Home ಅಪರಾಧ 110 ಕೆ.ಜಿ. ಗಾಂಜಾ ವಶ: ಓರ್ವ ಬಂಧನ

110 ಕೆ.ಜಿ. ಗಾಂಜಾ ವಶ: ಓರ್ವ ಬಂಧನ

120
0
Police nab 26-yr-old man, 110 kg ganja seized

ಬೆಂಗಳೂರು:

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಓರ್ವನನ್ನು ಬಂಧಿಸಿ, 110 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಮೂಲದ ಶಿವಕುಮಾರ್ (27) ಬಂಧಿತ ಆರೋಪಿ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಕೆ. ಡಬ್ಲ್ಯೂ ಲೇಔಟ್ನ. ಖಾಲಿ ಮೈದಾನದ ಬಳಿ ವ್ಯಕ್ತಿಯೋರ್ವ ಪಲ್ಸರ್ ಬೈಕ್ ನಿಲ್ಲಿಸಿಕೊಂಡು ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯ ಬ್ಯಾಗ್‍ ನಿಂದ 17 ಕೆ.ಜಿ. ತೂಕದ ಗಾಂಜಾ ಹಾಗೂ ಚಿಕ್ಕಬಳ್ಳಾಪುರದ ಆತನ ಮನೆಯಿಂದ ಸುಮಾರು 93 ಕೆ.ಜಿ. ಗಾಂಜಾ ಸೇರಿ ಒಟ್ಟು 110 ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ 1 ದ್ವಿಚಕ್ರವಾಹನ ಮತ್ತು 3,000 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ರಾಜಗೋಪಾಲನಗರ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here