ಬೆಂಗಳೂರು:
ಬೆಂಗಳೂರು ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿ ಅಕ್ರಮ ಶಸ್ತ್ರಾಸ್ತ್ರ ವಶ ಪಡಿಸಿಕೊಂಡಿದ್ದಾರೆ.
ಮದನಪಲ್ಲಿ ಮೂಲದ ಮುರುಳಿ, ಸೋನು ಕುಮಾರ್, ಸುನಿಲ್ ಕುಮಾರ್, ಇರ್ಫಾನ್ ಬಂಧಿತರು.
ಬಿಹಾರದಿಂದ ಪಿಸ್ತೂಲ್ ಆಮದು ಮಾಡಿಕೊಂಡಿದ್ದ ಆರೋಪಿಗಳಾದ ಸೋನು ಕುಮಾರ್ ಹಾಗೂ ಸುನಿಲ್ ಕುಮಾರ್ ಪಿಸ್ತೂಲ್ ಮಾರಾಟಕ್ಕೆ ಬಂದಿದ್ದರು.
ಪುಲಿಕೇಶಿ ನಗರದ ಇರ್ಫಾನ್ ಪಿಸ್ತೂಲ್ ಖರೀದಿಗೆ ಬಂದಿದ್ದ. ಅಶೋಕನಗರ ಸ್ಮಶಾನದ ಬಳಿ ಪಿಸ್ತೂಲ್ ಮಾರಾಟಕ್ಕೆ ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಶೋಕನಗರ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳು ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ. ಪಿಸ್ತೂಲ್ ಸೇರಿದಂತೆ ನಾಲ್ವರನ್ನು ಆರೋಪಿಗಳನ್ನ ಬಂಧಿಸಲಾಗಿದೆ.
ವಿಚಾರಣೆ ವೇಳೆ ಮದನಪಲ್ಲಿ ಮೂಲದ ಆರೋಪಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಬಳಿಕ ಮದನಪಲ್ಲಿ ಮೂಲದ ಮುರುಳಿ ಎಂಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮುರುಳಿಯಿಂದ 2 ಪಿಸ್ತೂಲ್, 5 ಸಜೀವ ಗುಂಡುಗಳನ್ನು ಜಫ್ತಿ ಮಾಡಲಾಗಿದೆ.