ಬೆಂಗಳೂರು:
ಬೆಂಗಳೂರಿನಲ್ಲಿ ಮತ್ತೊಂದು ದಾರುಣ ಘಟನೆಯಲ್ಲಿ ಲೈನ್ಮ್ಯಾನ್ ವಿದ್ಯುತ್ ಶಾಕ್ನಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೀಮಸಂದ್ರದಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ವೇಳೆ ಸಿದ್ದರಾಜು (43) ಮೃತ ದುರ್ದೈವಿ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಆಕಸ್ಮಿಕವಾಗಿ ಟ್ರಾನ್ಸ್ ಫಾರ್ಮರ್ ಮೇಲೆ ಕಾಲಿಟ್ಟಿದ್ದರಿಂದ ಅವಘಡ ಸಂಭವಿಸಿದೆ. ಆವಲಹಳ್ಳಿ ವಿಭಾಗದ ಚೀಮಸಂದ್ರ ಸಮೀಪದ ಅಪ್ಪಾಜಪ್ಪ ಲೇಔಟ್ನಲ್ಲಿ ಘಟನೆ ನಡೆದಿದೆ.
ಕನಕಪುರ ಮೂಲದ ಸಿದ್ದರಾಜು ಹೊಸಕೋಟೆಯಲ್ಲಿ ವಾಸವಾಗಿದ್ದರು. ಎಂಟು ತಿಂಗಳ ಹಿಂದೆ ಆವಲಹಳ್ಳಿ ವಿಭಾಗಕ್ಕೆ ವರ್ಗಾವಣೆಯಾಗಿದ್ದರು.
ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿದ್ದರಾಜು ಮೃತದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ಸ್ಥಳೀಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ.