Home ಬೆಂಗಳೂರು ನಗರ ಬೆಂಗಳೂರು ಅಭಿವೃದ್ಧಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 50 ಪರ್ಸೆಂಟ್ ಅನುದಾನ ಲೂಟಿ?

ಬೆಂಗಳೂರು ಅಭಿವೃದ್ಧಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 50 ಪರ್ಸೆಂಟ್ ಅನುದಾನ ಲೂಟಿ?

308
0
Bengaluru Development: 50 Percent grant looted during Siddaramaiah's Chief Ministerial tenure?

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ರಮೇಶ್ ಎನ್.ಆರ್. ಅವರಿಂದ ಸುಮಾರು 4,300 ಪುಟಗಳ ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಕೆ

ಬೆಂಗಳೂರು:

ಸಿದ್ಧರಾಮಯ್ಯ ಸರ್ಕಾರದ 2013-18 ರ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಶೇ. 50 ಕ್ಕೂ ಹೆಚ್ಚು ಅನುದಾನಗಳನ್ನು ಲೂಟಿ ಮಾಡಿರುವ ಆರೋಪ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ರಮೇಶ್ ಎನ್.ಆರ್. ಮಾಡಿದ್ದಾರೆ.

ಈ ಸಂಬಂಧ ರವಿವಾರದಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸುಮಾರು 4,300 ಪುಟಗಳ ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಂತರ ರಮೇಶ್ ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಸಿದ್ಧರಾಮಯ್ಯ ಸರ್ಕಾರದ 2013-18 ರ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳು, ರಾಜಕಾಲುವೆ ಅಭಿವೃದ್ಧಿ / ಪುನಶ್ಚೇತನ ಕಾರ್ಯ, 110 ಹಳ್ಳಿಗಳ ಅಭಿವೃದ್ಧಿ ಕಾರ್ಯ, ತ್ಯಾಜ್ಯ ಸಂಸ್ಕರಣಾ ಘಟಕಗಳ ಅಭಿವೃದ್ಧಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ, ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ಮತ್ತು ನೆಲದಡಿಯ ಡಸ್ಟ್ ಬಿನ್ ಗಳ ಅಳವಡಿಕೆ ಕಾರ್ಯಗಳ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಸುಮಾರು ₹ 34,700 ಕೋಟಿ ಮೊತ್ತದ ಕಾಮಗಾರಿಗಳ ಹೆಸರಿನಲ್ಲಿ ಶೇ. 50 ಕ್ಕೂ ಹೆಚ್ಚು ಅನುದಾನಗಳನ್ನು ಲೂಟಿ ಮಾಡಿರುವ ಹಗರಣಗಳಿಗೆ ಸಂಬಂಧಿಸಿದಂತೆ ಸುಮಾರು 4,300 ಪುಟಗಳ ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು ಎಂದು ರಮೇಶ ತಿಳಿಸಿದ್ದರು.

Bengaluru Development: 50 Percent grant looted during Siddaramaiah's Chief Ministerial tenure?

ಹಾಗೆಯೇ, ಸಿದ್ಧರಾಮಯ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆ ಹಗರಣ, ಇಂದಿರಾ ಕ್ಯಾಂಟೀನ್ ಹಗರಣ, NUHM ಹಗರಣ, ಸಮಾಜ ಕಲ್ಯಾಣ ಇಲಾಖೆಯ ಹಾಸಿಗೆ – ದಿಂಬುಗಳ ಹಗರಣ, ವಿಶ್ವೇಶ್ವರಯ್ಯ ಜಲ ನಿಗಮದ ಹಗರಣ, ಕಾವೇರಿ ನೀರಾವರಿ ನಿಗಮದ ಹಗರಣ, ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಹಗರಣ, PWD ಇಲಾಖೆಯ ಹಗರಣ, BDA ನ ಬದಲಿ ನಿವೇಶನಗಳ ಹಗರಣ ಮತ್ತು ಬಿಬಿಎಂಪಿ TDR ಹಗರಣ ಸೇರಿದಂತೆ 97 ಹಗರಣಗಳಿಗೆ ಸಂಬಂಧಿಸಿದ ಸುಮಾರು 1,17,000 ಪುಟಗಳ ದಾಖಲೆಗಳನ್ನು ಒಳಗೊಂಡ Pen drive ಅನ್ನೂ ಸಹ ನೀಡಲಾಯಿತು ಎಂದು ಅವರು ಹೇಳಿದರು.

ಮೇಲ್ಕಂಡ ಹಗರಣಗಳಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳ ಆದೇಶಗಳನ್ವಯ ED, CBI, CID, ACB ಮತ್ತು BMTF ಗಳಲ್ಲಿ ಒಟ್ಟು 21 ಮಂದಿ ಅಂದಿನ ಸಚಿವರು / ಶಾಸಕರುಗಳ ವಿರುದ್ಧ, 06 ಮಂದಿ ಬಿಬಿಎಂಪಿ ಸದಸ್ಯರ ವಿರುದ್ಧ, 114 ಮಂದಿ ಅಧಿಕಾರಿಗಳು ಮತ್ತು 97 ಮಂದಿ ಗುತ್ತಿಗೆದಾರರ ವಿರುದ್ಧ FIR ಗಳು ದಾಖಲಾಗಿದ್ದ ವಿವರಗಳನ್ನೂ ಸಹ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ನೀಡಲಾಯಿತು ಎಂದು ಅವರು ತಿಳಿಸಿದ್ದರು.

LEAVE A REPLY

Please enter your comment!
Please enter your name here