Bannerghatta Biological Park gets new baby elephant| ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾಕಾನೆ ವೇದಾ ನೀಡಿದೆ ಗಂಡು ಮರಿಗೆ ಜನ್ಮ
ಬೆಂಗಳೂರು:
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಆನೆ ಮರಿಯಾ ಜನನದಿಂದಾಗಿ ಸಂತಸ ಮನೆ ಮಾಡಿದೆ.
ಸಾಕಾನೆ ವೇದಾ ಗಂಡು ಮರಿಗೆ ಜನ್ಮ ನೀಡಿದ್ದಾಳೆ ಹೀಗಾಗಿ ಬನ್ನೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಟ್ಟು ಆನೆಗಳ ಸಂಖ್ಯೆ ಕೂಡ 26ಕ್ಕೆ ಏರಿಕೆಯಾಗಿದೆ. ಗಣರಾಜ್ಯೋತ್ಸವದಂದೇ ಮರಿ ಆನೆ ಹುಟ್ಟಿದ್ದರಿಂದ ಸ್ವತಂತ್ರ ಹೋರಾಟಗಾರರ ಹೆಸರು ನಾಮಕರಣ ಮಾಡಲಾಗುವುದು ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿಯೇ ಜನಿಸಿದ್ದ ಸಾಕಾನೆ ವೇದಾ ಈಗಾಗಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಇದೀಗ ಗಂಡು ಮರಿಗೆ ಜನ್ಮ ನೀಡಿದೆ. ಉದ್ಯಾನವನದ ಸೀಗೆ ಕಟ್ಟೆ ಆನೆ ಬಿಡಾರದಲ್ಲಿ ತಾಯಿ ಮತ್ತು ಮರಿಯಾನೆಯನ್ನು ಜಾಗರೂಕತೆಯಿಂದ ಪಾಲನೆ ಪೋಷಣೆ ಮಾಡಲಾಗುತ್ತಿದೆ. ತಾಯಿಗೆ ಉತ್ತಮ ಪೌಷ್ಟಿಕಾಂಶ ದೊರೆಯುವ ಸಲುವಾಗಿ ಹುರುಳಿ, ತೊಗರಿ, ಕೊಬ್ಬರಿ ಬೆಲ್ಲ ಸೇರಿದಂತೆ ಸಿರಿದಾನ್ಯಗಳನ್ನು ಹದವಾಗಿ ಬೇಯಿಸಿ ಮುದ್ದೆ ಮಾಡಿ ನೀಡಲಾಗುತ್ತಿದ್ದು, ತಾಯಿ ಮರಿ ಆರೋಗ್ಯವಾಗಿದೆ. ಅಲ್ಲದೆ ತಾಯಿಯೊಂದಿಗೆ ಮರಿ ಸ್ವಚ್ಛಂದವಾಗಿ ವಿಹರಿಸುತ್ತಿರುವುದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.