Home ಸಿನಿಮಾ ‘ಮಂಗಳವಾರ ರಜಾದಿನ’ ಶೀರ್ಷಿಕೆ ಹಾಡು ನ. 24 ರಂದು ಬಿಡುಗಡೆ

‘ಮಂಗಳವಾರ ರಜಾದಿನ’ ಶೀರ್ಷಿಕೆ ಹಾಡು ನ. 24 ರಂದು ಬಿಡುಗಡೆ

84
0

ಬೆಂಗಳೂರು:

ವಿಭಿನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ‘ಮಂಗಳವಾರ ರಜಾದಿನ’ ಚಿತ್ರದ ಶೀರ್ಷಿಕೆ ಹಾಡು ಇದೇ 24ರಂದು ಬಿಡುಗಡೆಯಾಗಲಿದೆ.

ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಶೀರ್ಷಿಕೆ ಗೀತೆಗೆ ವಿಜಯಪ್ರಕಾಶ್ ದನಿಯಾಗಿದ್ದಾರೆ. ಪ್ರಜೋತ್ ಡೇಸಾ ಸಂಗೀತ ನೀಡಿರುವ ಈ ಹಾಡು ಲಹರಿ‌ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ.

ಕ್ಷೌರಿಕನ ಸುತ್ತ ಹೆಣೆಯಲಾಗಿರುವ ಕಥಾಹಂದರ ಹೊಂದಿವನ್ನು ಈ ಸಿನಿಮಾ ಹೊಂದಿದ್ದು, ಶೀರ್ಷಿಕೆ ಗೀತೆ ಕೂಡ ಸವಿತಾ ಸಮಾಜದವರ ಕೀರ್ತಿ ಸಾರುವ ಹಾಗಿದೆ ಎನ್ನುತ್ತಾರೆ ನಿರ್ದೇಶಕ ಯುವಿನ್.

ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಚಿತ್ರೀಕರಣ ‌ಮುಕ್ತಾಯವಾಗಿದೆ.

ಬೆಂಗಳೂರಿನಲ್ಲೇ ಬಹುತೇಕ ಭಾಗದ ಚಿತ್ರೀಕರಣ ನಡೆದಿದೆ.

ಯವಿನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ನಾಯಕನಾಗಿ ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ನಟಿಸಿದ್ದು, ಕ್ಷೌರಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲಾಸ್ಯ ನಾಗರಾಜ್ ಈ ಚಿತ್ರದ ನಾಯಕಿ. ‌ ಜಹಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಾಲ್ಕು ಹಾಡುಗಳಿದ್ದು ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಋತ್ವಿಕ್‌ ಮುರಳೀಧರ್ ಹಿನ್ನೆಲೆ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಈಗಾಗಲೇ ಬಿಡುಗಡೆಯಾಗಿರುವ ಮಂಗಳವಾರ ರಜಾದಿನ ಚಿತ್ರದ ಟ್ರೇಲರ್ ಜನಮನಸೂರೆಗೊಂಡಿದೆ‌. ಡಿಸೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here