Home ಬೆಂಗಳೂರು ನಗರ Kengeri Police: ಮೈಸೂರಿನಲ್ಲಿ ಇಬ್ಬರು ಸರಗಳ್ಳರ ಬಂಧನ

Kengeri Police: ಮೈಸೂರಿನಲ್ಲಿ ಇಬ್ಬರು ಸರಗಳ್ಳರ ಬಂಧನ

40
0
Kengeri

ರೂ.6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಬೆಂಗಳೂರು:

ಕೆಂಗೇರಿ ಪೊಲೀಸರು ಮೈಸೂರಿನಲ್ಲಿ ಸೋಮವಾರ ಇಬ್ಬರು ಸರಗಳ್ಳರನ್ನು ಬಂಧನಕ್ಕೊಳಪಡಿಸಿದ್ದು ರೂ.6 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ 5 ಚಿನ್ನದ ಸರ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕಬ್ಬಾಳು ಅಲಿಯಾಸ್ ಚಂದು (27) ಮತ್ತು ರಘು ಅಲಿಯಾಸ್ ಕುಳ್ಳ (37) ಎಂದು ಗುರ್ತಿಸಲಾಗಿದೆ. ಆರೋಪಿಗಳು ಚಾಮರಾಜನಗರ, ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಪೊಲೀಸರಿಗೆ ವಾಂಟೆಡ್ ಕ್ರಿಮಿನಲ್ ಗಳಾಗಿದ್ದರು. ಫೆಬ್ರವರಿ 7 ರಂದು ಕೆಂಗೇರಿ ಸ್ಯಾಟಲೈಟ್ ಟೌನ್‌ನ ಬಂಡೆ ಮಠದಲ್ಲಿ 71 ವರ್ಷದ ವೈದ್ಯನನ್ನು ದರೋಡೆ ಮಾಡಿದ್ದರು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here