ಮನೆಯಿಂದಲೇ ಆಸ್ತಿ ವಿವರ ಪಡೆಯಬಲ್ಲ
ಬೆಂಗಳೂರು:
ಇನ್ನು ಮುಂದೆ ನೀವು ಮನೆಯಿಂದಲೇ ಆಸ್ತಿ ನೋಂದಣಿ ಮಾಡಿಬಹುದು. ಇಂತಹದೊಂದು ಇ–ಆಸ್ತಿ ತಂತ್ರಾಂಶಕ್ಕೆ ಬಿಬಿಎಂಪಿಯು ಶುಕ್ರವಾರ ಚಾಲನೆ ನೀಡಿದೆ.
ಇದರಿಂದ ಜನರು ಆನ್‌ಲೈನ್ ಮೂಲಕ ಆಸ್ತಿ ಖಾತಾ ನೋಂದಣಿ, ವರ್ಗಾವಣೆ ಮತ್ತು ವಿಭಜನೆ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದಾಗಿದೆ.
ಮೊದಲ ಹಂತದಲ್ಲಿ ನಗರದ ಕೇಂದ್ರ ಭಾಗ(ಪೂರ್ವ, ಪಶ್ಚಿಮ, ದಕ್ಷಿಣ ವಲಯ)ದ 100 ವಾರ್ಡ್ಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರಾಯೋಗಿಕ (Pilot Project) ವಾಗಿ 3 ವಾರ್ಡ್ (ಶಾಂತಲಾನಗರ ವಾರ್ಡ್-111, ನೀಲಸಂದ್ರ-116, ಶಾಂತಿನಗರ-117)ಗಳಲ್ಲಿ ಇಂದಿನಿಂದ ಅನುಷ್ಠಾನಗೊಳ್ಳಲಿದೆ. ಇನ್ನೆರಡು ವಾರದಲ್ಲಿ ಉಳಿದ 97 ವಾರ್ಡ್ ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ತಿಳಿಸಿದರು.
ಖಾತಾ ಪಡೆಯುವ, ಕಟ್ಟಡದ ನಕ್ಷೆ ಮಂಜೂರಾತಿ, ಉದ್ದಿಮೆ ಪರವಾನಗಿ ಸೇರಿದಂತೆ ಇನ್ನಿತರೆ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲವೂ ಆನ್‌ಲೈನ್ ಮೂಲಕ ದೊರೆಯುವಂತಾದರೆ ಸಾರ್ವಜನಿಕರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂದಾಯ ವಿಭಾಗದ ಸೇವಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದ್ದು, ನಾಗರಿಕರು ಯವುದೇ ಕಛೇರಿಗೆ ಹೋಗದೆ ಸುಲಭ ಹಾಗೂ ತ್ವರಿತವಾಗಿ ಖಾತಾ ನೋಂದಣಿ/ಖಾತಾ ವರ್ಗಾವಣೆ/ವಿಭಜನೆ ಸೇರಿದಂತೆ ಇನ್ನಿತರೆ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಆಡಳಿತಗಾರರು ರವರು ತಿಳಿಸಿದರು.
ನಾಗರಿಕರು ಇ-ಆಸ್ತಿ ತಂತ್ರಾಂಶವನ್ನು ಬಳಕೆ ಮಾಡಿ, ತಂತ್ರಾಂಶದಲ್ಲಿ ಏನಾದರು ಲೋಪದೋಷಗಳು ಕಂಡುಬಂದರೆ ಆ ಬಗ್ಗೆ ಪ್ರತಿಕ್ರಿಯೆ(ಫೀಡ್‌ಬ್ಯಾಕ್)ಗಳನ್ನು ನೀಡಿದರೆ ಅದನ್ನು ಸರಿಪಡಿಸಿಕೊಂಡು ಉತ್ತಮ ಸೇವೆ ನೀಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಸೇವೆಗಳನ್ನು ಆನ್‌ಲೈನ್‌ನಲ್ಲಿ ಸಿಗುವಂತೆ ಮಾಡಲು ಸೂಕ್ತ ಕ್ರಮವಹಿಸಲಾಗುತ್ತಿದೆ. ಈ ಪೈಕಿ ಖಾತಾ ಪಡೆಯುವ, ಕಟ್ಟಡದ ನಕ್ಷೆ ಮಂಜೂರಾತಿ, ಉದ್ದಿಮೆ ಪರವಾನಗಿ ಸೇರಿದಂತೆ ಇನ್ನಿತರೆ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲವನ್ನೂ ಆನ್‌ಲೈನ್ ಮಾಡಿದಾಗ ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಫೆಬ್ರವರಿ 