ರಾಜ್ಯದಲ್ಲಿ ಇಂದು ಕೊರೋನಾಗೆ 144 ಮಂದಿ ಸಾವು
ಬೆಂಗಳೂರು:
ರಾಜ್ಯದಲ್ಲಿ ಕಳೆದ 24 ತಾಸಿನಲ್ಲಿ ಕೋವಿಡ್ ನ 9,785 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ಶನಿವಾರ 27,57,324ಕ್ಕೆ ಏರಿದೆ.
ಕಳೆದ 24 ತಾಸಿನಲ್ಲಿ ವೈರಸ್ ನಿಂದ ರಾಜ್ಯದಲ್ಲಿ 21,614 ಮಂದಿ ಚೇತರಿಸಿಕೊಂಡಿದ್ದು, ಇದೇ ಅವಧಿಯಲ್ಲಿ ಸೋಂಕಿಗೆ 144 ಮಂದಿ ಬಲಿಯಾಗುವುದರೊಂದಿಗೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 32,788ಕ್ಕೆ ಏರಿದೆ.
ಬೆಂಗಳೂರಿನಲ್ಲಿ ಇಂದು 2,454 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,95,340ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 21 ಮಂದಿ ಬಲಿಯಾಗಿದ್ದಾರೆ.
ಇಂದಿನ 12/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/1bvIUGYsD3 @CMofKarnataka @drashwathcn@GovindKarjol @LaxmanSavadi @mla_sudhakar @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/4Vq998rzBJ
— K'taka Health Dept (@DHFWKA) June 12, 2021
ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 21,614 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 25,32,719ಕ್ಕೆ ಏರಿಕೆಯಾಗಿದೆ. ಇನ್ನು 1,91,796 ಸಕ್ರೀಯ ಪ್ರಕರಣಗಳಿವೆ.
ರಾಜ್ಯಾದ್ಯಂತ ಇಂದು 1,48,027 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 9,785 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 6.61ಕ್ಕೆ ಇಳಿದಿದೆ.
ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 2,454, ಬೆಳಗಾವಿಯಲ್ಲಿ 443, ಬಳ್ಳಾರಿಯಲ್ಲಿ 337, ಚಿಕ್ಕಬಳ್ಳಾಪುರದಲ್ಲಿ 273, ಚಿಕ್ಕಮಗಳೂರು 342, ದಕ್ಷಿಣ ಕನ್ನಡದಲ್ಲಿ 618, ದಾವಣಗೆರೆಯಲ್ಲಿ 372, ಹಾಸನದಲ್ಲಿ 624, ಮೈಸೂರಿನಲ್ಲಿ 482, ಶಿವಮೊಗ್ಗದಲ್ಲಿ 715, ತುಮಕೂರಿನಲ್ಲಿ 440, ಉಡುಪಿಯಲ್ಲಿ 263, ಉತ್ತರ ಕನ್ನಡದಲ್ಲಿ 229 ಪ್ರಕರಣಗಳು ವರದಿಯಾಗಿವೆ.
ಕಳೆದ 24 ತಾಸಿನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಪೈಕಿ ಬೆಂಗಳೂರು ನಗರದಲ್ಲಿ 21, ಬೆಳಗಾವಿ 10, ಶಿವಮೊಗ್ಗ 6, ಹಾವೇರಿ 5, ಧಾರವಾಡದಲ್ಲಿ 10, ಮೈಸೂರಿನಲ್ಲಿ 20 ಪ್ರಕರಣಗಳು ಸೇರಿವೆ.