡೆಸಿದ ಪರಿಶೀಲನಾ ಸಭೆಯಲ್ಲಿ ಎರಡು ಎಆರ್‌ಒಗಳ ಕ್ರಮಗಳ ಬಗ್ಗೆ ಕಂದಾಯ ಅಧಿಕಾರಿಗೆ (ಸಕಾಲ ಯೋಜನೆ) ಕಠಿಣ ಕ್ರಮ ಕೈಗೊಳ್ಳುವ ನಿರ್ದೇಶನ ನೀಡಿದರು.

ಅಮಾನತುಗಳನ್ನು ಹಿಂತೆಗೆದುಕೊಳ್ಳುವ ಒತ್ತಡ

ಬಿಬಿಎಂಪಿಯ ಉನ್ನತ ಅಧಿಕಾರಿಗಳ ಶಿಫಾರಸುಗಳನ್ನು ಅನುಸರಿಸಿ, ಮುಖ್ಯ ಆಯುಕ್ತ ಗೌರವ್ ಗುಪ್ತಾ ಜುಲೈ 16 ರಂದು ಎಂ.ಎಚ್ ಸ್ವಾಮಿ ಮತ್ತು ಇಜೆರಿ ಅವರನ್ನು ಅಮಾನತುಗೊಳಿಸುವ ಆದೇಶ ಹೊರಡಿಸಿದ್ದಾರೆ. ಆದಾಗ್ಯೂ, ಎರಡು ಎಆರ್ಒಗಳ ಅಮಾನತುಗಳನ್ನು ಹಿಂತೆಗೆದುಕೊಳ್ಳಲು ಗುಪ್ತಾ ಅವರಿಗೆ ರಾಜಕೀಯವಾಗಿ ಒತ್ತಡ ಹೇರುತ್ತಿದೆ ಎಂದು ಮೂಲಗಳು ತಿಳಿಸಿವೆ.

Also Read: BBMP chief suspends 2 ‘system-bypassing’ officers

LEAVE A REPLY

Please enter your comment!
Please enter your name here