ಬೆಂಗಳೂರು:
ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 11, 958 ಜನರಿಗೆ ಕೊರೋನ ಸೋಂಕು ತಗುಲಿದ್ದು, 340 ಜನರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು 1,992 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,85,118ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 199 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 27,299 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 24,36,716ಕ್ಕೆ ಏರಿಕೆಯಾಗಿದೆ. ಇನ್ನು 2,80,186 ಸಕ್ರೀಯ ಪ್ರಕರಣಗಳಿವೆ.
ಇಂದಿನ 07/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/6g2hgmymnF @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/W7hAv7ZTAb
— K'taka Health Dept (@DHFWKA) June 7, 2021
ಹೊಸ ಪ್ರಕರಣಗಳ ಪೈಕಿ ಬೆಳಗಾವಿಯಲ್ಲಿ 355, ಬಳ್ಳಾರಿಯಲ್ಲಿ 267, ಚಿಕ್ಕಬಳ್ಳಾಪುರದಲ್ಲಿ 282, ಚಿತ್ರದುರ್ಗದಲ್ಲಿ 294, ದಕ್ಷಿಣ ಕನ್ನಡದಲ್ಲಿ 408, ದಾವಣಗೆರೆಯಲ್ಲಿ 380, ಹಾಸನದಲ್ಲಿ 1108, ಮೈಸೂರಿನಲ್ಲಿ 1,213, ಶಿವಮೊಗ್ಗದಲ್ಲಿ 1224, ತುಮಕೂರಿನಲ್ಲಿ 420, ಉಡುಪಿಯಲ್ಲಿ 394, ಉತ್ತರ ಕನ್ನಡದಲ್ಲಿ 364 ಪ್ರಕರಣಗಳು ವರದಿಯಾಗಿವೆ.
ಕಳೆದ 24 ತಾಸಿನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಪೈಕಿ ಬೆಂಗಳೂರು ನಗರದಲ್ಲಿ 199, ಗ್ರಾಮಾಂತರದಲ್ಲಿ 5, ಬಳ್ಳಾರಿಯಲ್ಲಿ 9, ದಕ್ಷಿಣ ಕನ್ನಡದಲ್ಲಿ 3, ದಾವಣಗೆರೆಯಲ್ಲಿ 5, ಹಾಸನದಲ್ಲಿ 10, ಕೋಲಾರದಲ್ಲಿ 6, ಮೈಸೂರಿನಲ್ಲಿ 17 ಪ್ರಕರಣಗಳು ಸೇರಿವೆ.