ಬೆಂಗಳೂರು:
ಕರೋನವೈರಸ್ ಶನಿವಾರ ಮತ್ತೊಂದು ಬಿಬಿಎಂಪಿ ಸಿಬ್ಬಂದಿಯ ಪ್ರಾಣವನ್ನು ತೆಗೆದುಕೊಂಡಿದೆ. ರಸ್ತೆ ಮೂಲಸೌಕರ್ಯ ವಿಭಾಗದ ತಾಂತ್ರಿಕ ಎಂಜಿನಿಯರಿಂಗ್ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉದಯ್ ಕುಮಾರ್ (50) ಮೃತರು.
ಅಧಿಕೃತ ಮೂಲಗಳ ಪ್ರಕಾರ, ಕೆಂಗೇರಿ ನಿವಾಸಿ ಉದಯ್ ಅವರನ್ನು 10 ದಿನಗಳ ಹಿಂದೆ ಪಶ್ಚಿಮ ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಮಾತೃಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶನಿವಾರ, ಅವರು ಭಯಂಕರ ವೈರಸ್ಗೆ ಯುದ್ಧದಲ್ಲಿ ಸೋಲು ಕಂಡಿದ್ದರು ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಕೊಳ್ಳೆಗಾಲ , ಚಾಮರಾಜನಗರ ಮೂಲದ ಇವರು ಹುಟ್ಟಿ ಬೆಳೆದದ್ದು ಕೋಲಾರದ ಚಿಂತಾಮಣಿಯಲ್ಲಿ.
ಅವರು ಕೋವಿಡ್ ಲಸಿಕೆಯ ಮೊದಲ ಡೋಸ್ ವನ್ನು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ
ಎರಡನೇ ಕೋವಿಡ್ ಅಲೆದಲ್ಲಿ ಬಿಬಿಎಂಪಿ ತನ್ನ ಏಳು ಉದ್ಯೋಗಿಗಳನ್ನು ಕಳೆದುಕೊಂಡಿದೆ. ಶುಕ್ರವಾರ ಬೆಂಗಳೂರಿನಲ್ಲಿ ಸುಮಾರು 26,000 ಪ್ರಕರಣಗಳು ವರದಿಯಾಗಿವೆ.