Home ಬೆಂಗಳೂರು ನಗರ ಬೆಂಗಳೂರು ನಿಜವಾದ ಅಂತರರಾಷ್ಟ್ರೀಯ ನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು ನಿಜವಾದ ಅಂತರರಾಷ್ಟ್ರೀಯ ನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

33
0
Bengaluru is a real international city: CM Bommai
bengaluru

ಬೆಂಗಳೂರು:

ಬೆಂಗಳೂರು ನಿಜವಾದ ಅಂತರರಾಷ್ಟ್ರೀಯ ನಗರವಾಗಿದೆ. ಸರ್ಕಾರ ನಗರಾಭಿವೃದ್ಧಿಗಾಗಿ ಅಮೃತ ನಗರೋತ್ಥಾನದಡಿ ನೀಡಿರುವ ಅನುದಾನದಲ್ಲಿ ಎಲ್ಲಾ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. ಬೆಂಗಳೂರು ಸುಂದರ ನಗರ, ಐಟಿ.ಬಿಟಿ ರಾಜಧಾನಿ ಮಾತ್ರವಲ್ಲ, ನಿಜವಾಗಿಯೂ ಆರ್ಥಿಕ ರಾಜಧಾನಿಯಾಗಿಯೂ ಹೊರಹೊಮ್ಮುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಪದ್ಮನಾಭನಗರ ಜಾನಪದ ಉತ್ಸವ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಡುತ್ತಿದ್ದರು.

ಕಳೆದ 3 ತ್ರೈಮಾಸಿಕದಲ್ಲಿ ಅತಿ ಹೆಚ್ಚು ಅಂದರೆ ಶೇ. 47 ರಷ್ಟು ವಿದೇಶಿ ನೇರ ಬಂಡವಾಳ ಕರ್ನಾಟಕಕ್ಕೆ ಹರಿದು ಬಂದಿದೆ. ಪಕ್ಕದ ರಾಜ್ಯಗಳಿಗೆ 1-2 ಅಥವಾ 4 ರಷ್ಟು ಬಂದಿದೆ. ವಿಶ್ವದ ಎಲ್ಲಾ ದೇಶಗಳು ಕರ್ನಾಟಕದೆಡೆಗೆ ಬರುತ್ತಿವೆ. ಬೆಂಗಳೂರು ನಗರಾಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

bengaluru

ಎಲ್ಲಾ ಕ್ಷೇತ್ರಗಳಲ್ಲಿ ಜಾನಪದ ಉತ್ಸವ:

ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಜಾನಪದದಿಂದ ಕನ್ನಡಕ್ಕೆ ಶಕ್ತಿ:
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ, ಕರ್ನಾಟಕದಲ್ಲಿ ಬಿಎಸ್.ಯಡಿಯೂರಪ್ಪ ಅವರ ದಿಟ್ಟ ಕ್ರಮದಿಂದ ಕೋವಿಡ್ ನ್ನು ಮೆಟ್ಟಿ ನಿಲ್ಲಲ್ಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಾನಪದ ಉತ್ಸವವನ್ನು ಎರಡು ವರ್ಷಗಳ ನಂತರ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು. ಕರ್ನಾಟಕದಲ್ಲಿ ಜಾನಪದಕ್ಕೆ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಬೆಂಗಳೂರಿನ ಸುಶಿಕ್ಷಿತ ಜನರಿರುವ ಪದ್ಮನಾಭನಗರ ಕ್ಷೇತ್ರದಲ್ಲಿ ಜಾನಪದ ಜಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಬಂದಿರುವುದು ಕನ್ನಡ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿ. ಭಾರತದಲ್ಲಿ ಕನ್ನಡಕ್ಕೆ ಅಗ್ರಮಾನ್ಯ ಸ್ಥಾನವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಭಾರತದಲ್ಲಿ ಅತ್ಯಂತ ಪ್ರಾಚೀನ ಭಾಷೆ ಕನ್ನಡ. ಹಲವಾರು ಯುಗಗಳು ಕಳೆದರೂ ಕೂಡ ಕನ್ನಡ ಗಟ್ಟಿಯಾಗಿ ನಿಂತಿದೆ. ಇದರ ಬಗ್ಗೆ ಯಾರಿಗೂ ಅನುಮಾನ ಬೇಡ. ಕನ್ನಡ ಭಾಷೆಯ ಶಕ್ತಿ ಜಾನಪದದಿಂದ ಬರುತ್ತದೆ. ಜನರ ಭಾಷೆಯ ಅಭಿವ್ಯಕ್ತಿ ಜಾನಪದ. ಹೃದಯದಿಂದ ಬರುವ ನುಡಿಗಳು ಜಾನಪದ. ದಕ್ಷಿಣದ ಮಾದೇಶ್ವರ, ಉತ್ತರದ ಶಿಶುನಾಳ ಶರೀಫರ ಶ್ರೀಮಂತಿಕೆ ಒಗ್ಗೂಡಿ ಇಂದು ಸಮ್ಮಿಲನವಾಗಿದೆ ಎಂದರು.

