ಬೆಂಗಳೂರು:
ತೀವ್ರ ಕುತೂಹಲ ಮೂಡಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಘೋಷಣೆಗೆ ಹೈಕೋರ್ಟ್ ಇದೇ ತಿಂಗಳ 19 ರಂದು ಮುಹೂರ್ತ ಫಿಕ್ಸ್ ಮಾಡಿದೆ.ಚುನಾವಣೆ ಯಾವಾಗ ನಡೆಯಬೇಕು ಎನ್ನುವುದರ ತೀರ್ಪನ್ನು ಹೈಕೋರ್ಟ್ 19 ರಂದು ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ.
ಬಿ.ಬಿ.ಎಂ.ಪಿ.ಪಾಲಿಕೆ ಸದಸ್ಯರ ಅವಧಿ ಮುಗಿದು ಎರಡು ತಿಂಗಳೇ ಆಗಿವೆ.ವಾರ್ಡ್ ನಲ್ಲಿ ಅಭಿವೃದ್ದಿ ಸೇರಿದಂತೆ ವಿವಿಧ ಕಾರ್ಯಗಳ ಉಸ್ತುವಾರಿಗೆ ಅಧಿಕಾರಿಗಳ ನಿಯೋಜನೆಯಾಗಿದ್ದರೂ ಯಾವ ಕೆಲಸಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎನ್ನುವ ಆರೋಪಗಳಿವೆ.ಇದೆಲ್ಲದರ ನಡುವೆ ಚುನಾವಣೆ ಫಿಕ್ಸ್ ಮಾಡುವ ಕೆಲಸ ಕೋರ್ಟ್ ನಿಂದ ನಡೆಯುತ್ತಿರುವುದಕ್ಕೆ ನಾಗರಿಕರು ಹರ್ಷ ವ್ಯಕ್ತಪಡಿಸ್ತಿದ್ದರೂ ಆಶ್ಚರ್ಯವಿಲ್ಲ.
ಅಂದ್ಹಾಗೆ ಈಗಾಗ್ಲೇ 198 ರಷ್ಟಿದ್ದ ವಾರ್ಡ್ ಗಳ ಸಂಖ್ಯೆಯನ್ನು ರಾಜ್ಯ ಸರ್ಕಾರ 243ಕ್ಕೆ ಏರಿಸಿದೆ.ಅದಕ್ಕೆ ಸಚಿವ ಸಂಪುಟ ಕೂಡ ಅನುಮೋದನೆ ನೀಡಿದೆ. ಇನ್ನೂಂದು ಕಡೆ 198 ವಾರ್ಡ್ ವಿಂಗಡನೆ ಮತ್ತು ಮೀಸಲಾತಿ ಹಾಗೂ ನವಂಬರ್ 30ಕ್ಕೆ ಮತದಾರರ ಪಟ್ಟಿ ಸಿದ್ದವಾಗಲಿದೆ.
198 ಅಥವಾ 243 ವಾರ್ಡ್ ಗಳಿಗೆ ಸಕಾಲಕ್ಕೆ ಚುನಾವಣೆ ಮಾಡಲು ರಾಜ್ಯ ಚುನಾವಣೆ ಆಯೋಗ ಮತ್ತು ಎಮ್. ಶಿವರಾಜು ಮತ್ತು ಅಬ್ದುಲ್ ವಾಜಿದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಹೈಕೋರ್ಟ್ ಅಂತಿಮ ತೀರ್ಪನ್ನು ಇದೇ ತಿಂಗಳು 19ನೇ ತಾರೀಖಿಗೆ ಪ್ರಕಟಿಸುವುದಾಗಿ ತಿಳಿಸಿದೆ. ಹಾಗಾಗಿ ಇದೀಗ ಸರ್ಕಾರ ಸೇರಿದಂತೆ ಎಲ್ಲಾ ಪಕ್ಷಗಳ ಕಣ್ಣು ಇದೇ 19 ರಂದು ಹೊರಬೀಳಲಿರುವ ಹೈಕೋರ್ಟ್ ತೀರ್ಪಿನತ್ತ ನೆಟ್ಟಿದೆ.
ಬಿ.ಬಿ.ಎಂ.ಪಿ.ಚುನಾವಣೆ ನಡೆಯುವುದು ಖಚಿತ ಅದರೆ ಅದು 198 ವಾರ್ಡ್ ಗಳಿಗೋ ಅಥವಾ ಸರ್ಕಾರ ಮಾಡಿರುವ 243 ವಾರ್ಡ್ ಗಳಿಗೋ ಎನ್ನುವುದನ್ನು ಹೈಕೋರ್ಟ್ ನಿರ್ಧಾರ ಮಾಡಲಿದೆ ಎನ್ನಲಾಗುತ್ತಿದೆ.