Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • 1,500 ಕೋಟಿ ರೂ. ವೆಚ್ಚದಲ್ಲಿ 146 ತಾಲೂಕು, 19 ಜಿಲ್ಲಾಸ್ಪತ್ರೆಗಳ ಆರೋಗ್ಯ ಮೂಲಸೌಕರ್ಯ ಮೇಲ್ದರ್ಜೆಗೆ: ಡಿಸಿಎಂ ‌ಅಶ್ವತ್ಥನಾರಾಯಣ
  • ಆರೋಗ್ಯ
  • ಕರ್ನಾಟಕ
  • ಬೆಂಗಳೂರು ನಗರ

1,500 ಕೋಟಿ ರೂ. ವೆಚ್ಚದಲ್ಲಿ 146 ತಾಲೂಕು, 19 ಜಿಲ್ಲಾಸ್ಪತ್ರೆಗಳ ಆರೋಗ್ಯ ಮೂಲಸೌಕರ್ಯ ಮೇಲ್ದರ್ಜೆಗೆ: ಡಿಸಿಎಂ ‌ಅಶ್ವತ್ಥನಾರಾಯಣ

The Bengaluru Live June 7, 2021 8:55 PM 1 minute read
1,500 ಕೋಟಿ ರೂ. ವೆಚ್ಚದಲ್ಲಿ 146 ತಾಲೂಕು, 19 ಜಿಲ್ಲಾಸ್ಪತ್ರೆಗಳ ಆರೋಗ್ಯ ಮೂಲಸೌಕರ್ಯ ಮೇಲ್ದರ್ಜೆಗೆ: ಡಿಸಿಎಂ ‌ಅಶ್ವತ್ಥನಾರಾಯಣ

1,500 ಕೋಟಿ ರೂ. ವೆಚ್ಚದಲ್ಲಿ 146 ತಾಲೂಕು, 19 ಜಿಲ್ಲಾಸ್ಪತ್ರೆಗಳ ಆರೋಗ್ಯ ಮೂಲಸೌಕರ್ಯ ಮೇಲ್ದರ್ಜೆಗೆ: ಡಿಸಿಎಂ ‌ಅಶ್ವತ್ಥನಾರಾಯಣ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಸಂಭವನೀಯ ಕೋವಿಡ್‌ ಮೂರನೇ ಅಲೆ ಸೇರಿ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ರಾಜ್ಯವನ್ನು ಸರ್ವಸಜ್ಜುಗೊಳಿಸಲು ತಕ್ಷಣವೇ ಮುಂದಾಗಿರುವ ರಾಜ್ಯ ಸರಕಾರವು 1,500 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ನಡೆದ ಕೋವಿಡ್‌ ಕಾರ್ಯಪಡೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದರಲ್ಲದೆ, 3  ತಿಂಗಳಲ್ಲಿ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾಗಲಿದೆ ಎಂದರು.

🔸ಅಗತ್ಯವಿರುವ 4000 ಹೆಚ್ಚು ವೈದ್ಯಕೀಯ ಸಿಬ್ಬಂದಿಗಳ ನೇಮಕ – ಇದಕ್ಕಾಗಿ 1500 ಕೋಟಿ ರೂ. ಅನುದಾನ.

🔸146 ತಾಲೂಕು ಆಸ್ಪತ್ರೆಗಳು, 19 ಜಿಲ್ಲಾಸ್ಪತ್ರೆಗಳು ಮೇಲ್ದರ್ಜೆಗೆ. ಆಸ್ಪತ್ರೆಗಳ ನಿರ್ವಹಣೆ ಮತ್ತು ಸೇವೆಯ ಗುಣಮಟ್ಟ ಕಾಯ್ದುಕೊಳ್ಳಲು ತಾಂತ್ರಿಕ ಸಮಿತಿಯ ನೇಮಕ.

