ಬೆಂಗಳೂರು:
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿಯವರು ನೇಮಕಗೊಂಡಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತ್ರ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯನ್ನು ಇಂದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಕ್ಕೊರಲಿನಿಂದ ಘೋಷಣೆ ಮಾಡಲಾಗಿದೆ.
ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಕೇಂದ್ರ ಸಚಿವರಾದಂತ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿಯವರು ವೀಕ್ಷಕರಾಗಿ ನೇಮಕಗೊಂಡಿದ್ದರು.
ಯಡಿಯೂರಪ್ಪನವರೇ ಸ್ವತಹ ಬೊಮ್ಮಾಯಿಯವರು ಹೆಸರು ಸೂಚಿಸಿದ್ದಾರೆ ಎಂದು ಮಾಧ್ಯಮದವರಿಗೆ ತಿಳಿಸಿದರು
ಬೊಮ್ಮಾಯಿಯವರು ಜನವರಿ 28, 1960ರಲ್ಲಿ ಜನಿಸಿದ್ದಾರೆ. ಅವರು ಕರ್ನಾಟಕದ ಗೃಹ ವ್ಯವಹಾರಗಳು, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸಕಾಂಗದ ಪ್ರಸ್ತುತ ರಾಜ್ಯ ಸಚಿವರಾಗಿದ್ದಾರೆ.
ಈ ಹಿಂದೆ ಬೊಮ್ಮಾಯಿಯವರು ತಂದೆ ಎಸ್ಆರ್ ಬೊಮ್ಮಾಯಿ ಕೂಡಾ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