Home ಬೆಂಗಳೂರು ನಗರ ಬಿಬಿಎಂಪಿ ಗುತ್ತಿಗೆದಾರರಿಗೆ ಕೊಡಲೆ ಹಣ ಬಿಡುಗಡೆಗಾಗಿ ಒತ್ತಾಯಿಸಿ ಗುತ್ತಿಗೆದಾರರ ಒಕ್ಕೂಟದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಬಿಬಿಎಂಪಿ ಗುತ್ತಿಗೆದಾರರಿಗೆ ಕೊಡಲೆ ಹಣ ಬಿಡುಗಡೆಗಾಗಿ ಒತ್ತಾಯಿಸಿ ಗುತ್ತಿಗೆದಾರರ ಒಕ್ಕೂಟದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

41
0
BBMP Contractors protests demanding payments dues in Bengaluru
ಕೊಡಲೆ ಹಣ ಬಿಡುಗಡೆಗಾಗಿ ಒತ್ತಾಯಿಸಿ ಗುತ್ತಿಗೆದಾರರ ಒಕ್ಕೂಟದ ವತಿಯಿಂದ ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ ಅಹೋರಾತ್ರಿ ಧರಣಿ ಪ್ರತಿಭಟನೆಗೆ ಇಂದು ಚಾಲನೆ ನೀಡಲಾಯಿತು.

ಬೆಂಗಳೂರು:

ಸುದ್ದಿಕೃಪೆ: ಶೇಷನಾರಾಯಣ

ಪಾಲಿಕೆಯ ವ್ಯಾಪ್ತಿಯ ಕರ್ನಾಟಕ ರೂರಲ್ ಇನ್ ಫ್ರಾಸ್ಟಕ್ಟರ್ ಡೆವಲಪ್‌ಮೆಂಟ್ ಲಿಮಿಟೆಡ್ (ಕೆಆರ್ ಐಡಿಎಲ್- ಹಿಂದಿನ ಕೆಎಲ್‌ಸಿ) ಸಂಸ್ಥೆಯಿಂದ ಗುತ್ತಿಗೆ ಪಡೆದು ಕಾಮಗಾರಿ ಪೂರ್ಣಗೊಂಡು 3ವರ್ಷಗಳಾದರು ಬಿಲ್ಲು ಹಣ 200ಕೋಟಿ ಬಿಡುಗಡೆ ಮಾಡದೇ ಇರುವುದರಿಂದ ಗುತ್ತಿಗೆದಾರರು ಬಡ್ಡಿ ಹಣ ಕಟ್ಟುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಕೊಡಲೆ ಹಣ ಬಿಡುಗಡೆಗಾಗಿ ಒತ್ತಾಯಿಸಿ ಗುತ್ತಿಗೆದಾರರ ಒಕ್ಕೂಟದ ವತಿಯಿಂದ ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ ಅಹೋರಾತ್ರಿ ಧರಣಿ ಪ್ರತಿಭಟನೆಗೆ ಇಂದು ಚಾಲನೆ ನೀಡಲಾಯಿತು.

ಪಾಲಿಕೆಯ ವ್ಯಾಪ್ತಿಯ ಕಾಮಗಾರಿ ಇಲಾಖೆಯ ವಿವಿಧ ಲೆಕ್ಕಶೀರ್ಷಿಕೆ ಅಡಿಯಲ್ಲಿ ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಮೂಲಕ ಕಾಮಗಾರಿಗಳನ್ನು ನಿರ್ವಹಿಸಲು ಅನುಮೋದಿಸಿದ್ದು, ಆದರಂತೆ ವಾರ್ಡ್ ಮಟ್ಟದ ಸ್ಥಾಯಿ ಸಮಿತಿಯ ಅನುಮೋದನೆ ಹಾಗೂ ಸಕ್ಷಮ ಪ್ರಾಧಿಕಾರದ ಅನುಮೋದನೆ ದೊರೆತ ನಂತರ ಕರಾರು ಒಪ್ಪಂದ ಮಾಡಿಕೊಂಡು ಕಾರ್ಯದೇಶವನ್ನು ಪಡೆಯಲಾಗಿರುತ್ತದೆ.

