Home ಬೆಳಗಾವಿ ಬಿಜೆಪಿ ‘ಎ’ ಟೀಮ್ : ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಬಿಜೆಪಿ ‘ಎ’ ಟೀಮ್ : ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

70
0
BJP is 'A' Team: Karnataka Chief Minister Basavaraj Bommai

ಬೆಳಗಾವಿ:

ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬಿ ಟೀಂ ಅಂತಾರೆ. ಜೆಡಿಎಸ್ ಅವರು ಕಾಂಗ್ರೆಸ್ ನ್ನು ಬಿ ಟೀಮ್ ಎನ್ನುತ್ತಾರೆ. ಇವೆಡರ ಅರ್ಥವೇನೆಂದರೆ ಬಿಜೆಪಿ ಎ ಟೀಮ್ ಎಂದು ಎರಡೂ ಪಕ್ಷಗಳು ಒಪ್ಪಿಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಬಿ ಟೀಂ ಯಾರಾದರೂ ನಮಗೆ ಚಿಂತೆ ಇಲ್ಲ. ವಿಧಾನ ಪರಿಷತ್ ಚುನಾವಣೆಗೆ ಮುನ್ನ ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ವಾಸ್ತವದಲ್ಲಿ ನೋಡಿದಾಗ ಬಿಜೆಪಿಗೆ ಉತ್ತಮ ಅವಕಾಶವಿದೆ. ಬಿಜೆಪಿ ಯಲ್ಲಿ ಸಂಪೂರ್ಣ ಒಗ್ಗಟ್ಟಿಗೆ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಸಿಎಂ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ನನ್ನ ವಿರುದ್ಧವೇ ಹೆಚ್ವು ಮಾತನಾಡುತ್ತಾರೆ. ಅವರು ಬಳಸುವ ಭಾಷೆ ಗಮನಿಸಿ ಸಾಫ್ಟ್ ಅಥವಾ ಹಾರ್ಡ್ ಅನ್ನುವುದನ್ನು ತಿಳಿದುಕೊಳ್ಳಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಹೋಗಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದರು.

ಯಾವ ಪಕ್ಷವನ್ನೂ ಯಾರೂ ಮುಗಿಸಲು ಸಾಧ್ಯವಿಲ್ಲ. ಅದೆಲ್ಲವೂ ಜನರ ಕೈಯಲ್ಲಿದೆ ಎಂದರು.

ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ

ರಾಜ್ಯಸಭೆಯಲ್ಲಿ ಬಿಜೆಪಿ ಪ್ರಥಮ ಬಾರಿಗೆ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ನಮ್ಮ ಪ್ರಾತಿನಿಧ್ಯ ರಾಜ್ಯ ಸಭೆಯಲ್ಲಿ ಹೆಚ್ಚಾಗಿದೆ. ವಿಧಾನಪರಿಷತ್ತಿನ ನಾಲ್ಕೂ ಸ್ಥಳಗಳಲ್ಲಿ ವಿಜೇತರಾಗುವ ವಿಶ್ವಾಸವಿದೆ. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಸಮೇತವಾಗಿ ಎಲ್ಲರೂ ಒಟ್ಟಾಗಿ ಬಂದು ಶ್ರಮಿಸಿದ್ದಾರೆ. ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಕೂಡ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಬಿಜಾಪುರ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಇಬ್ಬರೂ ಅಭ್ಯರ್ಥಿಗಳು ಅರುಣ್ ಶಾಪೂರ್ ಹಾಗೂ ಹನುಮಂತ ನಿರಾಣಿಯವರು ದೊಡ್ಡ ಅಂತರದಲ್ಲಿ ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸ ವಿದೆ.

ಪ್ರಭಾಕರ ಕೋರೆ ಯವರು ನಮ್ಮೊಂದಿಗಿದ್ದಾರೆ

ಪೂರ್ವಭಾವಿಯಾಗಿ ಪ್ರಭಾಕರ ಕೋರೆಯವರಿಗೆ ಡಾಕ್ಟರೇಟ್ ಕೊಡುವ ಕಾರ್ಯಕ್ರಮವಿತ್ತು. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ದೊಡ್ಡ ಸಭೆ ನಡೆಯುತ್ತಿದೆ. ಕೋರೆಯವರು ಸದಾ ಕಾಲ ನಮ್ಮ ಹಿರಿಯರು ಹಾಗೂ ನಾಯಕರಿದ್ದಾರೆ. ಇದನ್ನು ಪಕ್ಷವೂ ಗುರುತಿಸುತ್ತದೆ. ಸುದೀರ್ಘವಾಗಿ ನಾಲ್ಕು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಅವರು ಮಾಡಿರುವ ಕೆಲಸ ನಮಗೆ ಮಾರ್ಗದರ್ಶಕವಾಗಿದೆ. ಅವರದ್ದೇ ಸ್ಥಾನವಿದೆ. ಯಾವ ಮಹತ್ವವನ್ನೂ ನಾವು ಅಲ್ಲಾಗಳೆದಿಲ್ಲ ಎಂದರು.

LEAVE A REPLY

Please enter your comment!
Please enter your name here