2/5

— Dr. Ashwathnarayan C. N. (@drashwathcn) June 7, 2021

ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಬಗ್ಗ ಡಿಸಿಎಂ ನೀಡಿದ ಮಾಹಿತಿಯ ಸಾರಾಂಶ ಹೀಗಿದೆ;

  • 146 ತಾಲೂಕು ಹಾಗೂ 16 ಜಿಲ್ಲಾಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಸಮಾನವಾಗಿ ಇನ್ನು 3 ಆಸ್ಪತ್ರೆಗಳ ಸೌಲಭ್ಯಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆ ಇದು. ಇಡೀ ವ್ಯವಸ್ಥೆಯನ್ನು ತಾಂತ್ರಿಕವಾಗಿ ಸಂಪೂರ್ಣ ಮೇಲ್ದರ್ಜೆಗೇರಿಸಲಾಗುವುದು.
  • ಪ್ರಾಥಮಿಕ ಮಟ್ಟದಿಂದ ಜಿಲ್ಲಾ ಆಸ್ಪತ್ರೆವರೆಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯದಲ್ಲಿ ಆಮೂಲಾಗ್ರ ಸುಧಾರಣೆ ತರಲಾಗುವುದು. ಪ್ರತೀ ತಾಲೂಕು ಆಸ್ಪತ್ರೆಯಲ್ಲೂ ಒಟ್ಟು 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಇಷ್ಟೂ ಹಾಸಿಗೆಗಳ ಪೈಕಿ 25 ಐಸಿಯು, 25 ಎಚ್‌ಡಿಯು ಹಾಗೂ 50 ಆಕ್ಸಿಜನ್‌ ಹಾಸಿಗೆಗಳಿರುತ್ತವೆ. ಜತೆಯಲ್ಲಿಯೇ ವೆಂಟಿಲೇಟರ್‌, ಮಾನೀಟರ್‌ಗಳು & ಬೈಪ್ಯಾಪ್ ವ್ಯವಸ್ಥೆ ಇರುವ ಹಾಗೆ ಕ್ರಮ ವಹಿಸಲಾಗುವುದು. ರಿಮೋಟ್‌ ಐಸಿಯುಗಳ ಜತೆಗೆ ಎಲ್ಲ ರೀತಿಯ ಡಯಾಗ್ನಾಸ್ಟಿಕ್‌ ಸೌಲಭ್ಯವನ್ನೂ ಒದಗಿಸಲಾಗುವುದು. ಈ ಇಡೀ ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ಎಲ್ಲ ನುರಿತ ಸಿಬ್ಬಂದಿಯನ್ನು ಸಮರೋಪಾದಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
  • ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆ ತನಕ ಇಷ್ಟೆಲ್ಲ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ಕೊನೆ ಪಕ್ಷ 4,000  ವೈದ್ಯರ ಅಗತ್ಯವಿದೆ. ಒಬ್ಬ ವೈದ್ಯರಿಗೆ ಮೂವರು ನರ್ಸ್‌ಗಳಂತೆ, ಒಬ್ಬ ವೈದ್ಯರಿಗೆ ಗ್ರೂಪ್‌ ʼಡಿʼ ಮೂವರು ಸಿಬ್ಬಂದಿ ಅಗತ್ಯ. ಮೂಲಸೌಲಭ್ಯ ಮತ್ತು ಸಿಬ್ಬಂದಿ ವೇತನ ಸಲುವಾಗಿ 1,500 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ವಾರ್ಷಿಕ 600 ಕೋಟಿ ರೂ. ವೇತನ ಹೊರತುಪಡಿಸಿದರೆ ಮಿಕ್ಕ ಬಹುತೇಕ ವೆಚ್ಚ ಒಮ್ಮೆಯಷ್ಟೇ ಆಗುವಂಥದ್ದು. ಉಳಿದಂತೆ ಕಟ್ಟಡ, ಆಕ್ಸಿಜನ್‌ ಜನರೇಟರ್‌, ವೆಂಟಿಲೇಟರ್‌, ಯಂತ್ರೋಪಕರಣ ಇತ್ಯಾದಿ ಸೇರಿ 800 ಕೋಟಿ ರೂ. ವೆಚ್ಚ ಆಗಲಿದೆ. ಈ ಕುರಿತ ಅಂದಾಜು ವೆಚ್ಚದ ವಿವರಗಳನ್ನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆಯಲ್ಲಿ ಮಂಡಿಸಿದ್ದು, ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
  • ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಯಾರೂ ತಮ್ಮ ತಾಲೂಕು ಬಿಟ್ಟು ಆಚೆ ಬರಬಾರದು. ಜಿಲ್ಲಾ ಮಟ್ಟದಲ್ಲೇ 97% ಆರೋಗ್ಯ ಸೇವೆ ಸಿಗಬೇಕು. ಸರಕಾರಿ ಆಸ್ಪತ್ರೆ ಎಂದರೆ, ನಿರ್ವಹಣೆ & ಗುಣಮಟ್ಟದಲ್ಲಿ ಕೊರತೆ ಆಗಬಾರದು. ಇದು ಸರಕಾರದ ಉದ್ದೇಶ. ಇದಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ಬಿಸಿಜಿ (ಬಾಸ್ಟನ್‌ ಕನ್ಸಲ್‌ಟಿಂಗ್‌ ಗ್ರೂಪ್)‌ ನಮಗೆ CSR ಮೂಲಕ ಉಚಿತವಾಗಿ ತಾಂತ್ರಿಕ ನೆರವು ನೀಡುತ್ತಿದೆ.

🔸ಬ್ಲ್ಯಾಕ್‌ ಫಂಗಸ್‌ ರೋಗಿಗಳ ಚಿಕಿತ್ಸೆಗಾಗಿ 25,000 #Amphotericin ವಯಲ್ಸ್‌ಗಳನ್ನು ಕೇಂದ್ರ ಸರ್ಕಾರ ಒದಗಿಸಲಿದೆ.

🔸ಪ್ರತಿನಿತ್ಯ 6ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಈ ತಿಂಗಳು 80 ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು.

🔸Covid Mutation ಅಧ್ಯಯನಕ್ಕೆ ರಾಜ್ಯದಲ್ಲಿ 7 Genome Sequencing ಲ್ಯಾಬ್​ಗಳ ಸ್ಥಾಪನೆ.

4/5

— Dr. Ashwathnarayan C. N. (@drashwathcn) June 7, 2021

ಬೆಂಗಳೂರು ನಗರದಲ್ಲೂ ವಿಸ್ತರಣೆ:

ಬೆಂಗಳೂರಿನಲ್ಲಿ ಆರೋಗ್ಯ ಮೂಲಸೌಕರ್ಯ ವಿಸ್ತರಿಸಲು ಸ್ಥಳದ ಅಭಾವ ಇದ್ದು, ಹೊಸ ಜಾಗಗಳನ್ನು ಅಥವಾ ಲಭ್ಯ ಸ್ಥಳಗಳನ್ನು ಗುರುತಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಅಗಾಧವಾಗಿ ಹೆಚ್ಚಿಸಲಾಗುವುದು. ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆಗಳಲ್ಲಿ ಒಳಗೊಳ್ಳದ ನಿತ್ಯದ ಕಾಯಿಲೆಗಳಿಗೂ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 2ನೇ ಹಂತದ ಆಸ್ಪತ್ರೆಗಳನ್ನು ಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುವುದು. ಈ ಉದ್ದೇಶಕ್ಕೆ ಸ್ಥಳದ ಅಗತ್ಯವಿದೆ. ಒಂದೆರಡು ವಾರದಲ್ಲಿ ಈ ಸಮಿತಿ ವರದಿ ನೀಡಲಿದೆ.

ಬೆಂಗಳೂರಿನಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು 100 ಹಾಸಿಗೆಗಳ ಉತ್ಕೃಷ್ಟ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತಿದೆ. ಇಲ್ಲಿಯೂ 25 ಐಸಿಯು, 25 ಎಚ್‌ಡಿಯು ಹಾಗೂ 50 ಆಕ್ಸಿಜನ್‌ ಹಾಸಿಗೆಗಳಿರುತ್ತವೆ. ಜತೆಗೆ, 4 ವಿಧಾನಸಭೆ ಕ್ಷೇತ್ರಗಳಿಗೊಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸ್ಥಾಪನೆ ಮಾಡಲಾಗುವುದು.

🔸ಕೇಂದ್ರ ಸರ್ಕಾರದಿಂದ 1000LPM ಸಾಮರ್ಥ್ಯದ ಆಕ್ಸಿಜನ್‌ ಜನರೇಟರ್‌ಗಳನ್ನು ಸರ್ಕಾರಿ ಮೆಡಿಕಲ್‌ ಕಾಲೇಜುಗಳಿಗೆ ನೀಡಲಾಗಿದೆ. ರಾಜ್ಯ ಸರ್ಕಾರದಿಂದ 1500LPM ಸಾಮರ್ಥ್ಯದ ಆಕ್ಸಿಜನ್‌ ಜನರೇಟರ್‌ಗಳ ಅಳವಡಿಕೆ.

