Home ಅಪರಾಧ ಬೆಂಗಳೂರು: ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳೆ, ಕಾರು ಅಪಘಾತಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಬೆಂಗಳೂರು: ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳೆ, ಕಾರು ಅಪಘಾತಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವು

20
0
Bengaluru : Woman steps accelerator instead of the brake, biker died on the spot
bengaluru

ಬೆಂಗಳೂರು:

ಕಾರು ಚಾಲನೆ ಮಾಡುತ್ತಿದ್ದ ವೇಳೆ ಚಾಲಕಿ ಮಾಡಿದ ಎಡವಟ್ಟಿಗೆ ಬೆಂಗಳೂರಿನಲ್ಲಿ ಜೀವವೊಂದು ಬಲಿಯಾಗಿದೆ. ಹೆಸರಘಟ್ಟ ಮುಖ್ಯರಸ್ತೆಯ ಬಾಗಲಗುಂಟೆಯಲ್ಲಿ ಇಂದು ಬೆಳಗ್ಗೆ ದುರ್ಘಟನೆ ನಡೆದಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಆಗಿದ್ದೇನು?: ಕಾರು ಚಲಾಯಿಸುತ್ತಿದ್ದ ಮಹಿಳೆ ಬಾಗಲಗುಂಟೆ ವೃತ್ತಕ್ಕೆ ಬರುವ ಹೊತ್ತಿಗೆ ಬ್ರೇಕ್ ಹಾಕುವ ಬದಲು ಎಕ್ಸಲೇಟರ್ ಒತ್ತಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಹೊಡೆದ ಗಡಿಬಿಡಿಗೆ ಆತಂಕದಿಂದ ಮಹಿಳೆ ಮತ್ತೆ ಎಕ್ಸಲೇಟರ್ ಒತ್ತಿದ್ದು ಬೈಕ್ ಚಾಲಕನನ್ನು 100 ಮೀಟರ್ ವರೆಗೆ ಎಳೆದುಕೊಂಡು ಹೋಗಿ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾರೆ. 

ಗಂಭೀರವಾಗಿ ಗಾಯಗೊಂಡ ಬೈಕ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೇ ಸಂಚಾರಿ ಪೊಲೀಸರು ವಾಗನರ್ ಕಾರು ಚಾಲಕಿ ಶುಭ ಅವರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. 

bengaluru
bengaluru

LEAVE A REPLY

Please enter your comment!
Please enter your name here