ಕಳೆದ 1 ವರ್ಷದಲ್ಲಿ ಫೌಂಡೇಷನ್ 550 ಎಂಎಸ್‍ಇಗಳು ಮತ್ತು ಅವುಗಳ 5000 ಉದ್ಯೋಗಿಗಳಿಗೆ ನೆರವು
ಬೆಂಗಳೂರು:
ಅಂತಾರಾಷ್ಟ್ರೀಯ ಎಂಎಸ್‍ಎಂಇ ದಿನನದ ಅಂಗವಾಗಿ ಜಾಗತಿಕ ಮಟ್ಟದ ಲಾಭೋದ್ದೇಶವಿಲ್ಲದ ಸ್ವಯಂ ಸೇವಾ ಸಂಸ್ಥೆಯಾಗಿರುವ ವಾಧ್ವಾನಿ ಫೌಂಡೇಷನ್ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಎಂಎಸ್‍ಎಂಇ ವಲಯದ ಉದ್ದಿಮೆಗಳು ತಮ್ಮ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳುವ ಸಾಮಥ್ರ್ಯಗಳೊಂದಿಗೆ ಸಬಲೀಕರಣಗೊಳಿಸಲು ಮುಂದಾಗಿದೆ.
ಅಂತಾರಾಷ್ಟ್ರೀಯ ಎಂಎಸ್‍ಎಂಇ ದಿನದ ಹಿನ್ನೆಲೆಯಲ್ಲಿ ಈ ವಲಯವು ಎದುರಿಸುತ್ತಿರುವ ಸಂಕಷ್ಟಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ. ಈ ಎಂಎಸ್‍ಎಂಇಗಳು ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಉತ್ಸಾಹಭರಿತ ವಲಯಕ್ಕೆ ಹೆಚ್ಚಿನ ತೀವ್ರತೆ ಮತ್ತು ಕಾರ್ಯತಂತ್ರದ ರಚನಾತ್ಮಕ ಬೆಂಬಲದೊಂದಿಗೆ ಮಾತ್ರ ಸಂಪೂರ್ಣ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ನಗದು ಹರಿವು, ವೇತನ, ಸಾಲಗಾರರ ಮೇಲೆ ಒತ್ತಡ ಹೇರುವುದು ಮತ್ತು ಅದರ ನಿಜವಾದ ಸಾಮಥ್ರ್ಯವನ್ನು ಅರಿತುಕೊಳ್ಳುವಲ್ಲಿ ಬೆಳವಣಿಗೆ ಎಲ್ಲಿದೆ ಎಂದು ಕಂಡುಹಿಡಿಯುವ ಬಹುಮುಖ್ಯ ಸವಾಲುಗಳನ್ನು ಎದುರಿಸುವ ಮೂಲಕ ಕ್ಷೇತ್ರವನ್ನು ಸ್ಥಿರಗೊಳಿಸುವುದು ಅತ್ಯಗತ್ಯವಾಗಿದೆ.
ಇಂತಹ ಕ್ಲಿಷ್ಟಕರವಾದ ಮತ್ತು ಸವಾಲಿನ ಸಮಯದಲ್ಲಿ ಮತ್ತು ಎಂಎಸ್‍ಎಂಇ ದಿನ 2021 ರ ಅಂಗವಾಗಿ ಮಾತನಾಡಿದ ವಾಧ್ವಾನಿ ಅಡ್ವಾಂಟೇಜ್‍ನ ಕಾರ್ಯಕಾರಿ ಉಪಾಧ್ಯಕ್ಷ ಸಮೀರ್ ಸಾತೆ ಅವರು, “ಸಾಂಕ್ರಾಮಿಕವು ಜಗತ್ತನ್ನ್ದು, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳನ್ನು ತೊಂದರೆಗೊಳಿಸುತ್ತಿರುವುದರಿಂದ ಎಂಎಸ್‍ಎಂಇಗಳಿಗೆ ಗಮನ, ಕಾಳಜಿ, ಪೋಷಣೆ ಮತ್ತು ನವಜೀವನ ಪಡೆಯುವುದು ಅಗತ್ಯವಾಗಿದೆ. ಅದು ವಿಫಲವಾದರೆ ವ್ಯವಹಾರ, ವಾಣಿಜ್ಯ, ಅರ್ಥಶಾಸ್ತ್ರ ಮತ್ತು ಜೀವನೋಪಾಯಗಳ ಮಟ್ಟ ಕುಸಿಯುತ್ತದೆ ಹಾಗೂ ಯಾವುದೇ ಸಮಯದಲ್ಲೂ ಅದು ಇಂಗಿ ಹೋಗಬಹುದು’’ ಎಂದು ಅಭಿಪ್ರಾಯಪಟ್ಟರು.
