BBMP Officer and Employees' Welfare Association election on September 3, A. Amrit Raj and his team carried out vigorous election campaign at zones
ಬೆಂಗಳೂರು:
ವರದಿ: ಶೇಷ ನಾರಾಯಣ, ಪತ್ರಕರ್ತ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ 2023-2027ರ ಸಾಲಿನ ಐದು ವರ್ಷಗಳ ಅವಧಿ 17ನಿರ್ದೇಶಕ ಸ್ಥಾನಕ್ಕೆ ಭಾನುವಾರ 3ನೇ ತಾರೀಖು ಡಾ.ರಾಜ್ ಕುಮಾರ್ ಗಾಜಿನಮನೆಯಲ್ಲಿ ಚುನಾವಣೆ ನಡೆಯಲಿದೆ.
ಸಂಘದ ಚುನಾವಣೆ ಪ್ರಯುಕ್ತ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮತ್ತು ತಂಡದವರು ಪಶ್ಚಿಮವಲಯ,ರಾಜರಾಜೇಶ್ವರಿನಗರ, ಮಹದೇವಪುರ ಬೊಮ್ಮನಹಳ್ಳಿ ವಲಯ ಕಛೇರಿಗಳಲ್ಲಿ ಭರ್ಜರಿ ಚುನಾವಣೆ ಪ್ರಚಾರ ಮಾಡಿದರು.
ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿರುವ ಎ.ಅಮೃತ್ ರಾಜ್ ಮತ್ತು ಕೆ.ಜಿ.ರವಿರವರ ತಂಡದಲ್ಲಿ ಡಾ.ಶೋಭಾ , ಸೋಮಶೇಖರ್ ಎನ್.ಎಸ್ ಮತ್ತು ಹೆಚ್.ಕೆ.ತಿಪ್ಪೇಶ್, ಆರ್.ರೇಣುಕಾಂಬ, ವಿ.ಉಮೇಶ್, ಡಿ.ರಾಮಚಂದ್ರ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಶ್ರೀಧರ್ ಎನ್. ಹಾಗೂ ಸಂತೋಷ್ ಕುಮಾರ್ ಎಂ. ಮತ್ತು ಎನ್.ಮಂಜುನಾಥ್, ಕೆ.ನರಸಿಂಹ , ಹೆಚ್.ಬಿ.ಹರೀಶ್, ಕೆ.ಸಂತೋಷ್ ಕುಮಾರ್ ನಾಯ್ಕ್, ಬಿ.ರುದ್ರೇಶ್ ರವರು ಚುನಾವಣೆ ಪ್ರಚಾರಕಾರ್ಯ ಮಾಡಿ, ಮತಯಾಚನೆ ಮಾಡಿದರು.

ಎ.ಅಮೃತ್ ರಾಜ್ ರವರು ಮಾತನಾಡಿ ಭಾನುವಾರ ದಿನಾಂಕ 3ನೇ ತಾರೀಖು ಸಂಘದ ಚುನಾವಣೆಗಾಗಿ 8ವಲಯಗಳಿಗೆ ತೆರಳಿ ಸಂಘದ ಸದಸ್ಯರಿಗೆ ಸಾಧನೆಗಳ ಕುರಿತು ಮತ್ತು ಮುಂಬರುವ ದಿನಗಳಲ್ಲಿ ಸಂಘವು ಕೈಗೊಳ್ಳುವ ಯೋಜನೆಗಳ ಕುರಿತು ಅಧಿಕಾರಿ, ನೌಕರರಿಗೆ ಮಾಹಿತಿ ನೀಡಿ ಮತಯಾಚನೆ ಮಾಡುತ್ತಿದ್ದೇನೆ ಎಂದು ಹೇಳಿದರು.
ನಮ್ಮ ಹೋರಾಟ, ಸಂಘಟನೆಗೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಸದಸ್ಯರುಗಳು. ಬಿಬಿಎಂಪಿಯಲ್ಲಿ ಸಂಘದ ವತಿಯಿಂದ ಉಚಿತ ಆರೋಗ್ಯ ಶಿಬಿರ ಮತ್ತು ನಿವೃತ್ತ ನೌಕರರಿಗೆ ಈ ಸೌಲಭ್ಯ ಒದಗಿಸಲಾಗಿದೆ. ಸಂಘದ ವತಿಯಿಂದ 1000ಕ್ಕೂ ಹೆಚ್ಚು ನಿವೃತ್ತಿಯಾದ ಅಧಿಕಾರಿ, ನೌಕರರಿಗೆ ಗೌರವಯುತ ಬೀಳ್ಕೋಡುಗೆ ಸಮಾರಂಭ ನೇರವೆರಿದೆ ಎಂದು ಹೇಳಿದರು.
ಕನ್ನಡ ಭಾಷೆಗೆ ಅಗ್ರಸ್ಥಾನ, ಕನ್ನಡ ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿಗೆ ಮೊದಲ ಆದ್ಯತೆ ನೀಡಿ ಸಂಘವು ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಉತ್ಸವ ಆಯೋಜನೆ ಮಾಡಿ ಚಲನಚಿತ್ರ ನಟ, ನಟಿಯರು ಹಾಗೂ ಸಾಹಿತ್ಯ ಸಾಧಕರು ಗಣ್ಯ ಮಹನೀಯರುಗಳುನ್ನ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.
ಹೊರ ರಾಜ್ಯವಾದ ಕಾಶಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಅಚರಿಸಲಾಯಿತು.
40ವರ್ಷದಿಂದ ವೃಂದ ಮತ್ತು ನೇಮಕಾತಿ ನಿಯಮಗಳು ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಸಮಸ್ಯೆಗಳು ಬಡ್ತಿ, ನೇಮಕಾತಿಯಲ್ಲಿ ಸಮಸ್ಯೆಗಳು ಇದ್ದವು ಸಂಘವು ಸತತ ಹೋರಾಟ ಮಾಡಿರುವ ಕಾರಣದಿಂದ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ ಜಾರಿಗೆ ಬಂದು ಸಾವಿರಾರು ನೌಕರರಿಗೆ ಬಡ್ತಿ ಲಾಭ ಸಿಕ್ಕಿತ್ತು ಮತ್ತು ಆರೋಗ್ಯ, ಕಂದಾಯ ಮತ್ತು ಇಂಜನಿಯರ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ನೂರಾರು ಜನರಿಗೆ ಉದ್ಯೋಗ ಲಭಿಸಿತು ಎಂದು ಹೇಳಿದರು.
