
ಬೆಂಗಳೂರು: ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ಆಯುಕ್ತರು ಪೊಮ್ಮಲ ಸುನೀಲ್ ಕುಮಾರ್ (IAS) ಅವರು ಪ್ರತಿ ಶುಕ್ರವಾರ ‘ಫೋನ್-ಇನ್’ ಕಾರ್ಯಕ್ರಮವನ್ನು ನಾಳೆಯಿಂದ (ಸೆಪ್ಟೆಂಬರ್ 26) ಪ್ರಾರಂಭಿಸುತ್ತಿದ್ದಾರೆ. ಈ ಕಾರ್ಯಕ್ರಮವು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ನಾಗರಿಕರು ಕೆಳಗಿನ ವಿಷಯಗಳ ಕುರಿತು ನೇರವಾಗಿ ದೂರವಾಣಿ ಮೂಲಕ ಅಹವಾಲು ಸಲ್ಲಿಸಬಹುದು:
- ಗುಂಡಿ ಮುಚ್ಚುವಿಕೆ
- ಬೀದಿ ದೀಪ ದುರಸ್ತಿ
- ಕಸದ ಸಂಗ್ರಹಣೆ
- ಅಪಾಯಕಾರಿ ಮರ ಅಥವಾ ಕೊಂಬೆಗಳನ್ನು ಕತ್ತರಿಸುವುದು
- ದೋಮ ನಿಯಂತ್ರಣ
- ಅಲೆಮಾರಿ ನಾಯಿಗಳ ಸಮಸ್ಯೆ
- ಉದ್ಯಾನವನಗಳ ನಿರ್ವಹಣೆ
- ಅನಧಿಕೃತ ಬ್ಯಾನರ್/ಪೋಸ್ಟರ್ ತೆರವು
- ಪಾದಚಾರಿ ಮಾರ್ಗ ಆಕ್ರಮಣ
- ಇ-ಖಾತಾ ಸಂಬಂಧಿತ ಸಮಸ್ಯೆಗಳು
- ಒಳಚರಂಡಿ ಸ್ವಚ್ಛತೆ
ಎಲ್ಲಾ ದೂರುಗಳನ್ನು ಅಧಿಕೃತವಾಗಿ ‘ಸಹಾಯ 2.0’ ಪೋರ್ಟಲ್ ನಲ್ಲಿ ದಾಖಲಿಸಲಾಗುತ್ತದೆ ಮತ್ತು ಸಂಬಂಧಿತ ಅಧಿಕಾರಿಗೆ ಹಸ್ತಾಂತರಿಸಲಾಗುತ್ತದೆ. ದೂರು ದಾಖಲಾದ ನಂತರ ನಾಗರಿಕರಿಗೆ SMS ಮೂಲಕ ದೃಢೀಕರಣ ಮತ್ತು ಅಧಿಕಾರಿಯ ಸಂಪರ್ಕ ವಿವರಗಳು ನೀಡಲಾಗುತ್ತದೆ.
ಕಂಟ್ರೋಲ್ ರೂಂ ಸಂಪರ್ಕ ವಿವರಗಳು:
ಮೊಬೈಲ್ & ವಾಟ್ಸ್ಆಪ್: 9480685705
ಲ್ಯಾಂಡ್ಲೈನ್: 080-2297 5936 / 080-2363 6671

ಪರ್ಯಾಯವಾಗಿ, ನಾಗರಿಕರು QR ಕೋಡ್ ಸ್ಕ್ಯಾನ್ ಮಾಡಿ ‘ಸಹಾಯ’ ಮೊಬೈಲ್ ಆಪ್ ಮೂಲಕವೂ ತಮ್ಮ ದೂರುಗಳನ್ನು ದಾಖಲಿಸಬಹುದು.