ಬೆಂಗಳೂರು:
ಬೆಂಗಳೂರಿನ ಹೊಸ ರೋಡ್ ಬಳಿಯ ಪಿಇಎಸ್ ಕಾಲೇಜಿನಲ್ಲಿ ಕಟ್ಟಡದಿಂದ ಜಿಗಿದು ಬಿಬಿಎ ವಿದ್ಯಾರ್ಥಿ ಸೂಸೈಡ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ವಿಘ್ನೇಶ್.ಕೆ(19) ಮೃತ ದುರ್ದೈವಿ.
ಹೊಂಗಸಂದ್ರದ ರಾಘವೇಂದ್ರ ಲೇಔಟ್ ನಿವಾಸಿ. ಬಿಬಿಎ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಈ ಕುರಿತಾಗಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬ ಹೇಳಿಕೆ ನೀಡಿದ್ದು, ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಲೇಜಿಗೆ ಹೋಗಿದ್ದ. ನಿನ್ನೆ ಸಂಜೆ 4.30 ರ ಸುಮಾರಿಗೆ ಫ್ರೆಂಡ್ಸ್ ಜೊತೆ ಕಾಫಿ ಕುಡಿದಿದ್ದಾನೆ
ಅದಾದ ಮೇಲೆ 6 ಗಂಟೆ ಸುಮಾರಿಗೆ ತಾನು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದು ಮಾಹಿತಿ ಬಂದ ಕೂಡಲೇ ನಮ್ಮ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸದ್ಯಕ್ಕೆ ವಿದ್ಯಾರ್ಥಿ ಸಾವಿಗೆ ಯಾವ ಕಾರಣ ಗೊತ್ತಾಗಿಲ್ಲ. ಮನೆಯನ್ನ ಪರಿಶೀಲನೆ ಮಾಡಲಾಗಿದೆ. ತನಿಖೆ ನಂತರ ಆತ್ಮಹತ್ಯೆಗೆ ಕಾರಣ ಏನು ಎಂದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.