ಆರೋಗ್ಯ(Health)ವನ್ನು ಕಾಪಾಡಿಕೊಳ್ಳವಲ್ಲಿ ವಿಟಮಿನ್ ಡಿ(Vitamin D) ಉತ್ತಮ ಮೂಲವಾಗಿದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿನ ಮೂಳೆಗಳನ್ನು ಬಲಪಡಿಸಲು, ಹಲ್ಲುಗಳು ಮತ್ತು ಸ್ನಾಯುಗಳನ್ನು ಕಾಪಾಡಿಕೊಳ್ಳಲು ವಿಟಮಿನ್ ಡಿ ಪೋಷಕಾಂಶಗಳು ಅವಶ್ಯಕವಾಗಿದೆ. ನಿಮಗೆ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹಾಗೂ ಮೆದುಳಿನ ಆರೋಗ್ಯವನ್ನು ಸಾಕಷ್ಟು ವರ್ಷಗಳ ವರೆಗೆ ಹಾಗೆಯೇ ಉಳಿಸಲು ವಿಟಮಿನ್ ಡಿ ಅತ್ಯಂತ ಅಗತ್ಯ ಎಂದು ಅಮೇರಿಕಾದ ಟಫ್ಟ್ಸ್ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ತಿಳಿದುಬಂದಿದೆ. ಈ ಸಂಶೋಧನೆಯು ಬುದ್ಧಿಮಾಂದ್ಯತೆ ಮತ್ತು ಅದರ ಕಾರಣವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.
2050 ರ ಹೊತ್ತಿಗೆ, ಜಾಗತಿಕವಾಗಿ ಬುದ್ಧಿಮಾಂದ್ಯತೆಯ ಹರಡುವಿಕೆಯು 150 ಮಿಲಿಯನ್ ಮೀರುವ ನಿರೀಕ್ಷೆಯಿದೆ. ಆದ್ದರಿಂದ ಬುದ್ಧಿಮಾಂದ್ಯತೆಯ ಹೊರೆಯನ್ನು ಕಡಿಮೆ ಮಾಡಲು ತಡೆಗಟ್ಟುವ ತಂತ್ರಗಳ ತುರ್ತು ಅವಶ್ಯಕತೆಯಿದೆ ಎಂದು ಆಲ್ಝೈಮರ್ನ ಜರ್ನಲ್ನಲ್ಲಿ ಡಿಸೆಂಬರ್ 7 ರಂದು ಪ್ರಕಟವಾದ ಅಧ್ಯಯನವು ಹೇಳಿದೆ.
ಆಲ್‌ಝೈಮರ್‌ನ ಕಾಯಿಲೆ/ಅಲ್ಜಿಮರ್ (AD ) ಎಂಬುದು ಬುದ್ಧಿಮಾಂದ್ಯತೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದ್ದು, ಇದನ್ನು ಆಲ್‌ಝೈಮರ್ ಕಾಯಿಲೆ/ಅಲ್ಜಿಮರ್ , ಸಿನೈಲ್ ಡಿಮೆನ್ಷಿಯಾ ಆಫ್ ದಿ ಆಲ್‌ಝೈಮರ್ ಟೈಪ್ (SDAT ), ಪ್ರೈಮರಿ ಡೀಜನರೇಟಿವ್ ಡಿಮೆನ್ಷಿಯಾ ಆಫ್ ದಿ ಆಲ್‌ಝೈಮರ್ ಟೈಪ್ ,ಅಥವಾ ಆಲ್‌ಝೈಮರ್‌ನ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.
ಇದನ್ನೂ ಓದಿ: ಜ್ವರ ಬಂದ ತಕ್ಷಣ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ನಿಮಗಿದೆಯಾ?
ಆಲ್ಝೈಮರ್ನ್ನು ಮೊದಲ ಬಾರಿಗೆ ಜರ್ಮನಿಯಲ್ಲಿ 1906 ರಲ್ಲಿ ಅಲೋಯಿಸ್ ಗುರುತಿಸಿದರು ಮತ್ತು ಇದು ದುರ್ಬಲ ಮೆದುಳಿನ ಕಾರ್ಯನಿರ್ವಹಣೆಯ ಸಾಮಾನ್ಯ ಪದವಾದ ಬುದ್ಧಿಮಾಂದ್ಯತೆಯಾಗಿದೆ .ಮಿಟಮಿನ್ ಡಿ ಯು ದೇಹದಲ್ಲಿ ಕಡಿಮೆಯಾಗುತ್ತಾ ಹೋದ ಹಾಗೇ ನಿಮ್ಮ ಮೆದುಳಿನ ಕಾರ್ಯಗಳು ನಿಧಾನವಾಗುತ್ತಾ ಹೋಗುತ್ತದೆ. ಆದ್ದರಿಂದ ನೀವು ಸೇವಿಸುವ ಆಹಾರದಲ್ಲಿ ಮಿಟಮಿನ್ ಡಿ ಪ್ರಮಾಣ ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: ಸಂತಾನೋತ್ಪತ್ತಿಗೆ ಸಹಾಯಕವಾಗುವ ಯೋಗಾಸನದ ಭಂಗಿಗಳು ಇಲ್ಲಿವೆ
ವಿಟಮಿನ್ ಡಿ ದೇಹಕ್ಕೆ ಬಹಳ ಮುಖ್ಯವಾಗಿದೆ. ಆಹಾರದ ಮೂಲಕ ಸಾಕಷ್ಟು ವಿಟಮಿನ್ ಡಿ ಪಡೆಯುವುದು ಕಷ್ಟ. ಸೂರ್ಯನ UVB ವಿಕಿರಣದಿಂದ 7-ಡಿಹೈಡ್ರೊಕೊಲೆಸ್ಟರಾಲ್ ವಿಭಜನೆಯಾದಾಗ ಜೈವಿಕವಾಗಿ ಉಪಯುಕ್ತವಾದ ವಿಟಮಿನ್ D ರೂಪುಗೊಳ್ಳುತ್ತದೆ. ಇದು ನಮ್ಮ ದೇಹಕ್ಕೆ ಅತಿ ಅಗತ್ಯವಾದ ವಿಟಮಿನ್ ಆಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: