ಕರ್ನಾಟಕದ ಒಟ್ಟಾರೆ ಪಾಸಿಟಿವಿಟಿ ದರ ಶೇ. 6.02 ರಷ್ಟಿದೆ
ಬೆಂಗಳೂರು:
ಸೋಮವಾರ ಬೆಂಗಳೂರಿನಲ್ಲಿ ‘ಅನ್ಲಾಕ್ 1’ ಪ್ರಾರಂಭವಾಗುವ ಒಂದು ದಿನ ಮೊದಲು, ನಗರದ ಕೋವಿಡ್ -19 ಟೆಸ್ಟ್ ಪಾಸಿಟಿವಿಟಿ ದರವು 3.23% ರಷ್ಟಿದ್ದರೆ, ನಗರವು ಕಳೆದ 24 ಗಂಟೆಗಳಲ್ಲಿ 1,348 ಹೊಸ ಪ್ರಕರಣಗಳನ್ನು ವರದಿ ಮಾಡಿದೆ.
ಸೋಮವಾರ ಬೆಳಿಗ್ಗೆಯಿಂದ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳು ‘ಅನ್ಲಾಕ್’ ಮೋಡ್‌ಗೆ ಹೋದರೂ, ಕರ್ನಾಟಕದ ಒಟ್ಟಾರೆ ಪಾಸಿಟಿವಿಟಿ ದರ 6.02% ರಷ್ಟಿದೆ – ಇದು ಕೇಂದ್ರವು ಶಿಫಾರಸು ಮಾಡಿದ 5% ಗಿಂತ ಹೆಚ್ಚಾಗಿದೆ – ಕಳೆದ 24 ಗಂಟೆಗಳಲ್ಲಿ 1,29,617 ಪರೀಕ್ಷೆಗಳು ಮತ್ತು 7,810 ಹೊಸ ಪ್ರಕರಣಗಳು ವರದಿಯಾಗಿವೆ.
ಭಾನುವಾರ ರಾಜ್ಯವ್ಯಾಪಿ ಮತ್ತು ಬೆಂಗಳೂರಿನ ಅಂಕಿಅಂಶಗಳನ್ನು ಪ್ರಕಟಿಸಿದ ಕರ್ನಾಟಕದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ: “ಕಳೆದ 24 ಗಂಟೆಗಳಲ್ಲಿ 1,29,617 ಪರೀಕ್ಷೆಗಳು ಮತ್ತು 7,810 ಹೊಸ ಪ್ರಕರಣಗಳೊಂದಿಗೆ, ಕರ್ನಾಟಕದ ಪಾಸಿಟಿವಿಟಿ ದರವು 6.02% ರಷ್ಟಿದೆ. ಇಂದು ಬೆಂಗಳೂರಿನಲ್ಲಿ 4,125 ಸೇರಿದಂತೆ ರಾಜ್ಯದಲ್ಲಿ 18,648 ಚೇತರಿಕೆ ವರದಿಯಾಗಿದೆ. 41,618 ಪರೀಕ್ಷೆಗಳು ಮತ್ತು 1,348 ಹೊಸ ಪ್ರಕರಣಗಳೊಂದಿಗೆ, ಬೆಂಗಳೂರಿನ ಪಾಸಿಟಿವಿಟಿ ದರವು 3.23% ರಷ್ಟಿದೆ. ”
🔹With 1,29,617 tests and 7,810 new cases in last 24 hours Karnataka's positivity rate stands at 6.02%.
— Dr Sudhakar K (@mla_sudhakar) June 13, 2021
🔹18,648 recoveries were reported in the stage today including 4,125 in Bengaluru.
🔹With 41,618 tests and 1,348 new cases Bengaluru's positivity rate stands at 3.23%.
ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 125 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 32,913ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು 1,348 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,96,688ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 23 ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 18,648 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 25,51,365ಕ್ಕೆ ಏರಿಕೆಯಾಗಿದೆ. ಇನ್ನು 1,80,835 ಸಕ್ರೀಯ ಪ್ರಕರಣಗಳಿವೆ.
ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 1,348, ಬೆಳಗಾವಿಯಲ್ಲಿ 266, ಬಳ್ಳಾರಿಯಲ್ಲಿ 141, ಚಿಕ್ಕಬಳ್ಳಾಪುರದಲ್ಲಿ 141, ಚಿಕ್ಕಮಗಳೂರು 223, ದಕ್ಷಿಣ ಕನ್ನಡದಲ್ಲಿ 434, ದಾವಣಗೆರೆಯಲ್ಲಿ 391, ಹಾಸನದಲ್ಲಿ 581, ಮೈಸೂರಿನಲ್ಲಿ 1251, ಶಿವಮೊಗ್ಗದಲ್ಲಿ 393, ತುಮಕೂರಿನಲ್ಲಿ 342, ಉಡುಪಿಯಲ್ಲಿ 223, ಉತ್ತರ ಕನ್ನಡದಲ್ಲಿ 250 ಪ್ರಕರಣಗಳು ವರದಿಯಾಗಿವೆ.
ಕಳೆದ 24 ತಾಸಿನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಪೈಕಿ ಬೆಂಗಳೂರು ನಗರದಲ್ಲಿ 23, ಬೆಳಗಾವಿ 10, ಶಿವಮೊಗ್ಗ 3, ಹಾವೇರಿ 3, ಧಾರವಾಡದಲ್ಲಿ 7, ಮೈಸೂರಿನಲ್ಲಿ 25 ಪ್ರಕರಣಗಳು ಸೇರಿವೆ.