Home ಬೆಂಗಳೂರು ನಗರ ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ: ಬಿಬಿಎಂಪಿ

ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ: ಬಿಬಿಎಂಪಿ

9
0
BBMP is Preparaing action plan for Demolition of unauthorized buildings
BBMP is Preparaing action plan for Demolition of unauthorized buildings
Advertisement
bengaluru

ಬೆಂಗಳೂರು:

ಹೈಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ಹೇಳಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನ್ಯಾಯಾಲಯದ ಸೂಚನೆ ಅನ್ವಯ ಅನಧಿಕೃತ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಇರುವ ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. ಇನ್ನೂ, ಕ್ರಿಯಾ ಯೋಜನೆ ಸಿದ್ಧಪಡಿಸಿದ ನಂತರ ವರದಿಯನ್ನು ಕೋರ್ಟ್​ಗೆ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದರು.

ಅನಧಿಕೃತ ಬ್ಯಾನರ್ ಕುರಿತು ಮಾತನಾಡಿ, ಎಲ್ಲಾ ವಲಯದ ಆಯುಕ್ತರಿಗೆ ಅನಧಿಕೃತ ಫ್ಲೆಕ್ಸ್ ವಿಚಾರವಾಗಿ ದಂಡ ಹಾಕಿ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೆ. ಆ ಪ್ರಕಾರ ಎಲ್ಲೆಡೆ ಅನಧಿಕೃತವಾಗಿ ಅಳವಡಿಕೆಯಾಗಿರುವ ಫ್ಲೆಕ್ಸ್ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಅದರಲ್ಲೂ, ಪೂರ್ವ ವಲಯದ ಆಯುಕ್ತರು ಕೆಪಿಸಿಸಿ ಕಚೇರಿಯಲ್ಲಿದ್ದ ಫ್ಲೆಕ್ಸ್ ತೆರವು ಮಾಡಿಸಿದ್ದಾರೆ. ಈ ಮೊದಲು ನಿಗದಿ ಮಾಡಿರುವಂತೆ ದಂಡವನ್ನೂ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

bengaluru bengaluru

ಕುಡಿಯುವ ನೀರಿನ ಅಗತ್ಯತೆ ಕುರಿತು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅನುದಾನ ಕೊಡಲಾಗಿದೆ. ಹತ್ತು ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯತ್ಯಯ ಆಗಿದೆ. ಹೀಗಾಗಿ ಪಾಲಿಕೆಯ ಹೊರ ವಲಯಗಳಲ್ಲಿ ಅನುದಾನ ಮಂಜೂರು ಮಾಡಲಾಗಿದೆ. ಅದರಂತೆ ಯಶವಂತಪುರ ಕ್ಷೇತ್ರಕ್ಕೂ ಅನುದಾನ ಕೊಡಲಾಗಿದೆ. ಹೊರ ವಲಯಗಳಿಗೆ ಸುಮಾರು 10 ಕೋಟಿವರೆಗೆ ಅನುದಾನ ಕೊಡಲಾಗಿದೆ. ವಲಯ ಆಯುಕ್ತರ ವಿವೇಚನೆಗೆ ತಕ್ಕಂತೆ ಹಣ ಖರ್ಚು ಮಾಡಲು ಹೇಳಲಾಗಿದೆ ಎಂದರು.


bengaluru

LEAVE A REPLY

Please enter your comment!
Please enter your name here