ಬೆಂಗಳೂರು: ನವೆಂಬರ್ 29ರ ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಬೆಂಗಳೂರಿನ ಹಲವು ಕೇಂದ್ರ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.
66/11 ಕೆವಿ ‘ಬಿ’ ಸ್ಟೇಷನ್ನ 20 ಎಂವಿಎ ಪವರ್ ಟ್ರಾನ್ಸ್ಫಾರ್ಮರ್-3 ಮೂಲಕ ವಿದ್ಯುತ್ ಪಡೆಯುವ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ. ತ್ರೈಮಾಸಿಕ ನಿರ್ವಹಣೆ, ಟ್ಯಾನ್ ಡೆಲ್ಟಾ ಪರೀಕ್ಷೆ ಹಾಗೂ ಹಾಟ್ಲೈನ್ ವೀಕ್ಷಣೆ ನಡೆಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಲೈನ್ ಕ್ಲಿಯರ್ ಪಡೆದಿದೆ ಎಂದು ಬೆಸ್ಕಾಂ ಹೇಳಿದೆ.
ಬೆಸ್ಕಾಂ ಪಟ್ಟಿ ಮಾಡಿರುವ ಬಾಧಿತ ಪ್ರದೇಶಗಳು: ಬ್ರಂಟನ್ ರಸ್ತೆ, ಎಂಜಿ ರಸ್ತೆ, ಗಂಗಾಧರ ಚೆಟ್ಟಿ ರಸ್ತೆ, ಹೌಡಿನ್ ರಸ್ತೆ, ಆಗಾ ಅಬ್ಬಾಸ್ ಅಲಿ ರಸ್ತೆ, ರೆಸಿಡೆನ್ಸಿ ರಸ್ತೆ, ಜೋಗುಪಾಳ್ಯ, ಕೇಂಬ್ರಿಡ್ಜ್ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ರಿಚ್ಮಂಡ್ ಟೌನ್, ವೆಲ್ಲಿಂಗ್ಟನ್ ರಸ್ತೆ, ಲಾಂಗ್ಫೋರ್ಡ್ ಗಾರ್ಡನ್, ಕಾರ್ನ್ವಾಲ್ ರಸ್ತೆ, ಬ್ರಿಗೇಡ್ ರಸ್ತೆ, ಗೌತಮಪುರ, ಆರ್ಟಿಲರಿ ರಸ್ತೆ, ಕ್ವೀನ್ಸ್ ರಸ್ತೆ, ಲಾವೆಲ್ ರಸ್ತೆ, ಕಸ್ತೂರಬಾ ರಸ್ತೆ, ಗರುಡ ಮಾಲ್, ಕಮಿಷನರೇಟ್ ರಸ್ತೆ, ಎಂ.ವಿ. ಗಾರ್ಡನ್, ಇನ್ಫೆಂಟ್ರಿ ಸ್ಟ್ರೀಟ್, ಮರ್ಫಿ ಟೌನ್, ಜಯರಾಜ್ ನಗರ, ಸಿ ಕಾಲೋನಿ, ಗುಪ್ತಾ ಲೇಔಟ್, ಸ್ವಾಮಿ ವಿವೇಕಾನಂದ ರಸ್ತೆ, ಟ್ರಿನಿಟಿ ಸರ್ಕಲ್, ಹಲಸೂರು ರಸ್ತೆ, ಕೇಂಬ್ರಿಡ್ಜ್ ಲೇಔಟ್, ಕಮರ್ಷಿಯಲ್ ಸ್ಟ್ರೀಟ್, ಲತೀಮ್ ಆದಿಲ್ ಸ್ಟ್ರೀಟ್, ಜ್ಯುವೆಲರಿ ಸ್ಟ್ರೀಟ್, ಒಪಿಎಚ್ ಸ್ಟ್ರೀಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