ಕಾಮಗಾರಿಗಳನ್ನು ಪೂರ್ಣಗೊಳಿಸಿ, ಗುಣಮಟ್ಟದ ಪರೀಕ್ಷೆಗೆ ಒಳಪಡಿಸಿ, ವಿಭಾಗ ಕಛೇರಿಯಲ್ಲಿ ಆನ್‌ಲೈನ್‌ ಮುಖಾಂತರ ಬಿ.ಆರ್ ನಮೂದಿಸಲಾಗಿರುತ್ತದೆ ಹಾಗೂ ಟಿ.ವಿ.ಸಿ.ಸಿ ವಿಭಾಗದಿಂದ ಕಡತಗಳ ಕಾಮಗಾರಿಯ ಸ್ಥಳ ಪರೀಕ್ಷೆಯು ಮುಗಿದಿದ್ದು, ಕಾಮಗಾರಿಯ ಬಿಲ್ಲಿನ ಮೊತ್ತ ಪಾವತಿ ಬಾಕಿಯಿರುತ್ತದೆ. ಆದರೆ ತಾವುಗಳ ಈಗ ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಮೇಲೆ ಉಚ್ಛ ನ್ಯಾಯಾಲಯದಲ್ಲಿ ಕೇಸ್‌ ನಡೆಯುತ್ತಿದ್ದು, ಸದರಿ ಕೇಸ್ ಚಾಲ್ತಿಯಲ್ಲಿ ಇರುತ್ತದೆ. ಆದ ಕಾರಣ ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ವತಿಯಿಂದ ನಿರ್ವಹಿಸಿರುವ ಬಿಲ್ಲುಗಳನ್ನು ಪಾವತಿ ಸಾಧ್ಯವಿಲ್ಲವೆಂದು ತಿಳಿಸಿರುತ್ತೀರಿ. ಆದರೆ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬಾರದೆಂದು ಎಲ್ಲೂ ದಾಖಲಿಸಿರುವುದಿಲ್ಲ ಎಂದು ಗುತ್ತಿಗೆದಾರರು ತಿಳಿಸಿದರು.

BBMP Contractors protests demanding payments dues in Bengaluru
ಕೊಡಲೆ ಹಣ ಬಿಡುಗಡೆಗಾಗಿ ಒತ್ತಾಯಿಸಿ ಗುತ್ತಿಗೆದಾರರ ಒಕ್ಕೂಟದ ವತಿಯಿಂದ ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ ಅಹೋರಾತ್ರಿ ಧರಣಿ ಪ್ರತಿಭಟನೆಗೆ ಇಂದು ಚಾಲನೆ ನೀಡಲಾಯಿತು.

ಈ ಮಧ್ಯೆ ಪಾಲಿಕೆಯ ವ್ಯಾಪ್ತಿಯ ಸಹಾಯಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಕಾರ್ಯಪಾಲಕ ಅಭಿಯಂತರರು, ಹಾಗೂ ಲೆಕ್ಕ ಶಾಖೆಯವರು ಕಾರ್ಯದೇಶ ನೀಡಿರುತ್ತಾರೆ. ಕಾಮಗಾರಿಯನ್ನು ಸಕ್ಷಮವಾಗಿ ಪೂರ್ಣಗೊಳಿಸಿ, ಸ್ಥಳ ಪರೀಶಿಸಿ, ಎಂ.ಬಿ. ದಾಖಲಿಸಿ, ಆನ್ ಲೈನ್ ಮುಖಾಂತರ ಬಿ.ಆರ್. ನಮೂದಿಸಿರುತ್ತಾರೆ.

ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಿ, ತುಂಭಾ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಹಾಗೂ ಕೊರೋನನಿಂದ ತುಂಬಾ ತೊಂದರೆಯನ್ನು ಅನುಭವಿಸಿರುತ್ತಾರೆ. ಆದ ಕಾರಣ ಮುಂದಿನ ಆಗುಹೋಗುಗಳಿಗೆ ಪಾಲಿಕೆಯ ನೇರ ಜವಾಬ್ದಾರಿಯಾಗಿರುತ್ತದೆ ಹಾಗೂ ನೊಂದ ಗುತ್ತಿಗೆದಾರರು ಎಲ್ಲರೂ ಪಾಲಿಕೆಯ ಕೇಂದ್ರ ಕಛೇರಿಯ ಮುಂದೆ ಸತ್ಯಾಗ್ರಹ ಮಾಡಲು ನಿರ್ಧಾರಿಸಿರುತ್ತಾರೆ. ಆದ್ದರಿಂದ ತಾವುಗಳು ಮಾನವೀಯತೆ ದೃಷ್ಟಿಯಿಂದ ಈ ಸಂಬಂಧಪಟ್ಟ ಕಾಮಗಾರಿಗಳ ಬಿಲ್ಲುಗಳನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

ಗುತ್ತಿಗೆದಾರರ ಒಕ್ಕೂಟದ ಪ್ರತಾಪ್, ನವೀನ್, ಅರವಿಂದ್, ಪ್ರಸನ್ನ, ನಾಗರಾಜು, ತಿಮ್ಮನಂಜಯ್ಯ, ಪುರುಷೋತ್ತಮ, ಆನಿಲ್, ಗಿರೀಶ್, ಅಶ್ವಥ್ ನಾಯಕ್, ಪರಿಸರ ರಾಮಕೃಷ್ಣರವರು ಗುತ್ತಿಗೆದಾರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here