Home ಅಪರಾಧ ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ, ಬೆಂಗಳೂರಿನ 43 ಕಡೆ ಎನ್ಐಎ ಶೋಧ

ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ, ಬೆಂಗಳೂರಿನ 43 ಕಡೆ ಎನ್ಐಎ ಶೋಧ

45
0
NIA

ಬೆಂಗಳೂರು:

ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಬುಧವಾರ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ)ದ ಕಚೇರಿಗಳು ಸೇರಿದಂತೆ 43 ಕಡೆ ಶೋಧನೆ ನಡೆಸಿದೆ.

riots

ನಾಲ್ಕು ಎಸ್ಡಿಪಿಐ ಕಚೇರಿಗಳು ಸೇರಿದಂತೆ ನಗರದ ಒಟ್ಟು 43 ಕಡೆ ಎನ್ಐಎ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದ್ದು . ದಾಳಿ ವೇಳೆ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದೂ ತಿಳಿದುಬಂದಿದೆ.

ಕಳೆದ ಆಗಸ್ಟ್ 12ರಂದು ನಡೆದ ಈ ಗಲಭೆಯಲ್ಲಿ ಸಾವು, ನೋವು ಸಂಭವಿಸಿದ್ದಲ್ಲದೆ, ಡಿಜೆ ಹಳ್ಳಿ ಪೊಲೀಸ್ ಠಾಣೆ ಹಾಗೂ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ಅಖಂಡ ಶ್ರೀನಿವಾಸಮೂರ್ತಿ ನಿವಾಸಕ್ಕೆ ಬೆಂಕಿ ಹಚ್ಚಲಾಗಿತ್ತು . ಈ ಘಟನೆ ಆಸಂಬಂಧ 350ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here