ಬೆಂಗಳೂರು:
ಸೇವಾ ಸಮರ್ಪಣಾ ಅಭಿಯಾನದ ಅಂಗವಾಗಿ ಇಂದು ಬೊಮ್ಮನಹಳ್ಳಿಯಲ್ಲಿ ಇಂದು ಬೃಹತ್ ಪ್ರಮಾಣದ ಅಂಚೆ ಕಾರ್ಡ್ ಅಭಿಯಾನ ಏರ್ಪಡಿಸಿ ಪ್ರಧಾನಮಂತ್ರಿಗಳಿಗೆ ಅಭಿನಂದನಾ ಪತ್ರ ಬರೆಯಲಾಯಿತು.
ಪ್ರಧಾನಿಯವರಾದ ನರೇಂದ್ರ ಮೋದಿ ಅವರು 20 ವರ್ಷಗಳ ಸಮರ್ಥ- ಜನಪರ ಆಡಳಿತದ ಮೂಲಕ ದೇಶದ ಜನಪರ ನಾಯಕರಾಗಿ ಹೊರಹೊಮ್ಮಿದ್ದಾರೆ. ವಿಶ್ವವಂದ್ಯ ನಾಯಕರೆಂದು ಅವರನ್ನು ಗುರುತಿಸಲಾಗುತ್ತಿದೆ.
ಪ್ರಧಾನಿಯವರು ಭ್ರಷ್ಟಾಚಾರರಹಿತವಾಗಿ ಯೋಜನೆಗಳ ಅನುಷ್ಠಾನ ಮತ್ತು ದೇಶದ ಅಭ್ಯುದಯಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಅವರು ತಿಳಿಸಿದರು.
ಪ್ರಧಾನಿ ಶ್ರೀ @narendramodi ಅವರ 20 ವರ್ಷಗಳ ಸೇವೆ & ಸಮರ್ಪಣೆಯ ಜೀವನಕ್ಕೆ ಧನ್ಯವಾದ ಸಲ್ಲಿಸುವ ನಿಟ್ಟಿನಲ್ಲಿ #SevaSamarpan ಅಭಿಯಾನದ ಅಂಗವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ @CTRavi_BJP ಅವರು ಪೋಸ್ಟ್ ಕಾರ್ಡ್ ಅಭಿಯಾನದಲ್ಲಿ ಪಾಲ್ಗೊಂಡು ಪ್ರಧಾನಿ ಅವರಿಗೆ ಧನ್ಯವಾದದ ಪತ್ರ ಬರೆದರು.#20yearsofSevaSamarpan pic.twitter.com/xwzRsy8ONc
— BJP Karnataka (@BJP4Karnataka) October 7, 2021
ಶಾಸಕರು ಮತ್ತು ವಿಧಾನಸಭಾ ಮುಖ್ಯ ಸಚೇತಕರಾದ ಸತೀಶ್ ರೆಡ್ಡಿ ಮತ್ತು ಪಕ್ಷದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.