ಎಲ್ಲಾ ಆಸ್ಪತ್ರೆ,ಕಾಲೇಜುಗಳು ಸೇರಿ 500 ಮೆಟ್ರಿಕ್‌ ಟನ್‌ ಆಕ್ಸಿಜನ್ ಪೂರೈಸುವ ಗುರಿ.

🔸1ಲಕ್ಷ #ayush64 ಔಷಧಿ ಖರೀದಿ.

5/5

— Dr. Ashwathnarayan C. N. (@drashwathcn) June 7, 2021

ವಾರ್‌ ರೂಂಗೆ ಅನುಸಂಧಾನ:

ಕೋವಿಡ್‌ ನಿರ್ವಹಣೆಯಲ್ಲಿ ಆಪ್ತಮಿತ್ರ, ಟೆಲಿ ಟ್ರಯಾಜಿಂಗ್‌, ಸುವರ್ಣ ಆರೋಗ್ಯ ಟ್ರಸ್ಟ್‌ ಸೇರಿ ವಿವಿಧ ನೆಟ್‌ವರ್ಕ್‌ಗಳು, ಆಪ್‌ಗಳು ಇತ್ಯಾದಿ ಇದ್ದು ಪ್ರತ್ಯೇಕವಾಗಿ ಕೆಲಸ ಮಾಡುತ್ತಿವೆ. ಇವೆಲ್ಲವನ್ನೂ ಕೋವಿಡ್‌ ವಾರ್‌ರೂಂಗೆ ಅನುಸಂಧಾನ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಹೊಸ ವ್ಯವಸ್ಥೆಗೆ ವಾರ್‌ ರೂಂ ಉಸ್ತುವಾರಿಯೇ ಅಧ್ಯಕ್ಷರಾಗುತ್ತಾರೆ. ವಿವಿಧ ಸಮಿತಿಗಳ ಉಸ್ತುವಾರಿ ಹೊಂದಿರುವವರೆಲ್ಲ ವಾರ್‌ ರೂಂ ಉಸ್ತುವಾರಿ ಸಮಿತಿ ಸದಸ್ಯರಾಗಿರುತ್ತಾರೆ. ಮೂರನೇ ಅಲೆ ಇದೊಂದು ಅತ್ಯುತ್ತಮ ಕ್ರಮವಾಗಿದೆ. ಎರಡು ತಿಂಗಳಲ್ಲಿ ಇದನ್ನು ಮಾಡಲಾಗುವುದು.

ಯುವಜನರಿಗೆ ಆರೋಗ್ಯ ಕುಶಲತೆ ತರಬೇತಿ:

ಆರೋಗ್ಯ ವ್ಯವಸ್ಥೆ ಅರೆವೈದ್ಯ ಸಿಬ್ಬಂದಿ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಹಯೋಗದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ಎಸ್‌ಎಸ್‌ಎಲ್‌ಸಿ-ಪಿಯುಸಿ ವ್ಯಾಸಂಗ ಮಾಡಿರುವ 5,000 ಯುವ ಜನರಿಗೆ 3 ತಿಂಗಳ ಉಚಿತ ತರಬೇತಿಯನ್ನು ಆಯಾ ಜಿಲ್ಲಾ ಕೇಂದ್ರದಲ್ಲೇ ನೀಡಲಾಗುವುದು. ಈ ಸಂದರ್ಭದಲ್ಲಿ ಮಾಸಿಕ 5,000 ಗೌರವ ಧನ ನೀಡಲಾಗುವುದು. 

5 ಲಕ್ಷ ವಯಲ್ಸ್‌ ರೆಮಿಡಿಸಿವಿರ್‌ ಸಂಗ್ರಹ:

3ನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ 5 ಲಕ್ಷ ವಯಲ್ಸ್‌ ರೆಮಿಡಿಸಿವಿರ್‌ ಔಷಧಿಯನ್ನು ಸಂಗ್ರಹ ಮಾಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಸದ್ಯಕ್ಕೆ ನಮ್ಮಲ್ಲಿ 2 ಲಕ್ಷ ವಯಲ್ಸ್‌ ಸಂಗ್ರಹ ಇದೆ. ಇನ್ನು 2,156 ಕಪ್ಪು ಶಿಲೀಂದ್ರದ ಪ್ರಕರಣಗಳು ವರದಿಯಾಗಿದ್ದು, ಅದಕ್ಕೂ ಔಷಧಿ ಕೊರತೆಯಾಗದಂತೆ ಲೈಸೋಮಲ್‌ ಆಪ್ತೋಟೆರಿಸಿನ್-ಬಿ ಔಷಧಿಯನ್ನು 23,000 ವಯಲ್ಸ್‌ ಕೇಂದ್ರ ಒದಗಿಸಿದೆ. ಪ್ರತಿದಿನ 10,000 ವಯಲ್ಸ್‌ ಅಗತ್ಯವಿದ್ದು, ಇದಕ್ಕೆ ಪರ್ಯಾಯವಾಗಿ ʼಎಮಲ್ಷನ್‌ ಆಪ್ತೋಮಲ್‌ ಟೆರಿಸನ್-ಬಿʼ ಔಷಧಿಯ 25,000 ವಯಲ್ಸ್‌ 10ನೇ ತಾರೀಖು ಪೂರೈಕೆಯಾಗಲಿದೆ.

ಖಾಸಗಿ ಆಸ್ಪತ್ರೆ & ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ 7,500 ಸಾಮಾನ್ಯ ಬೆಡ್‌ಗಳನ್ನು ಆಕ್ಸಿಜನ್‌ ಬೆಡ್‌ಗಳನ್ನಾಗಿ ಪರಿವರ್ತನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕೆ ಅಗತ್ಯ ಆರ್ಥಿಕಿ ನೆರವು ನೀಡಲಾಗುವುದು.
 
ಜುಲೈ ಹೊತ್ತಿಗೆ ರಾಜ್ಯದಲ್ಲಿಯೇ 500 ಮೆ.ಟನ್‌ ಆಕ್ಸಿಜನ್‌ ಉತ್ಪಾದನೆಗೆ ಕ್ರಮ ವಹಿಸಲಾಗುವುದು. ಅದಕ್ಕೆ ಬೇಕಾದ ಅಗತ್ಯ ಆಕ್ಸಿಜನ್‌ ಜನರೇಟರ್‌ಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಕಡೆಯಿಂದ ಒದಗಿಸಲಾಗುವುದು. ಜತೆಗೆ, ಜಿಲ್ಲಾಸ್ಪತ್ರೆಗಳಲ್ಲಿ 6 ಕೆಎಲ್‌ ಆಮ್ಲಜನಕ ಸಂಗ್ರಹ ಸಾಮರ್ಥ್ಯ ಇದ್ದು, ಅದ್ನು 13 ಕೆಎಲ್‌ಗೆ ಹೆಚ್ಚಿಸಲಾಗುವುದು, ಮೆಡಿಕಲ್‌ ಕಾಲೇಜ್‌ಗಳಲ್ಲಿ 20 ಕೆಎಲ್‌ ಸಂಗ್ರಹ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗುವುದು.

About the Author

The Bengaluru Live

Administrator

Visit Website View All Posts

Post navigation

Previous: ಜಿಯೋ ಸಾವನ್‌ ನಲ್ಲಿ ಇನ್ನು ಮುಂದೆ ವಿಡಿಯೋ ನೋಡಿ: ಬಂದಿದೆ ಜಿಯೋಸಾವನ್ ಟಿವಿ
Next: ಬಿಎಂಟಿಸಿ ದರ ಏರಿಕೆ ಸದ್ಯಕ್ಕೆ ಇಲ್ಲ:ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟನೆ

Related Stories

ಉದ್ದನೆಯ ಮೇಜಿನ ಎದುರು ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳ ಜೊತೆ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಒಬ್ಬ ಸಚಿವ
  • ಕರ್ನಾಟಕ

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು

The Bengaluru Live November 19, 2026 5:38 PM
ಮೈಕ್‌ಗಳಿರುವ ವೇದಿಕೆಯ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಮೇಕೆದಾಟು ವಿಚಾರದಲ್ಲಿ ಇಡೀ ರಾಜ್ಯ ಒಂದಾಗಿದೆ, ಕುಡಿಯುವ ನೀರಿಗೆ ಮಾತ್ರ ಬಳಕೆ, ವ್ಯವಸಾಯಕ್ಕಲ್ಲ: ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 19, 2026 3:36 PM
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೈದ್ಯಾಧಿಕಾರಿಗಳ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಫಲಕದ ಮುಂದೆ ಬೆಳಗಿದ ದೀಪದ ಸುತ್ತ ನಿಂತಿರುವ ಎಂಟು ಮಂದಿ
  • ಕರ್ನಾಟಕ

ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು

The Bengaluru Live November 19, 2026 2:37 PM

Latest Post

ಕೆಇಎ: ನ.20ರಿಂದ 22ರವರೆಗೆ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಸೇರಿ ವಿವಿಧ ನೇಮಕಾತಿ ಪರೀಕ್ಷೆ; ವೆಬ್ ಕಾಸ್ಟಿಂಗ್, ಕಟ್ಟೆಚ್ಚರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಕಟ್ಟಡಗಳು, ಲಾಂಛನ ಮತ್ತು ಹೆಸರಿನೊಂದಿಗೆ

ಕೆಇಎ: ನ.20ರಿಂದ 22ರವರೆಗೆ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಸೇರಿ ವಿವಿಧ ನೇಮಕಾತಿ ಪರೀಕ್ಷೆ; ವೆಬ್ ಕಾಸ್ಟಿಂಗ್, ಕಟ್ಟೆಚ್ಚರ

November 19, 2026 7:43 PM
ಪಿಜಿ ವೈದ್ಯಕೀಯ ಎರಡನೇ ಸುತ್ತು: ಮುಂಗಡ ಹಣ ಪಾವತಿಗೆ ನ.21ರವರೆಗೆ ದಿನಾಂಕ ವಿಸ್ತರಣೆ; ಆಪ್ಷನ್ಸ್ ದಾಖಲಿಸಲು ನ.23ರವರೆಗೆ ಅವಕಾಶ ಕೆಇಎ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ

ಪಿಜಿ ವೈದ್ಯಕೀಯ ಎರಡನೇ ಸುತ್ತು: ಮುಂಗಡ ಹಣ ಪಾವತಿಗೆ ನ.21ರವರೆಗೆ ದಿನಾಂಕ ವಿಸ್ತರಣೆ; ಆಪ್ಷನ್ಸ್ ದಾಖಲಿಸಲು ನ.23ರವರೆಗೆ ಅವಕಾಶ

November 19, 2026 7:43 PM
ವಯೋಸಹಜ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಸಿದ್ದರಾಮಯ್ಯ; ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರೋಪ ನಿರಾಕರಣೆ ಹೂವಿನ ಅಲಂಕಾರದ ವೇದಿಕೆಯಲ್ಲಿ ಹಿನ್ನೆಲೆಯಲ್ಲಿ ದೊಡ್ಡ ರಾಷ್ಟ್ರಧ್ವಜದ ಮುಂದೆ ತ್ರಿವರ್ಣ ಶಾಲು ಹಾಕಿದ ಕಾಂಗ್ರೆಸ್ ನಾಯಕರು

ವಯೋಸಹಜ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಸಿದ್ದರಾಮಯ್ಯ; ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರೋಪ ನಿರಾಕರಣೆ

November 19, 2026 7:40 PM
ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ ಇಂದಿರಾ ಕ್ಯಾಂಟೀನ್ ಕುರಿತ ಹಿನ್ನೆಲೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸ್ಮರಣಿಕೆ ಹಿಡಿದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ

November 19, 2026 7:37 PM
ತನ್ನ ಕಡಲೆಕಾಯಿ ಎಣ್ಣೆ ಅಸಲಿ ಕೋಲ್ಡ್ ಪ್ರೆಸ್ಡ್, ಇದು ಲೇಬಲ್ ವಿಚಾರ ಮಾತ್ರ ಎಂದ ಬೋಲಾಸ್ ಆಗ್ರೋ; ತಪ್ಪು ಲೇಬಲ್ ಉಲ್ಲೇಖಿಸಿದ್ದ ಆರೋಗ್ಯ ಇಲಾಖೆ ಟಿಪ್ಪಣಿ ಬೋಲಾಸ್ ಕಡಲೆಕಾಯಿ ಎಣ್ಣೆಯ ಬಾಟಲಿಯನ್ನು ಹಿಡಿದಿರುವ ಕೈ
  • Uncategorized

ತನ್ನ ಕಡಲೆಕಾಯಿ ಎಣ್ಣೆ ಅಸಲಿ ಕೋಲ್ಡ್ ಪ್ರೆಸ್ಡ್, ಇದು ಲೇಬಲ್ ವಿಚಾರ ಮಾತ್ರ ಎಂದ ಬೋಲಾಸ್ ಆಗ್ರೋ; ತಪ್ಪು ಲೇಬಲ್ ಉಲ್ಲೇಖಿಸಿದ್ದ ಆರೋಗ್ಯ ಇಲಾಖೆ ಟಿಪ್ಪಣಿ