“ಎಂಎಸ್‍ಎಂಇ ನೋಂದಣಿಯಲ್ಲಿನ ಇತ್ತೀಚಿನ ಉಲ್ಬಣ ಮತ್ತು ಡಿಜಿಟಲ್ ನಾವೀನ್ಯತೆಯನ್ನು ತಮ್ಮ ವ್ಯವಹಾರಗಳಲ್ಲಿ ಸೇರಿಸಿಕೊಳ್ಳುವುದು ಸಾಂಕ್ರಾಮಿಕ ರೋಗದ ಹೊರತಾಗಿಯೂ ಎಂಎಸ್‍ಎಂಇಗಳ ಸ್ಥಿತಿಸ್ಥಾಪಕತ್ವದ ಪ್ರೋತ್ಸಾಹಕ ಸೂಚಕವಾಗಿದೆ. ವಾಧ್ವಾನಿ ಅಡ್ವಾಟೇಜ್ ತಮ್ಮ ವ್ಯವಹಾರದ ಮೂಲಭೂತ ಅಂಶಗಳನ್ನು ವೇಗಗೊಳಿಸಲು ಮತ್ತು ಬಲಪಡಿಸುವ ನಿಟ್ಟಿನಲ್ಲಿ ಮಧ್ಯಮ ಅವಧಿಯಲ್ಲಿ ತಮ್ಮ ವ್ಯವಹಾರವನ್ನು ಸ್ಥಿರಗೊಳಿಸಲು ಹಾಗೂ ದೀರ್ಘಾವಧಿಯಲ್ಲಿ ತ್ವರಿತ ಬೆಳವಣಿಗೆಗೆ ಅನುಕೂಲವಾಗುವಂತೆ ಕೇಂದ್ರೀಕರಿಸುತ್ತದೆ. ಸ್ವಯಂ ವ್ಯವಹಾರಗಳ ಅನ್ವೇಷಣೆ ಮತ್ತು ಪರಿವರ್ತನೆ ಪರಿಕರಗಳ ನೆರವಿನಿಂದ ಅವರ ಬೆಳವಣಿಗೆಯ ಸಾಮಥ್ರ್ಯವನ್ನು ಹೆಚ್ಚಿಸಲು ನಾವು ಸಾಮಥ್ರ್ಯ ಹೊಂದಿರುವ ವ್ಯವಹಾರಗಳಿಗೆ ಅಧಿಕಾರ ನೀಡುತ್ತೇವೆ. ಉದ್ಯಮಿಗಳು ತಮ್ಮದೇ ಆದ ಸಲಹೆಗಾರರಾಗಲು ತರಬೇತಿ ಪಡೆಯಬೇಕೆಂದು ನಾವು ಬಯಸುತ್ತೇವೆ’’ ಎಂದು ತಿಳಿಸಿದರು.
ಎಂಎಸ್‍ಎಂಇ ವಲಯವು ದೇಶದ ಆರ್ಥಿಕತೆಯ ಬೆಳವಣಿಗೆಯ ಎಂಜಿನ್ ಎಂದು ಪರಿಗಣಿಸಲಾಗಿದೆ. ಇದು ಜಿಡಿಪಿ ಮತ್ತು ಉದ್ಯೋಗ ಉತ್ಪಾದನೆಯಲ್ಲಿ ಆರ್ಥಿಕತೆಯ ಶೇ.30 ಕ್ಕಿಂತ ಹೆಚ್ಚು ಕೊಡುಗೆಯನ್ನು ನೀಡುತ್ತದೆ. ಕೋವಿಡ್ ಸಾಂಕ್ರಾಮಿಕವು ದೇಶದ ಸಂಪೂರ್ಣ ಎಂಎಸ್‍ಎಂಇ ವಲಯದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಂಎಸ್‍ಎಂಇಗಳನ್ನು ಬೆಂಬಲಿಸುವುದು ಅತ್ಯಗತ್ಯವಾಗಿದೆ.