Home ಬೆಂಗಳೂರು ನಗರ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಅಮೃತ್ ರಾಜ್ ಅವಿರೋಧವಾಗಿ...

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಅಮೃತ್ ರಾಜ್ ಅವಿರೋಧವಾಗಿ ನೇಮಕ

745
0
BBMP's Amrut Raj unanimously appointed Karnataka Rajya Mahanagara Palike officers and Employees Union president
Advertisement
bengaluru

ಪಾಲಿಕೆ ನೌಕರರ ಹಿತರಕ್ಷಣೆ ನಮ್ಮ ಜವಾದ್ದರಿ: ಅಮೃತ್

ಸರ್ಕಾರಿ ನೌಕರರಂತೆ ಪಾಲಿಕೆ ನೌಕರರನ್ನ ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ

ರಾಾಮನಗರ/ಬೆಂಗಳೂರು :

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘ ರಾಜ್ಯಾಧ್ಯಕ್ಷರಾಗಿ ಅಮೃತ್ ರಾಜ್ ರವರನ್ನು ಅವಿರೋಧವಾಗಿ ನೇಮಕರಾದರು.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ 11ಮಹಾನಗರ ಪಾಲಿಕೆಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ — ದಾವಣಗರ, ಮೈಸೂರು , ಹುಬ್ಬಳ್ಳಿ-ಧಾರವಾಡ , ಕಲಬುರಗಿ ಮಹಾನಗರಪಾಲಿಕೆ, ಶಿವಮೊಗ್ಗ , ಬೆಳಗಾವಿ ಮಹಾನಗರಪಾಲಿಕೆ, ಮಂಗಳೂರು, ತುಮಕೂರು , ವಿಜಯಪುರ, ಬಳ್ಳಾರಿ ಮಹಾನಗರಪಾಲಿಕೆಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯನ್ನು ರಾಮನಗರ ಜಿಲ್ಲೆ ರೈತನ ಹಟ್ಟಿ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ಅಮೃತರಾಜ್ ರವರನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

bengaluru bengaluru
BBMP's Amrut Raj unanimously appointed Karnataka Rajya Mahanagara Palike officers and Employees Union president

ಮಾಜಿ ಅಧ್ಯಕ್ಷರಾದ ಗುರುಮೂರ್ತಿ , ಮಹಾನಗರ ಪಾಲಿಕೆ ಅಧ್ಯಕ್ಷರುಗಳಾ ಬಸವರಾಜಯ್ಯ, ವೆಂಕಟರಮಣ ,ಗೋವಿಂದರಾಜು ,ಪ್ರಹ್ಲಾದ್ ಕುಲಕರ್ಣಿ ,ಪ್ರಸಾದ್ ಪೆರೂರು ವಿಶ್ವನಾಥ ,ಮಾರಪ್ಪ ,ಬಾಲಪ್ಪ ,ಶಿರ್ ಪ್ಯಾದ್ ರವರು ರಾಜ್ಯಾಧ್ಯಕ್ಷರನ್ನ ಅವಿರೋಧವಾಗಿ ಆಯ್ಕೆ ಮಾಡಿ ,ಘೋಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಅಮೃತ್ ರಾಜ್ ರವರು ಮಾತನಾಡಿ ಕರ್ನಾಟಕದ 11ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರಿಗೆ ಸಮಸ್ಯೆಗಳು ಒಂದೇ ರೀತಿಯಲ್ಲಿ ಇದೆ.

BBMP's Amrut Raj unanimously appointed Karnataka Rajya Mahanagara Palike officers and Employees Union president

“ವೃಂದ ಮತ್ತು ನೇಮಕಾತಿ ಕೆಲಸದ ಒತ್ತಡ ,ಮತ್ತು ಸಿಬ್ಬಂದಿಗಳು ಹೆಚ್ಚಿಗೆ ಇಲ್ಲದಿರುವುದು ,ನೌಕರರ ಮೇಲೆ ಹಲ್ಲೆ ಹಲವಾರು ರೀತಿಯ ಸಮಸ್ಯೆ ನಿವಾರಣೆ ಮತ್ತು ನಮ್ಮ ಹಕ್ಕುಗಳ ರಕ್ಷಣೆಗೆ ಕರ್ನಾಟಕ ಮಹಾನಗರ ಪಾಲಿಕೆ ನೌಕರರ ಸಂಘ ಕಟಿಬದ್ದರಾಗಿ ದುಡಿಯಲು ಶ್ರಮವಹಿಸುವುದಾಗಿ ಮತ್ತು ನಮ್ಮ ಸಮಸ್ಯೆಗಳ ಸರ್ಕಾರಕ್ಕೆ ಮುಟ್ಟಿಸಲು ಸಶಕ್ತ ಸಂಘಟನೆಯಾಗಿ ಹೋರಾಟ ಮಾಡುವುದು .ರಾಜ್ಯ ಸರ್ಕಾರಿ ನೌಕರರ ಸಹಕಾರ ಸಂಘದ ಸಹಕಾರ ಕೇಳುವುದು . ಸರ್ಕಾರಿ ನೌಕರರಿಗೆ ಸೌಲಭ್ಯ ,ಸೌವಲತ್ತುಗಳು ಪಾಲಿಕೆ ನೌಕರರಿಗೆ ಸಿಗುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು,” ಎಂದರು.

BBMP's Amrut Raj unanimously appointed Karnataka Rajya Mahanagara Palike officers and Employees Union president

ಕೊರೋನ ಸಂದರ್ಭದಲ್ಲಿ ಮರಣ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ 30ಲಕ್ಷ ಪರಿಹಾರ ಕೊಡಲು ವಿಳಂಬ ಧೋರಣೆ ಮಾಡಿದ್ದರು .ನಮ್ಮ ಹೋರಾಟದ ಪ್ರತಿಫಲದಿಂದ ಮರಣ ಹೊಂದಿದ 43ಜನರ ಕುಟುಂಬಗಳಿಗೆ ಪರಿಹಾರ ಧನ ಲಭಿಸಿತು, ಎಂದರು.

ಮಹಾನಗರ ಪಾಲಿಕೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕೊರತೆ ಇದೆ ಇದರಿಂದ ನೌಕರರ ಮೇಲೆ ಕೆಲಸದ ಒತ್ತಡ ಬೀಳಲಿದೆ .ಶೀಘ್ರಗತಿಯಲ್ಲಿ ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿಗಳ ನೇಮಕವಾಗಬೇಕು ಎಂದು ಹೇಳಿದರು.

BBMP's Amrut Raj unanimously appointed Karnataka Rajya Mahanagara Palike officers and Employees Union president

ಬೆಂಗಳೂರುನಗರ ಪ್ರದೇಶದಲ್ಲಿ ಉನ್ನತ ಅಧಿಕಾರಿಗಳು ಕೇಂದ್ರ ಕಛೇರಿಗಳು ಇರುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಹೇಳಿದರು.

bengaluru

LEAVE A REPLY

Please enter your comment!
Please enter your name here