Home ಬೆಂಗಳೂರು ನಗರ ವಿಧಾನ ಪರಿಷತ್ ಚುನಾವಣೆ: ತಾಲ್ಲೂಕುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ವಿಧಾನ ಪರಿಷತ್ ಚುನಾವಣೆ: ತಾಲ್ಲೂಕುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

40
0
Karnataka Legislative Council Elections: Chief Minister Basavaraj Bommai tours Belagavi district

ಬೆಳಗಾವಿ:

ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಪ್ರಚಾರಕ್ಕೆ ಆಗಮಿಸಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದ ಪಕ್ಷದ ಹಿರಿಯರು, ಶಾಸಕರು, ಸಚಿವರೊಂದಿಗೆ ಒಂದು ಸುತ್ತಿನ ಮಾತುಕತೆಯಾಗಿದೆ. ಕಳೆದ 10 – 12 ದಿನಗಳಿಂದ ಪ್ರಚಾರದಲ್ಲಿ ತೊಡಗಿದ್ದರು. ತಾಲ್ಲೂಕುಗಳ ಸ್ಥಿತಿಗತಿ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಬಗ್ಗೆಯೂ ಮಾಹಿತಿಯನ್ನು ಪಡೆದಿದ್ದೇನೆ. ಜನರ ಪ್ರತಿಕ್ರಿಯೆ ನೋಡಿದಾಗ ಅರುಣ್ ಶಾಪೂರ್ ಹಾಗೂ ಹನುಮಂತ ನಿರಾಣಿಯವರು 100 ಕ್ಕೆ 100 ಆಯ್ಕೆಯಾಗುವುದು ನಿಶ್ಚಿತ. ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗುತ್ತಾರೆ.ಈ ಬಾರಿ ಅತಿ ಹೆಚ್ಚು ಮತದಾನವಾಗಲು ಪ್ರಯತ್ನ ವಾಗುತ್ತಿದೆ. ಎಲ್ಲ ವರ್ಗದ ಜನ ಅಭೂತಪೂರ್ವವಾದ ಬೆಂಬಲ ನೀಡಿದ್ದಾರೆ.

ಬೆಳಗಾವಿ, ಬಿಜಾಪುರ ಹಾಗೂ ಬಾಗಲಕೋಟೆಯ ಎಲ್ಲಾ ಪ್ರಮುಖ ಸಂಸ್ಥೆಗಳು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಶಿಕ್ಷಕರು ಮತ್ತು ಪದವೀಧರರ ಸಂಘಗಳು ಹಾಗೂ ವೈಯಕ್ತಿ ವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಚುನಾವಣೆ ಗೆಲ್ಲಲು ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದ್ದು, ಫಲಿತಾಂಶ ಬಂದ ನಂತರ ತಿಳಿಯಲಿದೆ. ನಮ್ಮ ಪಕ್ಕದಲ್ಲಿ ಯಾವುದೇ ಭಿನ್ನಮತವಿಲ್ಲ.

ಪ್ರಾರಂಭದಲ್ಲಿ ಆತಂಕಗಳಿತ್ತು, ಈಗ ಕಳೆದ ಬಾರಿಗಿಂತ ಹೆಚ್ವಿನ ಮತಗಳಿಂದ ಅರುಣ್ ಶಾಪೂರ್ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.

ಗಸ್ತು ಪ್ರಾರಂಭ

ಅವಹೇಳನಕಾರಿ ಹೇಳಿಕೆ ವಿರುದ್ಧ ಘರ್ಷಣೆಯಾಗದಂತೆ ತಡೆಯಲು ಈಗಾಗಲೇ ರಾಜ್ಯದಲ್ಲಿ ಕ್ರಮ ವಹಿಸಿದೆ. ಕಟ್ಟೆಚ್ಚರ ವಹಿಸಲಾಗಿದೆ ಹಾಗೂ ಗಸ್ತು ಕೂಡ ಪ್ರಾರಂಭವಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ವ ರೀತಿಯಲ್ಲಿ ಸನ್ನದ್ದರಾಗಲು ಸೂಚನೆ ನೀಡಲಾಗಿದೆ. ಪರಿಸ್ಥಿತಿ ನಿಯಂತ್ರಣ ದಲ್ಲಿದೆ ಎಂದರು.

ಮಹದಾಯಿಗೆ ಶೀಘ್ರ ಅನುಮೋದನೆ

ಮಹದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಮೇಲೆ ಡಿಪಿಆರ್ ನಲ್ಲಿ ಕೆಲವು ಸ್ಪಷ್ಟೀಕರಣ ಕೇಳಿದ್ದರು. ಅವುಗಳನ್ನು ಒದಗಿಸಲಾಗಿದ್ದು, ಶೀಘ್ರವಾಗಿ ಅನುಮೋದನೆ ದೊರೆಯಿವ ವಿಶ್ವಾಸ ವಿದೆ ಎಂದರು.

LEAVE A REPLY

Please enter your comment!
Please enter your name here