November 19, 2026 6:42 PM
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಒನ್ ಅಭಿಯಾನದಡಿ 273 ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು; ದಂಡ, ಕಾನೂನು ಕ್ರಮದ ಎಚ್ಚರಿಕೆ ನಗರದ ರಸ್ತೆಯಲ್ಲಿ ಕಂಬಕ್ಕೆ ಒರಗಿದ ಬಿದ್ದಿರುವ ಬ್ಯಾನರ್ ಚೌಕಟ್ಟು; ಹಿಂದೆ ವಾಹನ ಸಂಚಾರ ಮತ್ತು ಕಟ್ಟಡಗಳು

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಒನ್ ಅಭಿಯಾನದಡಿ 273 ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು; ದಂಡ, ಕಾನೂನು ಕ್ರಮದ ಎಚ್ಚರಿಕೆ

November 19, 2026 6:37 PM

ನೀವು ತಪ್ಪಿಸಿಕೊಂಡಿರಬಹುದು

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಕಟ್ಟಡಗಳು, ಲಾಂಛನ ಮತ್ತು ಹೆಸರಿನೊಂದಿಗೆ

ಕೆಇಎ: ನ.20ರಿಂದ 22ರವರೆಗೆ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಸೇರಿ ವಿವಿಧ ನೇಮಕಾತಿ ಪರೀಕ್ಷೆ; ವೆಬ್ ಕಾಸ್ಟಿಂಗ್, ಕಟ್ಟೆಚ್ಚರ

The Bengaluru Live November 19, 2026 7:43 PM
ಕೆಇಎ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ

ಪಿಜಿ ವೈದ್ಯಕೀಯ ಎರಡನೇ ಸುತ್ತು: ಮುಂಗಡ ಹಣ ಪಾವತಿಗೆ ನ.21ರವರೆಗೆ ದಿನಾಂಕ ವಿಸ್ತರಣೆ; ಆಪ್ಷನ್ಸ್ ದಾಖಲಿಸಲು ನ.23ರವರೆಗೆ ಅವಕಾಶ

The Bengaluru Live November 19, 2026 7:43 PM
ಹೂವಿನ ಅಲಂಕಾರದ ವೇದಿಕೆಯಲ್ಲಿ ಹಿನ್ನೆಲೆಯಲ್ಲಿ ದೊಡ್ಡ ರಾಷ್ಟ್ರಧ್ವಜದ ಮುಂದೆ ತ್ರಿವರ್ಣ ಶಾಲು ಹಾಕಿದ ಕಾಂಗ್ರೆಸ್ ನಾಯಕರು

ವಯೋಸಹಜ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಸಿದ್ದರಾಮಯ್ಯ; ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರೋಪ ನಿರಾಕರಣೆ

The Bengaluru Live November 19, 2026 7:40 PM
ಇಂದಿರಾ ಕ್ಯಾಂಟೀನ್ ಕುರಿತ ಹಿನ್ನೆಲೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸ್ಮರಣಿಕೆ ಹಿಡಿದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ

The Bengaluru Live November 19, 2026 7:37 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕೆಇಎ: ನ.20ರಿಂದ 22ರವರೆಗೆ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಸೇರಿ ವಿವಿಧ ನೇಮಕಾತಿ ಪರೀಕ್ಷೆ; ವೆಬ್ ಕಾಸ್ಟಿಂಗ್, ಕಟ್ಟೆಚ್ಚರ
  • ಪಿಜಿ ವೈದ್ಯಕೀಯ ಎರಡನೇ ಸುತ್ತು: ಮುಂಗಡ ಹಣ ಪಾವತಿಗೆ ನ.21ರವರೆಗೆ ದಿನಾಂಕ ವಿಸ್ತರಣೆ; ಆಪ್ಷನ್ಸ್ ದಾಖಲಿಸಲು ನ.23ರವರೆಗೆ ಅವಕಾಶ
  • ವಯೋಸಹಜ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಸಿದ್ದರಾಮಯ್ಯ; ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರೋಪ ನಿರಾಕರಣೆ
  • ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ
©Copyright 2025 The Bengaluru Live All rights reserved. | MoreNews by AF themes.