ಬೆಂಗಳೂರು:
ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಿ ನಿವಾಸ ಕಾವೇರಿಯ ಲ್ಲಿಂದು ಧಿಡೀರ್ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಸಿಎಂ ಗೃಹ ಕಾವೇರಿ ನಿವಾಸಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ,ಬಿಜೆಪಿ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಕಟೀಲ್ ಭೇಟಿ ನೀಡಿ ಚರ್ಚೆ ನಡೆಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಸಚಿವ ಸಂಪುಟ ವಿಸ್ತರಣೆಗೆ ಅಥವಾ ಪುನಾರಚನೆಗೆ ಸಂಬಂಧ ದೆಹಲಿಗೆ ತೆರಳಿದ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ವಾಪಸ್ಸಾಗಿ ಮೂರು ದಿನಗಳ ಕಳೆದ ರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.ಧಿಡೀರ್ ಬಿಜೆಪಿ ಪ್ರಮುಖ ನಾಯಕರು ಭೇಟಿಯಿಂದ ಸಚಿವರ ಆಯ್ಕೆ ಸಂಬಂಧ ಚೆರ್ಚೆ ನಡೆಸಲಾಗಿದೆ ಎಂ ಬ ಮಾತು ಕೇಳಿಬಂದಿದೆ.ಈಗ ಬಿ.ಎಲ್.ಸಂತೋಷ್ ಮೂಲಕ ಹೈ ಕಮಾಂಡ್ ಸುದ್ದಿ ಮುಟ್ಟಿಸಿದ್ದಾರೆ.ಇದೇ ಕಾರಣಕ್ಕೆ ದಿಡೀರ್ ರಾಜಕೀಯ ಭೇಟಿ ಹಾಗೂ ಚೆರ್ಚೆಗಳು ನಡೆಸಲಾಗಿದೆ ಎಂಬ ಮಾಹಿತಿ ಇದೆ.
ಉಪಚುನಾವಣಾ ಫಲಿತಾಂಶದ ಬಳಿಕ ಸಚಿವ ಸಂಪುಟ ಪುನರಚನೆ ಅಥವಾ ವಿಸ್ತರಣೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಸಾಕಷ್ಟು ಉತ್ಸುಕರಾಗಿ ದ್ದರು.ಖಾಲಿ ಇರುವ ಏಳು ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ವಲಸಿರಿಗೆ ನೀಡುವಂತೆ ಅವರು ಹೈ ಕಮಾಂಡ್ ಮುಂದೆ ಮನವಿಯನ್ನು ಸಲ್ಲಿಸಿದ್ದಾರೆ ಎನ್ನ ಲಾಗಿದೆ.ಆದರೆ ಹೈ ಕಮಾಂಡ್ ಎಂದಿನಂತೆ ಮುಖ್ಯಮಂತ್ರಿ ಅವರ ಪ್ರಸ್ತಾವನೆ ಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಕಳೆದ ಕೆಲ ದಿನಗಳಿಂದ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಸಚಿವಾಕಾಂಕ್ಷಿಗಳ ದಂಡು ಭೇಟಿ ನೀಡಿದ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ.ವಲಸಿಗರ ಜೊತೆ ಬಿಜೆಪಿ ಶಾಸಕರು ಮುಖ್ಯಮಂತ್ರಿ ಮೇಲೆ ಸಾಕಷ್ಟು ಒತ್ತಡ ಹೇರುವ ಮೂಲಕ ಸಂಪುಟದಲ್ಲಿ ಸ್ಥಾನ ಸಿಗದಿದ್ದಲ್ಲಿ ಪರಿಣಾ ಮ ಬಗ್ಗೆಯೂ ಎಚ್ಚರಿಕೆ ಸಂದೇಶವನ್ನು ನೀಡಿ ಹೋಗಿರುವುದು ಯಡಿಯೂರಪ್ಪ ಅವರಿಗೆ ಮತ್ತಷ್ಟು ಆತಂಕ ಉಂಟು ಮಾಡಿದೆ.
ದೆಹಲಿಯಲ್ಲಿ ಬಿ.ಎಲ್.ಸಂತೋಷ್ ಅವರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಬೆಂಬಲಿಗರಿಕೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಚರ್ಚೆ ನಡೆಸಿ ರುವ ಸಾಧ್ಯತೆ ಇದೆ.ಇತ್ತ ನಳೀನ್ ಕುಮಾರ್ ಕಟೀಲ್ ಮೂಲ ನಿವಾಸಿಗಳಿಗೆ ಸ್ಥಾನಕೊಡಿಸಲು ಯತ್ನಿಸುತ್ತಿರುವ ಹಿನ್ನಲೆ ಈ ಇಬ್ಬರ ನಾಯಕರೊಂದಿಗೆ ಸಿಎಂ ಕೂಲಂಕುಷ ಚರ್ಚೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಪುಟ ಪುನಾರಚನೆಗೆ ಹೈ ಕಮಾಂಡ್ ಹಸಿರು ನಿಶಾನೆ ತೋರಿದ್ದಾರೆ.ಈ ಕುರಿತು ಪಕ್ಷದ ನಾಯಕ ರೊಂದಿಗೆ ಚರ್ಚಿಸಲು ಬಿಎಲ್ ಸಂತೋಷ್ ಸಿಎಂ ಭೇಟಿ ಮಾಡಿದ್ದಾರೆ.ಇದೇ ಸಂಬಂಧ ಕಟೀಲ್ ಕೂಡ ಯಾರಿಗೆ ಸ್ಥಾನ ನೀಡಬೇಕು ಎಂದು ಚರ್ಚೆ ನಡೆಸಿದ್ದಾರೆ.ನಾಯಕರ ಚರ್ಚೆ ಬಳಿಕ ಈ ಕುರಿತು ಅಧಿಕೃತವಾಗಿ ಮಾಹಿತಿ ಬಹಿರಂಗಪಡಿಸಲಾಗುವುದು.ನಾಯಕರಲ್ಲಿ ಒಮ್ಮತ ಮೂಡಿದರೆ ಗುರುವಾರವೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ, ಇಲ್ಲದಿದ್ದಲ್ಲಿ ವಿಧಾನ ಸಭೆ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಅವಕಾಶ ಸಿಗಲಿದೆ ಎನ್ನಲಾಗಿದೆ.