ಬೆಂಗಳೂರು:
ಬಿಬಿಎಂಪಿ ಕಸ ಸಾಗಣೆ ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದ ಚಾಲನೆಯಿಂದ ಬಾಗಲೂರು ಬಳಿ ರೇವಾ ಕಾಲೇಜಿನ 2ನೇ ಪ್ರವೇಶದ್ವಾರದ ಎದುರಿನ ರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸವಾರ ರಾಮಯ್ಯ (76) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಮಯ್ಯ ಪುತ್ರ ರಾಜಶೇಖರ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ತಿಳಿಸಿದರು.
ಸಂಪಿಗೆಹಳ್ಳಿ ನಿವಾಸಿ ರಾಮಯ್ಯ ಸಂಬಂಧಿ ಯುವತಿಯೊಬ್ಬರಿಗೆ ಸಾತನೂರಿನಲ್ಲಿ ವರನನ್ನು ನೋಡಿಕೊಂಡು ಗುರುವಾರ ಮಧ್ಯಾಹ್ನ ಮನೆಗೆ ವಾಪಸು ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಕುಟುಂಬದವರು ಕಾರಿನಲ್ಲಿ ಬರುತ್ತಿದ್ದರು.
ಅಪಘಾತದ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.