Home ಬೆಂಗಳೂರು ನಗರ ಸಿಲಿಕಾನ್‌ ಸಿಟಿಯ ಹೈಟೆಕ್‌ ನಾಗರಿಕರಿಗೆ ಶಾಸಕರ ಅಪ್‌ ಬಿಡುಗಡೆ

ಸಿಲಿಕಾನ್‌ ಸಿಟಿಯ ಹೈಟೆಕ್‌ ನಾಗರಿಕರಿಗೆ ಶಾಸಕರ ಅಪ್‌ ಬಿಡುಗಡೆ

75
0
MLA Arvind Limbavali releases 'Mahadevapura Janahita' mobile App

ಮಹದೇವಪುರ ಆ್ಯಪ್‌ ಮೂಲಕ ಜನತೆ ಬೆರಳಂಚಿನಲಿ ಶಾಸಕ ಅರವಿಂದ ಲಿಂಬಾವಳಿ !

ಬೆಂಗಳೂರು:

ಬಿಜೆಪಿ ಹಿರಿಯ ನಾಯಕ ಮತ್ತು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರು ತಮ್ಮ ಕ್ಷೇತ್ರದ ಮತದಾರರೊಂದಿಗೆ ಸತತ ಸಂರ್ಪಕ ಸಾಧಿಸುವ ಸಲುವಾಗಿ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಈ ಪ್ರಯತ್ನದ ಫಲವಾಗಿ ಇದೀಗ ಕ್ಷೇತ್ರದ ಜನತೆಯ ಬೆರಳಂಚಿನಲ್ಲಿ ಉಪಸ್ಥಿತರಿರಲಿದ್ದಾರೆ.

ಸಿಲಿಕಾನ್‌ ಸಿಟಿಯ ಮಾಹಿತಿ ಮತ್ತು ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳು ಮತ್ತು ಉದ್ಯೋಗಿಗಳಿಂದ ಕೂಡಿರುವ ಮಹದೇವಪುರ ವಿಧಾನಸಭಾ ಕ್ಷೇತ್ರದ ಜನತೆ ತಮ್ಮ ಆಗು ಹೋಗುಗಳಿಗೆ ಶಾಸಕರನ್ನು ಕೂಡಲೇ ಸಂಪರ್ಕಿಸಲು ಅನುಕೂಲವಾಗುವಂತೆ ವಿಶಿಷ್ಠ ʼಮಹದೇವಪುರ ಜನಹಿತʼ ಆಪ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಟಂನಲ್ಲೂರಿನ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾರತ ಮಾತಾ ಪೂಜೆ ಮತ್ತು ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನತೆಯ ಹಿತಕ್ಕಾಗಿ ಅಭಿವೃದ್ಧಿ ಪಡಿಸಲಾಗಿರುವ “ಮಹದೇವಪುರ ಜನಹಿತ” ಆ್ಯಪ್ ಅನ್ನುಆರ್. ಕೆ. ಮಿಶ್ರಾ ಅವರು ಅನಾವರಣ ಮಾಡಿದರು.

ʼರಿವರ್‌ ಥಾಟ್ಸ್‌ ಮೀಡಿಯಾ ಪ್ರೈ.ಲಿʼ ಅಭಿವೃದ್ಧಿ ಪಡಿಸಿರುವ ಈ ಜನಹಿತ ಆ್ಯಪ್ ಭಾರತದಲ್ಲೇ ವಿನೂತನವಾದ ಆ್ಯಪ್ ಆಗಿದ್ದು, ಇದು ಎಲ್ಲಾ ಆ್ಯಂಡ್ರಾಯ್ಡ್ನ ಗೂಗಲ್ ಪ್ಲೇ ಸ್ಟೋರ್ ಗಳಲ್ಲಿಯೂ ಲಭ್ಯವಿದೆ.

ಈ ಆ್ಯಪ್ ನಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕಾರ್ಯಗಳ ಚಿತ್ರ ಸಹಿತ, ಅಂಕಿ ಅಂಶಗಳ ಸಹಿತ ಹಾಗೂ ಸ್ಥಳ ಸಹಿತಿ ಎಲ್ಲಾ ಮಾಹಿತಿಗಳು ಪಾರದರ್ಶಕವಾಗಿ ಜನತೆಗೆ ಲಭ್ಯವಿರಲಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಜನತೆಯ ಸಮಸ್ಯೆಗಳ ಕುರಿತಾಗಿಯೂ ಈ ಆ್ಯಪ್ ನಲ್ಲಿ ನಾಗರಿಕರು ತಮ್ಮ ದೂರು ಅಹವಾಲುಗಳನ್ನು ದಾಖಲು ಮಾಡಬಹುದು. ಈ ಆ್ಯಪ್ ಮೂಲಕ ನಾಗರಿಕರ ಸಮಸ್ಯೆಗೆ ಶಾಸಕರ ಕಚೇರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುವರು. ಈ ಆಪ್ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿಯೂ ಲಭ್ಯವಿದೆ.

ಈ ಮೊದಲು ಮಹದೇವಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪುಸ್ತಕ ರೂಪದಲ್ಲಿ ಜನತೆಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಸಕ್ರಿಯವಾಗಿ ಜನತೆಗೆ ಕ್ಷೇತ್ರದ ಮಾಹಿತಿ ನೀಡುವ ಉದ್ದೇಶದಿಂದ ಕಾಲ ಕಾಲಕ್ಕೆ ಆ್ಯಪ್ ಮೂಲಕ ಜನತೆಗೆ ಮಾಹಿತಿ ನೀಡಲಾಗುತ್ತಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

  • ಮಹದೇವಪುರ ಕ್ಷೇತ್ರದ ಮತದಾರರಿಗೆ ಶಾಸಕರ ಕೊಡುಗೆ
  • ರಿವರ್‌ ಥಾಟ್ಸ್‌ ಮೀಡಿಯಾ ಪ್ರೈ ಲಿ., ನಿಂದ ವಿನೂತನ ಆಪ್‌ಗಳ ಅಭಿವೃದ್ಧಿ
  • ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ʼಮಹದೇವಪುರ ಜನಹಿತ (MAHADEVAPURA JANAHITA)ʼ ಆಪ್‌ ಲಭ್ಯ
  • ಬೃಹತ್‌ ಕ್ಷೇತ್ರದ ನಾಗರಿಕರ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ವೇದಿಕೆಯಾಗಲಿರುವ ಆಪ್

LEAVE A REPLY

Please enter your comment!
Please enter your name here