Home ಕರ್ನಾಟಕ ಸೋಮವಾರದಿಂದ ಬೆಂಗಳೂರು ಆಗುತ್ತಿದೆ ಅನ್‌ಲಾಕ್‌

ಸೋಮವಾರದಿಂದ ಬೆಂಗಳೂರು ಆಗುತ್ತಿದೆ ಅನ್‌ಲಾಕ್‌

96
0

ಬೆಂಗಳೂರು:

ಸೋಮವಾರದಿಂದ ಮೊದಲ ಹಂತದ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಲಿದೆ. ಬೆಳಗ್ಗೆ 6 ಗಂಟೆಯಿಂದ ಅನ್‌ಲಾಕ್‌ ಜಾರಿಗೆ ಬರಲಿದ್ದು ಮಧ್ಯಾಹ್ಮ 2 ಗಂಟೆಯ ವರೆಗೂ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

ಜೂನ್‌ 14ರ ಬೆಳಿಗ್ಗೆ 6 ಗಂಟೆಯಿಂದ ಜೂನ್‌ 21ರ ಬೆಳಿಗ್ಗೆ 6 ಗಂಟೆವರೆಗೆ ಜಾರಿಯಲ್ಲಿ ಇರಲಿದೆ. ಅಗತ್ಯ ವಸ್ತುಗಳ ಅಂಗಡಿಗಳನ್ನು – ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ, ಡೈರಿ ಉತ್ಪನ್ನಗಳು, ಹಾಲಿನ ಬೂತ್‌, ಪ್ರಾಣಿಗಳ ಆಹಾರ – ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಬಹುದು, ಬೀದಿ ಬದಿ ವ್ಯಾಪಾರಕ್ಕೆ, ನ್ಯಾಯಬೆಲೆ ಅಂಗಡಿ, ಬಾರ್‌ಗಳನ್ನು ತೆರೆಯಲು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಸರ್ಕಾರ ಅನುಮತಿ ನೀಡಿದೆ.

Screenshot 341

ಅನ್‌ಲಾಕ್‌ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿದ್ದು 11 ಜಿಲ್ಲೆಗಳನ್ನು — ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ, ಕೊಡಗು — ಹೊರತುಪಡಿಸಿ ಉಳಿದೆಡೆ ಇದು ಜಾರಿಗೆ ಬರಲಿದೆ.

Read Here: Bengaluru Unlock: Parks & Industries to open from Monday https://thebengalurulive.com/bengaluru-unlock-parks-industries-to-open-from-monday/

ಎಲ್ಲಾ ಕೈಗಾರಿಕೆಗಳು, ಉತ್ಪಾದನಾ ಘಟಕಗಳು ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಶೇ. 50 ಸಿಬ್ಬಂದಿಗಳ ಹಾಜರಿಯೊಂದಿಗೆ ಕಾರ್ಯನಿರ್ವಹಿಸಬಹುದು. ಆದರೆ ಗಾರ್ಮೆಂಟ್ಸ್‌ಗೆ ಮಾತ್ರ ಕೊರೊನಾ ಮಾರ್ಗಸೂಚಿ ಕಡ್ಡಾಯ ಪಾಲನೆಯೊಂದಿಗೆ ಶೇ. 30 ಸಿಬ್ಬಂದಿಯ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಸರ್ಕಾರ ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here