Home ಬೆಂಗಳೂರು ನಗರ Bigg Boss 8: ಬಿಗ್ ಬಾಸ್ ವಿಜೇತರಿಗೆ ಇಂದು ಸಿಗಲಿದೆ ₹ 53 ಲಕ್ಷ ಬಹುಮಾನ

Bigg Boss 8: ಬಿಗ್ ಬಾಸ್ ವಿಜೇತರಿಗೆ ಇಂದು ಸಿಗಲಿದೆ ₹ 53 ಲಕ್ಷ ಬಹುಮಾನ

187
0

ಮೂರನೇ ರನ್ನರ್ ಅಪ್‌ಗೆ ವೈಷ್ಣವಿಗೆ ₹ 3.5 ಲಕ್ಷ ಮತ್ತು ನಾಲ್ಕನೇ ರನ್ನರ್‌ ಅಪ್‌ಗೆ ಪ್ರಶಾಂತ್ ಸಂಬರಗಿಗೆ ₹ 2.5 ಲಕ್ಷ ಸಿಗಲಿದೆ.

ಬೆಂಗಳೂರು:

ಇಂದು ಬಿಗ್ ಬಾಸ್ 8 ಫಿನಾಲೆಯ ಎರಡನೇ ಸಂಚಿಕೆ ಪ್ರಸಾರವಾಗಲಿದ್ದು, ಕೆ.ಪಿ. ಅರವಿಂದ್, ಮಂಜು ಪಾವಗಡ, ದಿವ್ಯಾ ಉರುಡುಗ ಅವರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ‌ ಮನೆಮಾಡಿದೆ. ಸಂಜೆ ಆರು ಗಂಟೆಗೆ ಈ ಸಂಚಿಕೆ ಪ್ರಸಾರವಾಗಲಿದೆ.

ಬಿಗ್ ಬಾಸ್ ಸೀಸನ್ 8ರ ವಿಜೇತ ಸ್ಪರ್ಧಿಗೆ ₹50 ಲಕ್ಷ ಬದಲಿಗೆ ₹ 53 ಲಕ್ಷ ನೀಡಲಾಗುತ್ತಿದೆ ಎಂದು ಸುದೀಪ್ ಘೋಷಿಸಿದ್ದಾರೆ. ಹಾಗೆಯೇ, ಮೊದಲ ರನ್ನರ್‌ ಅಪ್‌ಗೆ ₹ 11 ಲಕ್ಷ, ಎರಡನೇ ರನ್ನರ್‌ ಅಪ್‌ಗೆ ₹ 6 ಲಕ್ಷ, ಮೂರನೇ ರನ್ನರ್ ಅಪ್‌ಗೆ ₹ 3.5 ಲಕ್ಷ ಮತ್ತು ನಾಲ್ಕನೇ ರನ್ನರ್‌ ಅಪ್‌ಗೆ ₹ 2.5 ಲಕ್ಷ ಸಿಗಲಿದೆ.

prashanth sambaragi and vaishnavi BiggBoss 8 elevated

ಬಿಗ್ ಬಾಸ್ ಸೀಸನ್ 8 ರ ಟಾಪ್ 5ರಲ್ಲಿ ಇಬ್ಬರು ಹೊರಬಿದ್ದಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಎಲಿಮಿನೇಟ್ ಆಗಿದ್ದಾರೆ. ಪ್ರಶಾಂತ್ ಸಂಬರಗಿಗೆ 6.69 ಲಕ್ಷಕ್ಕೂ ಅಧಿಕ ಮತಗಳು ಬಿದ್ದಿದ್ದರೆ, ವೈಷ್ಣವಿಗೆ 10 ಲಕ್ಷಕ್ಕೂ ಅಧಿಕ ಮತಗಳು ಬಿದ್ದಿದ್ದವು.

LEAVE A REPLY

Please enter your comment!
Please enter your name here