ಜಾನಪದ ಮತ್ತು ಕನ್ನಡ ವಿವಿಗಳನ್ನು ಉಳಿಸಬೇಕು: ಇಡೀ ವಿಶ್ವದಲ್ಲಿ ಜಾನಪದ ವಿಶ್ವವಿದ್ಯಾಲಯ ಇರುವುದು ಹಾವೇರಿಯ ಶಿಗ್ಗಾಂವಿಯಲ್ಲಿ ಮಾತ್ರ. ಅದನ್ನು ಬಿ.ಎಸ್.ಯಡಿಯೂರಪ್ಪನವರು ಕೊಡುಗೆಯಾಗಿ ನೀಡಿದ್ದಾರೆ. ಇಂದು ಜಾನಪದವನ್ನು ಉಳಿಸುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ಹಾವೇರಿಯ ಜಾನಪದ ವಿಶ್ವವಿದ್ಯಾಲಯವನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು. ಇವುಗಳನ್ನು ಉಳಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಕನ್ನಡದ ಮಹತ್ವ ತಿಳಿಯುತ್ತದೆ ಎಂದರು.

ಜಾನಪದವನ್ನು ಶ್ರೀಮಂತಗೊಳಿಸಲು ಪ್ರಯತ್ನ: ನಾಗರೀಕತೆಯೇ ಸಂಸ್ಕøತಿಯಲ್ಲ. ನಾವೇನಾಗಿದ್ದೇವೆಯೋ ಅದು ಸಂಸ್ಕøತಿ. ಬೆಂಗಳೂರಿನ್ಲಲಿ ಜಾನಪದಕ್ಕೆ ಇಷ್ಟು ದೊಡ್ಡ ಪ್ರೋತ್ಸಾಹ ಸಿಕ್ಕಿರುವುದು ಸಂತಸದ ಸಂಗತಿ. ಆನರಿಗೆ ನಮ್ಮತನ, ನಮ್ಮ ಭಾಷೆ ಸಂಸ್ಕøತಿಯ ಬಗ್ಗೆ ಸದಾ ಕಾಲ ಅಭಿಮಾನ ವಿದ್ದಾಗ ಮಾತ್ರ ಕನ್ನಡ ನಾಡಿನ ಭವಿಷ್ಯ ಉಜ್ವಲವಾಗುತ್ತದೆ. ಇದನ್ನು ಎಲ್ಲಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು. ಯಾವುದೇ ಸಂದರ್ಭದಲ್ಲಿಯೂ ಜಾನಪದ ಕ್ಷೀಣಿಸಲು ಬಿಡುವುದಿಲ್ಲ. ಜಾನಪದವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಎಲ್ಲಾ ರೀತಿಯ ಬೆಂಬಲವನ್ನು ನೀಡಲಾಗುವುದು ಎಂದರು.

bengaluru

LEAVE A REPLY

Please enter your comment!
Please enter your name here