2018ರಲ್ಲಿ ಸಕಾಲದಡಿ ಆನ್‌ಲೈನ್ ಮುಖಾಂತರ ಖಾತಾ ಬದಲಾವಣೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಅದರಂತೆ ಇಲ್ಲಿಯವರೆಗೆ 2,87,953 ಖಾತೆಗಳನ್ನು ಆನ್‌ಲೈನ್ ಮೂಲಕ ಖಾತಾ ವರ್ಗಾವಣೆ, ವಿಭಜನೆ, ನೋಂದಣಿ ಮಾಡಲಾಗಿದೆ. ಅದೆಲ್ಲವೂ ಮ್ಯಾನುಯಲ್ ಆಗಿದ್ದು, ಖಾತಾಗೆ ಕೈಯಿಂದ ಸಹಿ ಮಾಡಲಾಗುತ್ತಿತ್ತು. ಇದೀಗ ಒಂದೇ ಫಾರ್ಮ್(ನಮೂನೆ)ನ 46 ಕಾಲಂಗಳಲ್ಲಿ ಆಸ್ತಿಗೆ ಸಂಬಂಧಿಸಿದ ಮಾಹಿತಿ, ಕಟ್ಟಡ, ಮಾಲೀಕರ ಭಾವಚಿತ್ರ, ಕಟ್ಟಡದ ಭಾವಚಿತ್ರ, ಚಕ್ಕುಬಂದಿ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ಎಲ್ಲಾ ಸಂಪೂರ್ಣ ಮಾಹಿತಿಗಳನ್ನು ಹೊಸ ನಮೂನೆ ಪತ್ರದಲ್ಲಿ ನೀಡಲಾಗುತ್ತಿದೆ. ಆ ಪತ್ರಕ್ಕೆ ಸಂಬಂಧಪಟ್ಟ ಅಧಿಕಾರಿ ಡಿಜಿಟಲ್ ಸೈನ್ ಮಾಡಲಿದ್ದು, ಪತ್ರಕ್ಕೆ ಸಹಿ ಮಾಡಿರುವ ಅಧಿಕಾರಿಯ ಸಹಿಯು ಅವರ ಆಧಾರ್ ಕಾರ್ಟ್ ಗೆ ಲಿಂಕ್ ಆಗಲಿದೆ. ಅದೆಲ್ಲವೂ ಸಂಬಂಧಪಟ್ಟವರ ಡಿಜಿ ಲಾಕರ್‌ಗೆ ಸ್ವಯಂಚಾಲಿತವಾಗಿ ಹೋಗಲಿದೆ ಎಂದು ಹೇಳಿದರು.
ಇನ್ನುಮುಂದೆ ಕೈಯಿಂದ ಸಹಿ ಮಾಡುವ ಹಾಗಿರುವುದಿಲ್ಲ. ಸಂಪೂರ್ಣ ಡಿಜಿಟಲ್ ಸಹಿ ಮಾಡಬೇಕಾಗುತ್ತದೆ. ಈ ಸಂಬಂಧ ಪ್ರಾಯೋಗಿಕವಾಗಿ ಪ್ರಾರಂಭಿಸಿದ 3 ವಾರ್ಡ್ ಗಳಲ್ಲಿ ಕೈಬರಹದ ದಾಖಲೆಗಳನ್ನು ಇಂದಿನಿಂದಲೇ ನಿಷೇಧಿಸಲಾಗಿದ್ದು, ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನುಮುಂದೆ ಡಿಜಿಟಲ್ ಸೈನ್ ಮೂಲಕವೇ ಖಾತಾಗಳನ್ನು ಮಾಡಿಕೊಡಲಾಗುತ್ತದೆ. 3 ವಾರ್ಡ್ ಗಳಲ್ಲಿ ಎರಡು ವಾರಗಳ ಕಾಲ ಪ್ರಾಯೋಗಿಕವಾಗಿ ಇ-ಆಸ್ತಿ ತಂತ್ರಾಂಶ ಪದ್ದತಿ ಅನುಷ್ಟಾನಗೊಳಿಸಿ ಏನಾದರು ಲೋಪದೊಷಗಳು ಕಂಡುಬಂದರೆ ಅದನ್ನು ಸರಿಪಡಿಸಿಕೊಂಡು ಎರಡು ವಾರದ ಬಳಿಕ ಉಳಿದ 97 ವಾರ್ಡ್ಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗುತ್ತದೆ. ಇ-ಆಸ್ತಿ ತಂತ್ರಾಂಶ ಜಾರಿಗೊಳಿಸುವುದರಿಂದ ನಕಲಿ ದಾಖಲೆಗಳು ಸೃಷ್ಟಿಯಾಗುವುದು ಕಡಿಮೆಯಾಗುತ್ತದೆ. ಇ-ಆಸ್ತಿ ತಂತ್ರಾಂಶವನ್ನು ಸುಲಭ ಮಾದರಿಯಲ್ಲಿ ನಾಗರಿಕರಿಗೆ ಅನುಕೂಲವಾಗುವ ಸಲುವಾಗಿ ಜಾರಿ ತರಲಾಗಿದೆ ಎಂದರು.
Thanks for introducing Digital technology to help the public. While quite a few Non- Kannadigas like me are learning Kannada, to help us, publish all information in at least 2 languages, Kannada and English and if possible in Hindi too.