ಇನ್ನೂ 6 ತಿಂಗಳು ಬಿಬಿಎಂಪಿ ಎಲೆಕ್ಷನ್ ಡೌಟ್!
ಫೆಬ್ರವರಿ 5 ರಂದು ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಿಚಾರಣೆ
ಬೆಂಗಳೂರು:
ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆಗೆ ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿರುವುದರಿಂದ ಚುನಾವಣೆ ಇನ್ನೂ ಆರು ತಿಂಗಳು ನಡೆಯೋದು ಪಕ್ಕಾ ಆಗಿದೆ.
ವಾರ್ಡ್ ಗಳ ಸಂಖ್ಯೆ 243ಕ್ಕೆ ಹೆಚ್ಚಿಸಿ, ಬಿಬಿಎಂಪಿ ಆಯುಕ್ತರ ನೇತೃತ್ವದ ನಾಲ್ವರು ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ಬೆಂಗಳೂರು ನಗರ ಡಿಸಿ, ಬಿಡಿಎ ಆಯುಕ್ತರು ಸದಸ್ಯ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರು ಸದಸ್ಯ ಕಾರ್ಯದರ್ಶಿ ರಾಗಿರಲಿದ್ದಾರೆ.
ವಾರ್ಡ್ ಗಳ ಪುನರ್ವಿಂಗಡಣೆಗೆ ರಾಜ್ಯ ಸರ್ಕಾರ ಆರು ತಿಂಗಳ ಅವಧಿ ಫಿಕ್ಸ್ ಮಾಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ಫೆಬ್ರವರಿ 5 ರಂದು ನಡೆಯಲಿದೆ.
#BreakingNews#BBMP commissioner to head ward delimitation committee to fix boundary for 243 wards
— Thebengalurulive/ಬೆಂಗಳೂರು ಲೈವ್ (@bengalurulive_) January 29, 2021
IAS N Manjunatha Prasad (chairman), #Bengaluru urban DC, #BDA commissioner (member) & special commissioner (revenue) as member secretary
To submit report in 6 months pic.twitter.com/Xd6t6gcXVw