Home ರಾಜಕೀಯ ಕರ್ನಾಟಕ ವೀರೈಶವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆ ಅಧಿಕೃತ ಆದೇಶ : 500 ಕೋಟಿ ಅನುದಾನ

ಕರ್ನಾಟಕ ವೀರೈಶವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆ ಅಧಿಕೃತ ಆದೇಶ : 500 ಕೋಟಿ ಅನುದಾನ

91
0
ಫೈಲ್ ಚಿತ್ರ

ಬೆಂಗಳೂರು:

ರಾಜ್ಯದಲ್ಲಿ ವೀರಶೈವ ಲಿಂಗಾಯತ ಜನಾಂಗದ ಆರ್ಥಿಕ,ಸಾಮಾಜಿಕ, ಶೈಕ್ಷಣಿಕ ಸಮಗ್ರ ಅಭಿವೃದ್ದಿಗಾಗಿ ನಿಗಮ ಸ್ಥಾಪಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.ಆರಂಭಿಕ 500 ಕೋಟಿ ರೂ ಅನುದಾನ ಒದಗಿಸಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮವನ್ನು ಕಂಪನಿ ಕಾಯ್ದೆ 2013ರ ಸೆಕ್ಷನ್ 7 ಅನ್ವಯ ನೊಂದಾಯಿಸಿ ಸ್ಥಾಪಿಸಲು ಆದೇಶಿಸಲಾಗಿದೆ.ಸರ್ಕಾರದ ಅನುಮೋದನೆ ಪಡೆದು ಕಾರ್ಪುರೇಟ್ ಅಫೇರ್ಸ್ ನಲ್ಲಿ ನೊಂದಾಯಿಸುವ ಕಾರ್ಯವಹಿಸಲು ವ್ಯವಸ್ಥಾಪಕ ನಿರ್ದೇಶನ ಹುದ್ದೆ ಸೃಜನೆ ಮಾಡಲು ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಲಾಗಿದೆ.

ನಿಗಮ ಸ್ಥಾಪನೆಗೆ ಪ್ರಾರಂಭಿಕ ವೆಚ್ಚವನ್ನು ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅವರು ಭರಿಸಿ ನಂತರ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದಿಂದ ಮರು ಭರಣ ಮಾಡಲು ಸರ್ಕಾರದ ಆದೇಶ ಹೊರಡಿಸಲಾಗಿದೆ.

Rs 500 crore for Karnataka Veerashava Lingayata Development Corporation
Rs 500 crore for Karnataka Veerashava Lingayata Development Corporation

LEAVE A REPLY

Please enter your comment!
Please enter your name here