Bescom | Electrical safety awareness to prevent electrical accidents | Bescom: ವಿದ್ಯುತ್ ಅಪಘಾತವನ್ನು ತಡೆಗಟ್ಟಲು ವಿದ್ಯುತ್ ಸುರಕ್ಷತೆ ಜನಜಾಗೃತಿ
ಬೆಂಗಳೂರು:
ವಿದ್ಯುತ್ ಅಪಘಾತವನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯುತ್ ಸುರಕ್ಷತೆ ಕುರಿತಾದ ಜನಜಾಗೃತಿ ಜಾಥಾವನ್ನು ಬೆಸ್ಕಾಂನ ಬೆಂಗಳೂರು ನಗರ ಉತ್ತರ ವಲಯದಲ್ಲಿ (BMAZ) ಶುಕ್ರವಾರ ಹಮ್ಮಿಕೊಳ್ಳಲಾಯಿತು.

ಬೆಸ್ಕಾಂ ವ್ಯಾಪ್ತಿಯ ಆಯಾ ಉಪವಿಭಾಗಗಳಲ್ಲಿ ವಿದ್ಯುತ್ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಜಾಗೃತಿ ಜಾಥಾ ಅಭಿಯಾನದಲ್ಲಿ ಬೆಸ್ಕಾಂ ಸಹಾಯಕ ಅಭಿಯಂತರರು, ಕಾರ್ಯನಿರ್ವಾಹಕ ಅಭಿಯಂತರರು, ಬೆಸ್ಕಾಂ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯರು, ಸ್ಥಳೀಯ ಸಮಿತಿ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಕೊಂಡರು.
